ಸಿದ್ದಾಪುರದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ಉತ್ಯರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸೋಮವಾರ
ರಾಜ್ಯಸರಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ವಿದ್ಯುತ್ ದರ ಏರಿಕೆ,ಅಗತ್ಯ ವಸ್ತುಗಳ ಬೆಲೆ ಏರಿಕೆ,ಕೊವಿಡ್ ನಿರ್ವಹಣೆಯಲ್ಲಿ ವಿಫಲತೆ ಹಾಗೂ ತಾಲೂಕಿನಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳ ವಿರುದ್ಧ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ನೆಹರೂ ಮೈದಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮಂಜುಳಾ ಭಜಂತ್ರಿ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಕೊವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ದುಡ್ಡು ಮಾಡಿಕೊಳ್ಳುವ ದಂಧೆ ಮಾಡಿಕೊಂಡಿದ್ದಾರೆ.ವಿದ್ಯುತ್ ದರವನ್ನು ಏರಿಸಿದ್ದಾರೆ,ದಿನನಿತ್ಯದ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರುತ್ತಿದೆ,ಇಂದನ ದರ ದಿನದಿನಕ್ಕೂ ಎರುತ್ತಿದೆ ಇದೆಲ್ಲವುಗಳ ಭಾರ ಜನಸಾಮಾನ್ಯರಿಗೆ,ರೈತರಿಗೆ ಬೀಳುತ್ತಿದೆ ಆದರೆ ಸರಕಾರ ನಡೆಸುತ್ತಿರುವವರು ಕೇವಲ ಹಣಮಾಡುವುದರಲ್ಲಿ ನಿರತರಾಗಿದ್ದಾರೆ ಹೀಗೆ ಮುಂದುವರಿದರೆ ಮುಂದಿನದಿನಗಳಲ್ಲಿ ಕಾಂಗ್ರೆಸ್ ಪಕ್ಷ ಉಗ್ರಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಸಿದ್ದಾಪುರ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಇಲ್ಲಿ ಜನಪ್ರತಿನಿಧಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ,ಇಲ್ಲಿ ಆರ್.ಟಿ.ಸಿ.ಪಡೆಯಲು ಎರಡು ದಿನ ಕಾಯಬೇಕು, ಬಸವವಸತಿ ಯೋಜನೆಯ ಹಣ ಪಾವತಿಯಾಗದೆ ಎರಡು ವರ್ಷವಾಯಿತು, ತಾಲೂಕಿನ ರಸ್ತೆಗಳು ಹೊಂಡಮಯವಾಗಿದೆ,ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡದೆ ಬೇರೆ ಕಡೆಗೆ ಕಳುಹಿಸುತ್ತಾರೆ ಇಲ್ಲಿಯ ಓಪಿಡಿ ಚೀಟಿಗೆ 15ರೂ. ಕೊಡಬೇಕು ರಾಜ್ಯದ ಬೇರೆ ಯಾವ ಆಸ್ಪತ್ರೆಯಲ್ಲೂ ಇಷ್ಟು ಹಣಪಡೆಯುವುದಿಲ್ಲ, ಇಲ್ಲಿಯ ಅರಣ್ಯ ಅಧಿಕಾರಿಗಳು ಬಡವರ ಮನೆಯನ್ನು ಕೀಳುವುದರಲ್ಲಿ ನಿರತರಾಗಿದ್ದಾರೆ ಇವೆಲ್ಲವುಗಳನ್ನು ಸರಿಪಡಿಸಬೇಕಾದಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಯಾವುದೇ ಅನುದಾನ ತರದೆ ನಿಯಮಿತವಾಗಿ ಬರುವ ಅನುದಾನವನ್ನು ತಾನು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತ 1-2ಲಕ್ಷರೂ ಕಾಮಗಾರಿಯ ಉದ್ಘಾಟನೆ ಮಾಡುತ್ತಾ ಕಾಲಕಳೆಯುತ್ತಿದ್ದಾರೆ ಇವೆಲ್ಲವನ್ನು ಸಹಿಸಲು ಸಾಧ್ಯವಿಲ್ಲ ಇವೆಲ್ಲವನ್ನು ಕೂಡಲೇ ಸರಿಪಡಿಸಬೆಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ ಮಾತನಾಡಿ,ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು,ಎಂದು ಹೇಳಿದ್ದರು ಆದರೆ ಈಗ ಜನರು ಇರುವ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ.ಗೋಹತ್ಯೆ ನಿಷೇಧ ಕಾನೂನು ತರುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ಪಕ್ಷವು ಅದರ ಆಡಳಿತಕಾಲದಲ್ಲೇ ಅತಿಹೆಚ್ಚಿನ ಗೋಮಾಂಸ ರಪ್ತು ಮಾಡಿದೆ ಇಂತಹ ಸುಳ್ಳುಗಳನ್ನು ಹೇಳುವುದೇ ಬಿಜೆಪಿಯ ಅಜೆಂಡಾ ಆಗಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಸುಷ್ಮಾ ರೆಡ್ಡಿ, ಮಾಜಿ ಜಿಪಂ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ಕಾಂಗ್ರೆಸ್ ಪದಾಧಿಕಾರಿಗಳಾದ ಸಾವೆರ್ ಡಿಸಿಲ್ವಾ,ನಾಸೀರ್ ಖಾನ್ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ, ಮುಂತಾದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
********
ಯಕ್ಷತರಂಗಿಣಿ ಆನ್‍ಲೈನ್ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಯಕ್ಷತರಂಗಿಣಿ ಸಂಸ್ಥೆ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಆನ್ ಲೈನ್ ಕವನ ಸ್ಪರ್ದೆಯಲ್ಲಿ ಪ್ರಥಮ ಬಹುಮಾನವನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನ ಜಬೀವುಲ್ಲಾ ಎಂ.ಅಸದ್ ರ ‘ಬರುವೆಯಾದರೆ ಬಾ’ ಕವನಕ್ಕೆ, ದ್ವಿತೀಯ ಬಹುಮಾನವನ್ನು ಹೊನ್ನಾವರದ ವನರಾಗ ಶರ್ಮ ರÀ ‘ನಮಗೂ ಬದುಕಲು ಬಿಡಿ’ ಹಾಗೂ ತೃತೀಯ ಬಹುಮಾನವನ್ನು ಮೈಸೂರಿನ ಬಿ.ಕೆ.ಮೀನಾಕ್ಷಿ ರ ‘ಬೆಳಕ ಮಾರುವವರು’ ಕವನ ಪಡೆದುಕೊಂಡಿದೆ.

ಜಬೀವುಲ್ಲಾ ಅಸದ್

ವನರಾಗ ಶರ್ಮ

ಬಿ.ಕೆ.ಮೀನಾಕ್ಷಿ
ಸಮಾಧಾನಕರ ಬಹುಮಾನಕ್ಕೆ ಜಿ.ಡಿ.ಭಟ್ಟ ಹೊನ್ನಾವರ,ಮಹೇಶ ಹೆಗಡೆ ಸಿದ್ದಾಪುರ, ಡಾ.ಪ್ರಿಯಾಂಕ ಬೆಂಗಳೂರು,ನಾಗೇಶ ಎಸ್.ವೈ.ಶಿವಮೊಗ್ಗ, ಲಕ್ಷ್ಮೀ ಹೆಬ್ರಿ, ಮನೋಹರ ಜನ್ನು, ಟಿ.ಎಂ.ಜಗದೀಶ್, ಎಸ್.ಆರ್.ಎನ್.ಮೂರ್ತಿ ಕಾರವಾರ, ಕೆ.ಎಸ್.ಸುಧಾ ಶಿರಸಿ, ನಾಗರಾಜ ಕುಂಕಿಪಾಲ ಇವರ ಕವನ ಆಯ್ಕೆ ಆಗಿದೆ.
ಶುದ್ದ ಕನ್ನಡ ಬರಹದ ಕವಿತೆಯ ಪ್ರಥಮ ಬಹುಮಾನವನ್ನು ನಾಗರಾಜ್ ಡಿ.ಎಸ್.ತಲ್ಲಂಜೆ, ದ್ವಿತೀಯ ಬಹುಮಾನವನ್ನು ರಾಜೇಶ್ವರಿ ಜಿ.ಹೆಗಡೆ ಶಿರಸಿ, ತೃತೀಯ ಬಹುಮಾನವನ್ನು ಮಧುರಾ ಜೋಗ ಅವರು ಪಡೆದುಕೊಂಡಿದ್ದಾರೆ.
ನಿರ್ಣಾಯಕರಾಗಿ ಪ್ರಸಾದ್‍ಕುಮಾರ ಮೊಗೆಬೆಟ್ಟು ಹಾಗೂ ಕವಿತಾ ಬಿ.ಎಸ್. ಕಾರ್ಯನಿರ್ವಹಿಸಿದ್ದರು. ಬಹುಮಾನ ಪಡೆದುಕೊಂಡ ಎಲ್ಲ ಕವಿಗಳಿಗೆ ಅಂಚೆ ಮೂಲಕ ಬಹುಮಾನ ಕಳುಹಿಸಿಕೊಡಲಾಗುವುದು ಎಂದು ಯಕ್ಷತರಂಗಿಣಿ ಸಂಚಾಲಕ ನಂದನ ಬಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಪೊಲೀಸ್ ರು
ಸಂಚಾರ ನಿಯಮ ಪಾಲಿಸದ ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ಸಂಚಾರ ನಿಯಮಗಳನ್ನು ಪಾಲಿಸುವಂತೆ, ತಿಳಿಸಿ ಹೇಳುವ ಮೂಲಕ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು
.

About the author

Adyot

Leave a Comment