ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಲಯನ್ಸ ಕ್ಲಬ್ ನ 2020-21 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಲಯನ್ಸ್ ಅಧ್ಯಕ್ಷರಾಗಿ ಶ್ಯಾಮಲ ರವಿ ಹೆಗಡೆ ಹೂವಿನಮನೆ ಆಯ್ಕೆಯಾಗಿದ್ದಾರೆ. ಇವರು ಲಯನ್ಸ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆಯ ಹಿಂದಿನ ಜಿಲ್ಲಾ ಗವರ್ನರ ಡಾ.ರವಿ ಹೆಗಡೆ ಹೂವಿನಮನೆ ಇವರ ಪತ್ನಿಯಾಗಿದ್ದು ಅನೇಕ ವರ್ಷಗಳಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿದ್ದಾಪುರ ಲಯನ್ಸ ಕ್ಲಬ್ ಮತ್ತು ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆಯ ವೃತ್ತಿಪರ ತರಬೇತಿ ಕೇಂದ್ರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಮಹಿಳೆಯರ ಸ್ವಾವಲಂಬನೆಯ ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರು ಸಿದ್ದಾಪುರ ಲಯನ್ಸ ಕ್ಲಬ್ಬಿನ ಹಿರಿಯ ಸದಸ್ಯರಾಗಿದ್ದಾರೆ.
ಸಿದ್ದಾಪುರ ಲಯನ್ಸ ಕ್ಲಬ್ ಕಾರ್ಯದರ್ಶಿಯಾಗಿ ರಾಘವೇಂದ್ರ ಆರ್. ಭಟ್ಟ ಆಯ್ಕೆಯಾಗಿದ್ದಾರೆ. ಉತ್ಸಾಹಿ ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಿದ್ದಾಪುರದಲ್ಲಿ ಸ್ವಸ್ತಿಕ್ ಟ್ರೇಡರ್ಸ ಎಂಬ ಹೆಸರಿನ ಉದ್ಯಮ ನಡೆಸುತ್ತಿದ್ದು ಆರ್.ಎಸ್.ಭಟ್ಟ ಕಲ್ಲಾಳ ಇವರ ಪುತ್ರರಾಗಿದ್ದಾರೆ.
ಖಜಾಂಚಿಯಾಗಿ ನಾಗರಾಜ(ಫ್ರಶಾಂತ)ದತ್ತಾತ್ರೇಯ ಶೇಟ ಆಯ್ಕೆಯಾಗಿದ್ದಾರೆ. ಇವರು ಪ್ರಖ್ಯಾತ ರಜತ ಶಿಲ್ಪಿ ಯಾಗಿದ್ದು ವಿವಿಧ ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
Congrats💐