ಕಾರವಾರ ನಗರಸಭೆಗೆ ಡಾ. ನಿತಿನ್ ಪಿಕಳೆ ಅಧ್ಯಕ್ಷ, ದಾಂಡೇಲಿಗೆ ಯಾಸ್ಮಿನ್ ಕಿತ್ತೂರು

ಆದ್ಯೋತ್ ಸುದ್ದಿನಿಧಿ:
ಕಾರವಾರ ನಗರಸಭೆಗೆ ಡಾ.ನಿತಿನಪಿಕಳೆ ಅಧ್ಯಕ್ಷ
ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಚುನಾವಣೆ ನವಂಬರ್-1ಕ್ಕೆ ನಿಗದಿಯಾಗಿದೆ.31ವಾರ್ಡ್‍ಗಳ ಕಾರವಾರ ನಗರಸಭೆಯಲ್ಲಿ ಬಿಜೆಪಿ,ಕಾಂಗ್ರೆಸ್ ತಲಾ 11 ಸದಸ್ಯರನ್ನು ಹೊಂದಿದೆ. ಜೆಡಿಎಸ್ 4 ಹಾಗೂ ಪಕ್ಷೇತರರು 5 ಸ್ಥಾನವನ್ನು ಗೆದ್ದಿದ್ದಾರೆ. ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದರೆ ಈಗ ಜೆಡಿಎಸ್‍ನ 4 ಸದಸ್ಯರ ಬೆಂಬಲವನ್ನು ಬಿಜೆಪಿಗೆ ನೀಡುತ್ತೇವೆ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಹೇಳಿದ್ದಾರೆ. ಅಲ್ಲಿಗೆ ಅವಶ್ಯಕತೆಯುಳ್ಳ 17 ಸದಸ್ಯರ ಬಲ ಬಿಜೆಪಿಗೆ ಸಿಗುತ್ತದೆ. ಅಧ್ಯಕ್ಷ ಹುದ್ದೆ ಮಿಸಲಾತಿ ಪ್ರಕಾರ ಸಾಮಾನ್ಯವರ್ಗಕ್ಕೆ ಬಂದಿದೆ. ಹಿರಿಯ ಸದಸ್ಯ ಡಾ.ನಿತಿನ ಪಿಕಳೆ ಅಧ್ಯಕ್ಷರಾಗುವುದು ಖಚಿತ ಎನ್ನಲಾಗುತ್ತಿದೆ ಸದಸ್ಯರ ಒಲವು ರವಿರಾಜ ಅಂಕೋಲೇಕರ್ ಬಗೆಗಿದ್ದರೂ ಬಿಜೆಪಿ ಹೈಕಮಾಂಡ್ ಒಲವು,ಸಚೀವ ಶಿವರಾಮ ಹೆಬ್ಬಾರ,ಶಾಸಕಿ ರೂಪಾಲಿ ನಾಯ್ಕ ಒಲವು ಪಿಕಳೆಗಿದೆ ಎನ್ನಲಾಗುತ್ತಿದೆ.
——
ದಾಂಡೇಲಿ ನಗರಸಭೆಗೆ ಯಾಸ್ಮಿನ್ ಕಿತ್ತೂರು ಅಧ್ಯಕ್ಷೆ
ಉತ್ತರಕನ್ನಡ ಜಿಲ್ಲೆಯ ದಾಂಡೆಲಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು,31 ಸ್ಥಾನ ಹೊಂದಿರುವ ನಗರಸಭೆಗೆ ಕಾಂಗ್ರೆಸ್‍ನ 16 ಸದಸ್ಯರಿದ್ದು,ಬಿಜೆಪಿಯ 11 ಸದಸ್ಯರಿದ್ದಾರೆ.ನಾಲ್ವರು ಪಕ್ಷೇತರರಿದ್ದರೂ ಅದರಲ್ಲಿ ಮೂವರು ಕಾಂಗ್ರೆಸ್ ಬೆಂಬಲದಿಂದ ಗೆದ್ದವರೇ ಆಗಿದ್ದಾರೆ.ಇದರಿಂದ ಕಾಂಗ್ರೆಸ್ ಇಲ್ಲಿ ಸ್ಪಷ್ಟ ಬಹುಮತ ಪಡೆದಿದೆ.
ಕಾಂಗ್ರೆಸ್‍ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯೆ ಯಾಸ್ಮಿನ ಕಿತ್ತೂರು,ಶಿಲ್ಪಾ ಕೊಡೆ,ಸರಸ್ವತಿ ರಜಪೂತರ ಪೈಪೋಟಿ ಇದ್ದು ಆರ್.ವಿ.ದೇಶಪಾಂಡೆ ಕೃಪಾಕಟಾಕ್ಷವಿರುವ ಯಾಸ್ಮಿನ್ ಕಿತ್ತೂರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಅದರಂತೆ ನಂದೀಶ ಮುಂಗರವಾಡಿ ಉಪಾಧ್ಯಕ್ಷರಾಗುವುದು ಖಚಿತವಾಗಿದೆ.

About the author

Adyot

Leave a Comment