ಕಿಟಕಿ ಕಂಬಿ ಮುರಿದು ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿ.ದಲ್ಲಿ ಕಳುವು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿ.ತೀರ್ಥಹಳ್ಳಿ ಇದರ ಶಾಖೆಯಲ್ಲಿ
ಸೋಮವಾರ ರಾತ್ರಿ ಕಳ್ಳತನವಾಗಿದೆ.

ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈ ಸಹಕಾರಿ ನಿ.ದ ಶಾಖೆ ಇದೆ.ಮಂಗಳವಾರ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಸುಮಾರಿಗೆ ಶಾಖೆಯ ವ್ಯವಸ್ಥಾಪಕರು ಕಚೇರಿಗೆ ಬಂದಮೇಲೆ ಈ ಕೃತ್ಯ ಬೆಳಕಿಗೆ ಬಂದಿದೆ.
ಕಚೇರಿಯ ಷಟರ್ ಮುರಿಯುವ ಪ್ರಯತ್ನ ಮಾಡಿರುವ ಕಳ್ಳರು ಅದು ಸಾಧ್ಯವಾಗದ ಕಾರಣ ಕಿಟಕಿಯ ಕಂಬಿಯನ್ನು ಕತ್ತರಿಸಿ ಒಳನುಗ್ಗಿ ಗ್ರಾದ್ರೇಜ್ ಕಪಾಟಿನ ಬೀಗಮುರಿದು ಅದರಲ್ಲಿ 1.94ಲಕ್ಷರೂ.ವನ್ನು ಕದ್ದೋಯ್ದಿದ್ದಾರೆ ಎಂದು ತಿಳಿದು ಬಂದಿದೆ. ಕಚೇರಿಗೆ ಸಿಸಿ ಕ್ಯಾಮರ್ ಅಳವಡಿಸಿಲ್ಲ ಎಂದು ತಿಳಿದು ಬಂದಿದೆ.

ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಸೌಹಾರ್ದ ಕಚೇರಿ ಇರುವ ಕಟ್ಟಡದ ಸಮೀಪವಿರುವ ಜ್ಯುವಲರಿ ಅಂಗಡಿಯಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದ್ದು ಅದರ ಪರಿಶೀಲನೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.

About the author

Adyot

Leave a Comment