ಕವಿತೆ ಅಂತರಂಗದಿಂದ ಬರುವ ರಸಾನುಭವ–ಸುಬ್ರಾಯ ಮತ್ತಿಹಳ್ಳಿ

ಆದ್ಯೋತ್ ಸುದ್ದಿನಿಧಿ:
ಕವಿತೆಯೆನ್ನುವುದು ಅಂತರಂಗದಿಂದ ಸಹಜವಾಗಿ ಬರುವ ರಸಾನುಭವವೇ ಹೊರತು ಒತ್ತಾಯಪೂರ್ವಕವಾದ ಸಿಜೇರಿಯನ್ ಹೆರಿಗೆಯಂತಲ್ಲ. ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪೌರ್ಣಿಮಾ ಸಾಹಿತ್ಯ ವೇದಿಕೆ, ಇತ್ತೀಚೆಗೆ ನಿಧನರಾದ ಗಾನ ಗಾರುಡಿಗ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ರವರಿಗೆ ನುಡಿನಮನ ಸಲ್ಲಿಸಲು ಏರ್ಪಡಿಸಿದ್ದ ರಾಜ್ಯ ಮಟ್ಟದ ಅಂತರ್ಜಾಲ ಕವನ ಸ್ಫರ್ಧೆಯ ನಗದು ಬಹುಮಾನ, ಪ್ರಶಸ್ತಿ ಪತ್ರ ಪ್ರದಾನದ ಸಮಾರೋಪವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪೌರ್ಣಿಮಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ವಿಜೇತರಿಗೆ ಅಭಿನಂದಿಸುತ್ತ ಕರೋನಾ ಸಮಯದಲ್ಲಿಯೂ ಮನೆಯಲ್ಲಿದ್ದು ಅತಿ ಕಡಿಮೆ ಸಮಯದಲ್ಲಿ ಗಾನ ಗಾರುಡಿಗನ ಕುರಿತು ಕವನ‌ ಕಳಿಸಿ ಕಾವ್ಯ ನಮನ ಸಲ್ಲಿಸಿದ ಎಲ್ಲ ಕವಿಗಳಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ನಿರ್ಣಾಯಕರ ಪರವಾಗಿ ಉಪನ್ಯಾಸಕ ರತ್ನಾಕರ ನಾಯ್ಕ ನರಮುಂಡಗಿ, ಎಲ್ಲಾ ಕವನಗಳು ಉತ್ತಮ ಆಶಯ ಹೊಂದಿದ್ದು ಮಾದರಿಯಾಗಿವೆ. ರಾಜ್ಯ, ಹೊರ ರಾಜ್ಯಗಳಿಂದಲೂ ಅಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿದ್ದು ವೇದಿಕೆಯ ಬಗ್ಗೆ ಇರುವ ಬದ್ಧತೆಯನ್ನು ಸಾರುತ್ತದೆ ಎಂದು ನುಡಿದರು.
ಸಾಹಿತಿಗಳಾದ ಶ್ರೀಧರ ಶೇಟ್ ಶಿರಾಲಿ. ಕೂಡಿ ಚಂದ್ರಶೇಖರ , ರತ್ನಾಕರ ನಾಯ್ಕ ನಿರ್ಣಾಯಕರಾಗಿ ಅತ್ಯುತ್ತಮ ಜವಾಬ್ದಾರಿ ನಿರ್ವಹಿಸಿದರು.
ಪದಾಧಿಕಾರಿಗಳಾದ ಟಿ ಕೆ ಅಜಾದ. ಸ್ವಾಗತಿಸಿದರು. ಪ್ರಕಾಶ್ ಮೌರ್ಯ ವಂದಿಸಿದರು.
*ಫಲಿತಾಂಶ ವಿವರ- ವಿಜೇತರು*
ರಾಷ್ಟ್ರದ ಅಪರೂಪದ ಗಾಯಕ ಎಸ್ ಪಿ ಬಿ ಕುರಿತು ಒಟ್ಟು ೪೮ ಕವಿಗಳು ಭಾಗವಹಿಸಿದ್ದರು.
*****
ಪ್ರಥಮ ಸ್ಥಾನ- ಗಣಪತಿ ಆಯ್ ನಾಯ್ಕ ಯಾದಗಿರಿ

ದ್ವಿತೀಯ ಸ್ಥಾನ-ಸಾತು ಗೌಡ ಬಡಗೇರಿ ಅಂಕೋಲಾ (ಉತ್ತರ ಕನ್ನಡ)

ತೃತೀಯ ಸ್ಥಾನ- ಆಶಾ ಮಯ್ಯ ಪುತ್ತೂರು ದಕ್ಷಿಣ ಕನ್ನಡ.

೪ ನೆಯ ಸ್ಥಾನ- ಕೃಷ್ಣ ಪದಕಿ ಶಿರಸಿ ಉ ಕ.೫ ನೆಯ ಸ್ಥಾನ- ಅನು ಲಕ್ಕೀಸಂ ಹೈದರಾಬಾದ್.
೬ ನೆಯ ಸ್ಥಾನ- ಮಹೇಶ್ ಎಸ್ ಎಚ್ ಉಜ್ಜನಿ ಮುಂಡರಗಿ ಗದಗ ಇವರು ಭಾಜನರಾಗಿದ್ದಾರೆ.
ಲಇದಲ್ಲದೆ ಬಹುತೇಕ ಎಲ್ಲಾ ಕವನಗಳೂ ಕೂಡ ಅತ್ಯುತ್ತಮ ಗುಣಮಟ್ಟದ ಕವನಗಳಾಗಿದ್ದರಿಂದ ಅವುಗಳಲ್ಲಿ ೧೨ ಕವನಗಳನ್ನು ನಿರ್ಣಾಯಕರ ಮೆಚ್ಚುಗೆ ಪಡೆದ ಕವನಗಳನ್ನಾಗಿ ಆಯ್ಕೆ ಮಾಡಿ ಅಭಿನಂದನಾ ಪತ್ರಗಳನ್ನು ಆನ್ಲೈನ್ ಮೂಲಕ ಕಳಿಸಲಾಯಿತು.

About the author

Adyot

3 Comments

Leave a Comment