ಸತ್ಯಾಗ್ರಹ ಸ್ಮಾರಕ ಭವನಕ್ಕೆ 2ಕೋಟಿರೂ.ಅನುದಾನ ಮಂಜೂರು

ಆದ್ಯೋತ್ ಸುದ್ದಿನಿಧಿ:
ಸತ್ಯಾಗ್ರಹ ಭವನ ನಿರ್ಮಾಣಕ್ಕೆ 2ಕೋಟಿರೂ.ಅನುದಾನ ಮಂಜೂರು
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸತ್ಯಾಗ್ರಹ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ತಾಲೂಕಿನ ಜನರಲ್ಲಿ ಹರ್ಷ ಮೂಡಿಸಿದೆ.
ಪಟ್ಟಣದ ಶಿರಸಿ-ಸಿದ್ದಾಪುರ ಮುಖ್ಯರಸ್ತೆಯಲ್ಲಿರುವ ಸಮಾಜಮಂದಿರ ಇರುವ ಜಾಗದಲ್ಲಿ ಸತ್ಯಾಗ್ರಹ ಭವನ ನಿರ್ಮಾಣ ಮಾಡುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು 2 ಕೋಟಿರೂ. ಮಂಜೂರು ಮಾಡಿ ಆದೇಶಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದಾಪುರ ತಾಲೂಕು ಮಂಚೂಣಿಯಲ್ಲಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಭಾಗವಹಿಸಿದ್ದ ಇತಿಹಾಸವಿದೆ. ಇಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಸ್ಮಾರಕ ನಿರ್ಮಿಸಬೇಕು ಎಂಬ ಆಗ್ರಹವು ತಾಲೂಕಿನ ಜನತೆ ಮಾಡುತ್ತಿದ್ದರು.
ಹತ್ತುವರ್ಷದ ಹಿಂದೆ ಸತ್ಯಾಗ್ರಹ ಭವನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ನರಸಿಂಹ ಹೆಗಡೆ ಅಮೃತಹಸ್ತದಲ್ಲಿ ಸತ್ಯಾಗ್ರಹ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಮಾಡಲಾಯಿತು.ಆದರೆ ಯಾಕೋ ಕಾಮಗಾರಿ ಪ್ರಾರಂಭವಾಗಲೇ ಇಲ್ಲ.
ಸೆ.5ರಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ಸತ್ಯಾಗ್ರಹ ಭವನ ನಿರ್ಮಾಣಕ್ಕೆ 5ಕೋಟಿರೂ. ನೀಡಬೇಕೆಂದು ಮನವಿ ಮಾಡಿದ್ದರು ಮುಖ್ಯಮಂತ್ರಿಯವರು ಮನವಿಯನ್ನು ಪುರಸ್ಕರಿಸಿದ್ದು 2ಕೋಟಿರೂ. ಮಂಜೂರು ಮಾಡಿದ್ದಾರೆ. ಇನ್ನೂ ಕಾಮಗಾರಿ ಪ್ರಾರಂಭವಾಗಬೇಕಿದೆ.
R_10577_1600864578960

About the author

Adyot

Leave a Comment