ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೊವಿಡ್ ಸಾವಿನ ಇನ್ನೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಕೊವಿಡ್ ಸಾವಿನ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ.
ತಂಡಾಗುಂಡಿ ಗ್ರಾಮದ ಮಹಿಳೆಯೊಬ್ಬಳು ಸೋಮವಾರ ಮರಣ ಹೊಂದಿದ್ದರೆ.ಪಟ್ಟಣದ ಸೊರಬ ರಸ್ತೆಯ 56 ವರ್ಷದ ವ್ಯಕ್ತಿ ಸೋಮವಾರ ರಾತ್ರಿ ಮರಣ ಹೊಂದಿದ್ದು ಮಂಗಳವಾರ ಸಂಜೆ ಮರಣಹೊಂದಿದ ವ್ಯಕ್ತಿಗೆ ಕೊವಿಡ್ ಇರುವುದು ಖಚಿತವಾಗಿದೆ.
ಮರಣ ಹೊಂದಿದ್ದ ವ್ಯಕ್ತಿಯ ಅಂತಿಮದರ್ಶನಕ್ಕೆ ಸಾಕಷ್ಟು ಜನರು ಬಂದಿದ್ದು ಅವರೆಲ್ಲರೂ ಆತಂಕಪಡುವಂತಾಗಿದೆ.
ಸಿದ್ದಾಪುರ ತಾಲೂಕಿನಲ್ಲಿ ಒಟ್ಟೂ 348 ಕೊವಿಡ್ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 300 ಜನರು ಗುಣಮುಖರಾಗಿದ್ದಾರೆ. 48 ಪ್ರಕರಣಗಳು ಸಕ್ರೀಯವಾಗಿದೆ.46ಜನರು ಹೊಂ ಕ್ವಾರೆಂಟೆನ್ ಲ್ಲಿದ್ದು 2 ವ್ಯಕ್ತಿಗಳನ್ನು ಕಾರವಾರ ಕೊವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ