ಆದ್ಯೋತ್ ಸುದ್ದಿನಿಧಿ:
ಪಶ್ಚಿಮಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ,ದಿ.ದೇವರಾಜ ಅರಸರವರು 30-40ವರ್ಷದ ಹಿಂದೆಯೇ ನಿರುದ್ಯೋಗಿ ಯುವಕರಿಗೆ ಉದ್ಯೋಗ ಭತ್ತೆ ನೀಡುವ ಮೂಲಕ ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದರು.ದಿ.ಗುಂಡೂರಾವ್ ಸ್ಟೈಪಂಡರಿ ನೌಕರರನ್ನು ಖಾಯಂಗೊಳಿಸಿದ್ದರು. ಇದನ್ನು ಮಾದರಿಯನ್ನಾಗಿ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಯೋಗ ಭತ್ತೆ ನೀಡಬೇಕು ಎಂದು ಹೇಳಿದರು.
ಪದವೀಧರರ ಹಾಗೂ ಶಿಕ್ಷಕರ ಸಮಗ್ರ ವಿಕಾಸವನ್ನು ಗುರಿಯಾಗಿರಿಸಿಕೊಂಡು ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.ವಿಧಾನಪರಿಷತ್‍ಗೆ ಆಯ್ಕೆಯಾಗುವವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಬಾರದು ಅವರು ಸ್ವತಂತ್ರರಾಗಿರಬೇಕು ಸಾಂಸ್ಕೃತಿಕ,ಸಾಮಾಜಿಕ ಕ್ಷೇತ್ರವನ್ನು ಪ್ರತಿನಿಧಿಸುವವರಾಗಿರಬೇಕು ಆದರೆ ಇತ್ತೀಚಿನ ದಿನದಲ್ಲಿ ರಾಜಕೀಯ ಪಕ್ಷಗಳು ವಿಧಾನಪರಿಷತ್‍ನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಇದರಿಂದಾಗಿ ಪದವೀಧರರ,ಶಿಕ್ಷಕರ ಸಮಸ್ಯೆ ಬಗೆಹರಿಯುತ್ತಿಲ್ಲ.ಇದೇ ಕಾರಣದಿಂದ ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ ಈಗಾಗಲೇ ಪಶ್ಚಿಮಪದವೀಧರ ಕ್ಷೇತ್ರದ ಧಾರವಾಡ,ಗದಗ,ಹಾವೇರಿ,ಉತ್ತರಕನ್ನಡ ಜಿಲ್ಲೆಗಳಲ್ಲಿ ಮೂರು ಬಾರಿ ಸಂಚರಿಸಿದ್ದೇನೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷನಾಗಿ,ಸರಕಾರಿ ನೌಕರರ ಸಂಘದ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ ಹಾಲಿ ಅಖಿಲಭಾರತ ಶಿಕ್ಷಕರ ಪೇಡರೇಷನ್ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
**********
ಬಸವರಾಜ ಗುರಿಕಾರ ರವರ ಪರವಾಗಿ
ಬುಧವಾರ
ಪಶ್ಚಿಮಪದವೀಧರರಕ್ಷೇತ್ರದ ಹಾವೇರಿ, ಗದಗ, ಧಾರವಾಡ, ಕಾರವಾರ ಜಿಲ್ಲೆಗಳಲ್ಲಿ ಪ್ರಚಾರಕಾರ್ಯವನ್ನು ಮಾಡಲಾಯಿತು.
ಬಸವರಾಜ ಗುರಿಕಾರರವರು ಹಾವೇರಿ ಜಿಲ್ಲೆ ಹಾಗೂ ರಾಣೆಬೆನ್ನೂರ, ರಟ್ಟಹಳ್ಳಿ ತಾಲೂಕಗಳಲ್ಲಿ ಪ್ರಚಾರ ಕಾರ್ಯ ಮಾಡಿದರು. ಈ ಸಂಧರ್ಭದಲ್ಲಿ ಪದವೀಧರರಿಂದ ಉತ್ತಮ ಸ್ಪಂಧನೆ ದೊರೆಯಿತು.
ರವಿಕುಮಾರ ಜಮಕಂಡಿ ಇವರ ತಂಡವು ಕಾರವಾರ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿತು.
ಎ.ಕೆ ಮುದೋಳ ಹಿರಿಯ ನ್ಯಾಯವಾದಿಗಳು, ಧರ್ಮಪ್ಪ ಕಂಬಳಿ ಯವರನ್ನು ಒಳಗೊಂಡ ತಂಡವು ಗದಗ ಜಿಲ್ಲೆಯ ರೋಣ ತಾಲೂಕು, ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿದರು.
ಶಂಕರ ಸಾವೂರ, ಶಿವರಾಜ ಕರಿಗಾರ, ಯಲ್ಲಪ್ಪ ಜಿರಗೋಡ, ಪ್ರಕಾಶ ಮುಗದ, ಮಂಜುನಾಥ ಹಂಚಿನಮನಿ, ಕಲಮೇಶ ಮುಗದ, ಸಂಗಮೇಶ್ ಕುಂಬಾರ ಹಾಗೂ ಸುರೇಶ್ ಕುಂಬಾರ
ಗಣೇಶ ಜೀರಗೋಡ, ಸೋಮೇಶ ಹಂಚಿನಮನಿ, ಜಗದೀಶ ಜೀರಗೋಡ, ಆಕಾಶ ಜೀರಗೋಡ ಹಾವೇರಿ ಜಿಲ್ಲೆ ಹಾಗೂ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿದರು
ಆನಂದ ಹಾರಿಕೊಪ್ಪ ರವರ ತಂಡವು ಅಮ್ಮಿನಬಾವಿ ಹಾಗೂ ಇತರ ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯವನ್ನು ಮಾಡಿತು.
ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಘು ನರಗುಂದ, ನಾಗರಾಜ ಉಣಕಲ ರವರ ತಂಡವು ಪ್ರಚಾರ ಕಾರ್ಯವನ್ನು ಮಾಡಿತು.