ಆದ್ಯೋತ್ ಸುದ್ದಿನಿಧಿ:
ಕಲಾತ್ಮಕ,ಕೌಟುಂಬಿಕ ಕಥಾಹಂದರದ ಮನೆ ಸಿನೇಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಲಾಗುತ್ತಿದೆ.
ಈಗಾಗಲೇ ಶ್ರೀ ಕಬ್ಬಾಳಮ್ಮನ ಮಹಿಮೆ ಎಂಬ ಪೌರಾಣಿಕ ಚಿತ್ರವನ್ನು ನಿರ್ದೇಶಿಸಿದ್ದ ಪೂರ್ಣಶ್ರೀ ಆರ್.ಮತ್ತು ರಶ್ಮಿ ಎಸ್.ಮನೆ ಚಿತ್ರದ ನಿರ್ದೇಶಿಸಿದ್ದಾರೆ.
ಗಾಯಿತ್ರಿ ಕ್ರಿಯೇಷನ್ಸ್ ಬೆಂಗಳೂರು ಹಾಗೂ ಸಂಯುಕ್ತ ಸ್ಟುಡಿಯೋಸ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ
ಮನೆ ಚಿತ್ರವು ಒಂದು ಕಲಾತ್ಮಕ ಚಿತ್ರವಾಗಿದ್ದು ಕೌಟುಂಬಿಕ ಕಥಾಹಂದರವನ್ನು ಹೊಂದಿದೆ.ಒಬ್ಬ ಕೂಲಿ ಕಾರ್ಮಿಕನಿಗೆ ತನ್ನದೇ ಆದ ಸ್ವಂತ ಮನೆ ಕಟ್ಟಬೇಕೆಂಬ ಹಂಬಲ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹೇಗೆ ತನ್ನದೇ ಆದ ಸ್ವಂತ ಮನೆಯನ್ನು ಕಟ್ಟುತ್ತಾನೆ ಎಂಬುದೇ ಚಿತ್ರದ ಕಥಾಸಾರಾಂಶ
ಮನೆ ಸಿನಿಮಾದ ಸಿದ್ದಪ್ಪ ಪಾತ್ರದಲ್ಲಿ ಹುಬ್ಬಳ್ಳಿಯ ರಂಗಕಲಾವಿದರಾದ ರೇಣುಕುಮಾರ್ ಸಂಸ್ಥಾನ ಮಠ, ಭಾಗ್ಯಮ್ಮನ ಪಾತ್ರದಲ್ಲಿ ಪ್ರಮೀಳ ಸುಬ್ರಮಣ್ಯಂ ಅಭಿನಯಿಸಿದ್ದಾರೆ.
ಉಳಿದಂತೆ ಪ್ರಮುಖ ಪಾತ್ರದಲ್ಲಿ ಸಾಗರ್ ಕೆ ಎಚ್, ಅಕ್ಷತ ವಿಲಾಸ್, ನಲವಾಡಿ ಗ್ರಾಮದ ಮಂಜುನಾಥ ಪಾಟೀಲ್, ವಿದ್ಯಾ ಪ್ರಭು ಗಂಜೀಹಾಳ್, ಪ್ರಭು ಗಂಜೀಹಾಳ್, ಅವಿನಾಶ್ ಮುಂತಾದವರು ಅಭಿನಯಿಸಿದ್ದಾರೆ.
ನಿರ್ದೇಶಕೀಯರೂ ಸೇರಿದಂತೆ ಕಲಾವಿದರೆಲ್ಲರೂ ಉತ್ತರಕರ್ನಾಟಕದ ರಂಗಭೂಮಿ ಕಲಾವಿದರಾಗಿರುವುದು ವಿಶೇಷ
ಮನೆ ಚಿತ್ರದ ಚಿತ್ರೀಕರಣವು ಹುಬ್ಬಳ್ಳಿ, ಶಿರಗುಪ್ಪಿ ಮತ್ತು ನಲವಡಿ ಗ್ರಾಮದಲ್ಲಿ ಹಾಗೂ ಅದರ ಸುತ್ತಮುತ್ತಲಿನಲ್ಲಿ ಒಟ್ಟು 10 ದಿನಗಳ ಕಾಲ ಚಿತ್ರೀಕರಿಸಲಾಗಿದೆ.
ಟಿ.ಎಸ್.ಕುಮಾರ ಕತೆ ಬರೆದಿದ್ದು ಮನೆ ಸಿನಿಮಾದ ತಾಂತ್ರಿಕ ವರ್ಗದಲ್ಲಿ ಶಿವಸತ್ಯ ಸಂಗೀತ,ವಿನಾಯಕ ರೇವಡಿ ಬಾಗಲಕೋಟೆ ಛಾಯಾಗ್ರಹಣ ನೀಡಿದ್ದಾರೆ. ಚಿತ್ರಕಥೆ-ಸಂಕಲನ ಮುತ್ತುರಾಜು ಟಿ,ಸಾಹಿತ್ಯ-ಸಂಭಾಷಣೆ ಸತೀಶ್ ಜೋಶಿ ಹಾವೇರಿಯವರದ್ದಾದರೆ ಪ್ರಚಾರ ಸಂಪರ್ಕ ಡಾ.ಪ್ರಭು ಗಂಜಿಹಾಳ.ಡಾ.ವೀರೇಶ್ ಹಂಡಗಿಯವರದ್ದು