ಆದ್ಯೋತ್ ಸುದ್ದಿನಿಧಿ
ಬಿಜೆಪಿಯಲ್ಲಿ ಅಭಿಪ್ರಾಯಭೇದವಿರಬಹುದು ಭಿನ್ನಮತವಿಲ್ಲ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಭಾರತೀಯ ಜನತಾಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಶನಿವಾರ ಸುದ್ದಿಗೋಷ್ಠಿ ನಡೆಸಿದರು.
ಭಾರತೀಯ ಜನತಾಪಕ್ಷದಲ್ಲಿ ಪ್ರತಿಯೊಂದು ಚುನಾವಣೆಯನ್ನೂ ಪ್ರಜಾಪ್ರಭುತ್ವ ವ್ಯವಸ್ಥೆಯಡಿಲ್ಲಿ ನಡೆಸಲಾಗುತ್ತಿದ್ದು ಪಪಂ,ನಗರಸಭೆ,ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯೂ ಅದೇ ರೀತಿಯಲ್ಲಿ ನಡೆಯುತ್ತದೆ.
ಜಿಲ್ಲೆಯ ಕಾರವಾರ-ಶಿರಸಿ ನಗರಸಭೆ,ಅಂಕೋಲ,ಕುಮಟಾ,ಪುರಸಭೆ,ಹೊನ್ನಾವರ,ಮುಂಡಗೋಡು,ಯಲ್ಲಾಪುರ ಪಟ್ಟಣ ಪಂಚಾಯತ್‍ಗಳಲ್ಲಿ ಬಿಜೆಪಿಯ ಅಧ್ಯಕ್ಷ-ಉಪಾಧ್ಯಕ್ಷರಿದ್ದಾರೆ ಸಿದ್ದಾಪುರದಲ್ಲೂ 15 ಸದಸ್ಯರಲ್ಲಿ 14 ಸದಸ್ಯರು ಬಿಜೆಪಿಯವರಿದ್ದಾರೆ ಹೀಗಾಗಿ ಇಲ್ಲೂ ಅಧ್ಯಕ್ಷ-ಉಪಾಧ್ಯಕ್ಷರು ಬಿಜೆಪಿಯವರೇ ಆಗಿರುತ್ತಾರೆ.ಇಂತಹ ಆಯ್ಕೆ ಪ್ರಕ್ರಿಯೆಯನ್ನು ಸದಸ್ಯರೆಲ್ಲರ ಅಭಿಪ್ರಯಾವನ್ನು ಪಡೆದೇ ಮಾಡಲಾಗುತ್ತದೆ. ಅಂತಿಮವಾಗಿ ನಮ್ಮ ಪಕ್ಷದ ಪ್ರಮುಖರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಬೆಲೆ ಸಿಗುತ್ತಿಲ್ಲ,ಕೆಲವು ತಾಲೂಕಿಗೆ,ಕೆಲವು ಸಮುದಾಯದವರಿಗೆ ಮಾತ್ರ ಅಧಿಕಾರ ಸ್ಥಾನ ಸಿಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶ ನಾಯಕ, ಪಕ್ಷದ ಯಾವುದೇ ತೀರ್ಮಾನ ರಾಜ್ಯ ಮುಖಂಡರ ತಿರ್ಮಾನದಂತೆ ಆಗಿದೆ. ಒಂದೇ ತಾಲೂಕಿಗೆ,ಒಂದೇ ಸಮುದಾಯಕ್ಕೆ ಸೇರಿದವರಿಗೆ ಅಧಿಕಾರ ಸಿಗುತ್ತಿದೆ ಎಂಬುದು ಸರಿಯಲ್ಲ ಬಿಜೆಪಿಯಲ್ಲಿ ಎಲ್ಲಾ ಸಮುದಾಯದವರೂ ಇದ್ದಾರೆ ಪಕ್ಷವು ಸಾಮಾಜಿಕ ನ್ಯಾಯದ ಪರವಾಗಿದೆ ಯಾವುದೇ ಸ್ಥಾನಮಾನ ನೀಡುವುದಕ್ಕೆ ಜಾತಿ,ಸಮುದಾಯ ಕಾರಣವಲ್ಲ ಪಕ್ಷನಿಷ್ಠೆ ಅರ್ಹತೆ ಮುಖ್ಯವಾಗಿರುತ್ತದೆ ಮುಂದಿನ ದಿನಗಳಲ್ಲಿ ಎಲ್ಲ ಅರ್ಹರಿಗೂ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್,ಪ್ರಧಾನಕಾರ್ಯದರ್ಶಿ ಎನ್.ಎಸ್.ಭಟ್ಟ,ಎಂ.ಜಿ.ಭಟ್ಟ,ಕೃಷ್ಣಮೂರ್ತಿ ಕಡಕೇರಿ,ಮಂಡಳ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ,ಪದಾನ ಕಾರ್ಯದರ್ಶಿ ಎಸ್.ಕೆ.ಮೇಸ್ತ,ಪ್ರಸನ್ನ ಹೆಗಡೆ ಮುಂತಾಧವರು ಉಪಸ್ಥಿತರಿದ್ದರು.
ಬಿಜೆಪಿಯಲ್ಲಿ ಅಭಿಪ್ರಾಯಭೇದವಿರಬಹುದು ಭಿನ್ನಮತವಿಲ್ಲ,ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಗೊಂದಲಗಳ ಬಗ್ಗೆ ಜಿಲ್ಲಾ ಬಿಜೆಪಿಯ ಗಮನಕ್ಕೆ ಬಂದಿದೆ ಇದು ಪಕ್ಷದ ಆಂತರಿಕ ವಿಷಯವಾಗಿದ್ದು ಇದನ್ನು ಬಗೆಹರಿಸಲಾಗುವುದು— –ವೆಂಕಟೇಶ ನಾಯಕ
****
ಇತ್ತೀಚೆಗೆ ನಡೆದ ಬಾಗಲಕೋಟೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ವಿಜಯಶಾಲಿಗಳಾದವರು
ಎಸ್.ಆರ್.ಪಾಟೀಲ– ಬಿಳಗಿ ಕ್ಷೇತ್ರ(ಕಾಂಗ್ರೆಸ್)
ವಿಜಯಾನಂದ ಕಾಶಪ್ಪನವರ– ಹುನಗುಂದ(ಕಾಂಗ್ರೆಸ್)
ಆನಂದ ಸಿದ್ದುನ್ಯಾಮ ಗೌಡ–ಜಮಖಂಡಿ(ಕಾಂಗ್ರೆಸ್)
ಹೆಚ್.ವೈ.ಮೇಟಿ–(ಕಾಂಗ್ರೆಸ್)
ಸಿದ್ದು ಸವದಿ–ರಬಕವಿ,ಬನಹಟ್ಟಿ(ಬಿಜೆಪಿ)
ರಾಮಪ್ಪ ತಳೆವಾಡ–ಮುದೋಳ(ಬಿಜೆಪಿ)
ಶಿವನಗೌಡ ಅಗಸಿಮುಂದಿನ–ಇಲಕಲ್ (ಬಿಜೆಪಿ)
ಹೆಚ್.ಆರ್.ನಿರಾಣಿ–(ಬಿಜೆಪಿ)
ಪ್ರಕಾಶ ತಪಶೆಟ್ಟಿ–(ಬಿಜೆಪಿ)
ಕುಮಾರಗೌಡ ಜನಾಲಿ(ಪಕ್ಷೇತರ)
ಮುರಗೇಶ ಕಡಲಿಮಟ್ಟಿ(ಪಕ್ಷೇತರ)
*****
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹ
ಚಿತ್ರದುರ್ಗ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮಾಡಬೇಕೆಂದು ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಂ.ಎಲ್.ಪ್ರವೀಣ್ ಆಗ್ರಹಿಸಿದ್ದಾರೆ.
ಅವರು ಇತ್ತೀಚೆಗೆ ಭರಮಸಾಗರ ಪ್ರವಾಸಿ ಮಂದಿರದಲ್ಲಿ ನಡೆದ
ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸರಿಸುಮಾರು 1.30 ಲಕ್ಷ ಹೆಕ್ಟೇರ್ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಆದರೆ ರೈತರು ಮಾರಾಟ ಮಾಡುವುದು ಕಷ್ಟವಾಗಿದೆ ಈ ಕಾರಣ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಮೊದಲು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭ ಮಾಡಬೇಕು.
ಸರ್ಕಾರ ಒಂದೆಡೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತರಲು ಮುಂದಾಗಿದೆ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಈ ನಡುವೆ ರೈತರ ಬೆಳೆದ ಬೆಳೆಗಳನ್ನು ಮಾರಾಟ ಮಾಡಲು
ಬೇರೆ ವ್ಯವಸ್ಥೆಯನ್ನು ಮಾಡುತ್ತಿಲ್ಲ ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದರು.
ಸಾಲ ಮಾಡಿ ಬೆಳೆ ಬೆಳೆದು ರೈತರ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ ಈ ನಡುವೆ ಮೆಕ್ಕೆಜೋಳ ಮನೆಯಲ್ಲಿ ಇಟ್ಟು ಕೊಂಡಿದ್ದಾರೆ ಅವರ ಜೀವನ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ ಪ್ರವೀಣ ಇದೇ ತಿಂಗಳು ದೀಪಾವಳಿ ಹಬ್ಬವಿದೆ ರೈತರು ಹಬ್ಬ ಮಾಡುವುದಾದರೂ ಹೇಗೆ? ಕಷ್ಟಪಟ್ಟು ಬೆಳೆ ಬೆಳೆದು ರೈತ ಇದೀಗ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಇದಕ್ಕೆಲ್ಲ ಕಾರಣ ಸರ್ಕಾರದ ರೈತರ ಬಗ್ಗೆ ಇರುವ ನಿರ್ಲಕ್ಷವೇ ಕಾರಣ ಸರಕಾರ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾಭ ಮಾಡದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುತ್ತದೆ
ಎಂದು ಪ್ರವೀಣ ಎಚ್ಚರಿಸಿದರು.ಭರಮಸಾಗರ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಹೇಳಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಿಸಾನ್ ಯೂಥ್ ಅಧ್ಯಕ್ಷ ಇಂತಿಯಾಜ್,ದುರ್ಗೇಶ ಪೂಜಾರ್,ಗ್ರಾಪಂ ಸದಸ್ಯ ನಿರಂಜನ್ ಮೂರ್ತಿ, ಶ್ರೀನಿವಾಸ್,ಜಹೀರ್,ಕೆ.ಸಂತೋಷ್, ಬಿ.ಪಿ.ಪ್ರಸನ್ನ,ಕಲ್ಲೇಶಿ,ಗೋಲ್ಡ್ ಶ್ರೀನಿವಾಸ್,ಕೆ.ಪಿ. ಹರೀಶ್ ಜಿ.ಎಮ್.ಶ್ತೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.