ಪ್ರಮುಖರಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ

ಆದ್ಯೋತ್ ಸುದ್ದಿನಿಧಿ:
ರಾಜ್ಯದ ಪದವೀಧರ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹಲವು ಪ್ರಮುಖರು ಮತಚಲಾಯಿಸಿದರು.

ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಸಾಣೆಹಳ್ಳಿ ಪೀಠಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯರು ಭರಮಸಾಗರ ಮತಗಟ್ಟೆಯಲ್ಲಿ,ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತಚಲಾಯಿಸಿದರು ಭರಮಸಾಗರ ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಎಸ್ಎಂಎಲ್ ಪ್ರವೀಣ್,ದುರ್ಗೇಶ್ ಪೂಜಾರ್, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ರಂಗನಹಳ್ಳಿ ಹನುಮಂತಣ್ಣ ಡಿವಿ ಶರಣಪ್ಪ ಬ್ಯಾಲಾಳು ಶರಣಪ್ಪ ಇನ್ನು ಮುಂತಾದವರಿದ್ದರು

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉತ್ತರಕನ್ನಡ ಜಿಲ್ಲೆಯ ಶಿರಸಿ ಗಣೇಶನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಶ್ಚಿಮಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತಚಲಾಯಿಸಿದರು.

ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಧಾರವಾಡದ ಬಾಸೆಲ್ ಮಿಶನ್ ಬಾಲಕಿಯರ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು

ಮಾಜಿ ಸಚೀವ ಆರ.ವಿ.ದೇಶಪಾಂಡೆ ಹಳಿಯಾಳದಲ್ಲಿ ಮತದಾನ ಮಾಡಿದರು

ವಿಧಾನಪರಿಷತನ ಪಶ್ಚಿಮಪದವೀಧರ ಕ್ಷೇತ್ರದ ಚುನಾವಣಾ ವೀಕ್ಷಕಿ ಶಾಲಿನಿ ರಜನೀಶ ಯಲ್ಲಾಪುರ ತಹಸೀಲ್ದಾರ ಕಚೇರಿಯ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಕಾರವಾರದ ಸೆಂಟ್ ಮೈಕಲ್ಸ್ ಶಾಲೆಯ ಮತಗಟ್ಟೆಗೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಭೇಟಿ ನೀಡಿ ಪರಶೀಲಿಸಿದರು

About the author

Adyot

Leave a Comment