ಆದ್ಯೋತ್ ಸುದ್ದಿನಿಧಿ:
ಬಿಜೆಪಿಯ ತತ್ವ–ಸಿದ್ದಾಂತ ಅರಿಯುವುದೇ ಪ್ರಶಿಕ್ಷಣದ ಉದ್ದೇಶ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ರಾಘವೇಂದ್ರಮಠದಲ್ಲಿ
ಭಾರತೀಯಜನತಾಪಕ್ಷದ ಸಿದ್ದಾಪುರ ಮಂಡಲ ಪ್ರಶಿಕ್ಷಣವರ್ಗ ನಡೆಯಿತು.
ಪ್ರಶಿಕ್ಷಣವರ್ಗವನ್ನು ಉದ್ಘಾಟಿಸಿದ ವಾಯುವ್ಯಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ,ಭಾರತೀಯ ಜನತಾಪಕ್ಷ ಪ್ರಜಾಸತ್ತಾತ್ಮಕ ರೀತಿಯಲ್ಲಿ ತನ್ನ ಪದಾಧಿಕಾರಿಗಳನ್ನು ನೇಮಕ ಮಾಡುತ್ತದೆ.ಪ್ರತಿಮೂರುವರ್ಷಕ್ಕೊಮ್ಮೆ ಪದಾಧಿಕಾರಿಗಳ ಬದಲಾವಣೆಯಾಗುತ್ತದೆ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಇಲ್ಲಿ ಅವಕಾಶ ಸಿಗುತ್ತದೆ ಬಿಜೆಪಿಯ ಸಾಧನೆ,ತತ್ವ,ಸಿದ್ದಾಂತ ಇವುಗಳ ಬಗ್ಗೆ ಪ್ರಶಿಕ್ಷಣದಲ್ಲಿ ತಿಳಿಸಲಾಗುವುದು ಎಂದು ಹೇಳಿದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಹಲವು ಹೊಸ ಹೊಸ ಪ್ರಯೊಗಗಳನ್ನು ಮಾಡಿ ನಮ್ಮ ರಾಷ್ಟ್ರದ ಬಗ್ಗೆ ಈಡೀ ಜಗತ್ತು ಹೆಮ್ಮೆಪಡುವಂತೆ ಮಾಡಿದೆ ಇದೆಲ್ಲವನ್ನು ತಳಮಟ್ಟದಲ್ಲೂ ತಿಳಿಯಬೇಕು ನಮ್ಮ ಪಕ್ಷದ ಸಿದ್ದಾಂತದ ಬಗ್ಗೆ ನಮಗೆ ಹೆಮ್ಮೆ ಇದೆ ಅದು ಎಲ್ಲರಿಗು ತಿಳಿಯಬೇಕು ಇದೆಲ್ಲವು ಈ ಎರಡು ದಿನದ ಪ್ರಶಿಕ್ಷಣ ವರ್ಗದಲ್ಲಿ ತಿಳಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಕಾರ್ಯದರ್ಶಿ ಗುರುಪ್ರಸಾದ ಹೆಗಡೆ,ಕೃಷ್ಣಮೂರ್ತಿ ಕಡಕೇರಿ,ಜಿಪಂ ಸದಸ್ಯ ಎಂ.ಜಿ.ಹೆಗಡೆ,ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಉಪಸ್ಥಿತರಿದ್ದರು.
ತಾಲೂಕು ಮಂಡಳ ಅಧ್ಯಕ್ಷ ನಾಗರಾಜ ನಾಯ್ಕ ಸ್ವಾಗತಿಸಿದರು.ಪ್ರದಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ ನಿರೂಪಣೆ ಮಾಡಿದರು,ಎಸ್.ಕೆ.ಮೆಸ್ತ ವಂದನಾರ್ಪಣೆ ಮಾಡಿದರು.
******
ಜನವರಿ–15ರಂದು ಸಿದ್ದಾಪುರದ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗುವುದು ಎಂದು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಘೋಷಣೆ ಮಾಡಿದ್ದಾರೆ.
ಅವರು ಶನಿವಾರ ಸಿದ್ದಾಪುರದಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ನೂತನ ಬಸ್ ನಿಲ್ದಾಣದ ಕಾಮಗಾರಿ ವೀಕ್ಷಣೆ ಮಾಡಿ ಈ ಘೋಷಣೆ ಮಾಡಿದ್ದಾರೆ
ತಾಲೂಕಿಗೆ ಅತಿಅವಶ್ಯಕವಾದ ಬಸ್‍ನಿಲ್ದಾಣವನ್ನು 3.83ಕೋಟಿರೂ.ವೆಚ್ಚದಲ್ಲಿ ನಿರ್ಮಾಣಮಾಡಲಾಗುತ್ತಿದ್ದು ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ ಇದರಿಂದ ಸಾರ್ವಜನಿಕರಲ್ಲಿ ಅಸಹನೆ ಮೂಡಿದೆ ಇದರ ಅರಿವು ಆಡಳಿತಕ್ಕೆ ಇದೆ ಆದರೆ ಈಗ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ.ಜನವರಿ-15ರೊಳಗೆ ಬಸ್‍ನಿಲ್ದಾಣ ಉದ್ಘಾಟನೆಗೊಳ್ಳಲಿದೆ ಈ ಬಗ್ಗೆ ಸಂಬಂದಿಸಿದ ಇಂಜನೀಯರ್‍ಗಳಿಗೆ ಮತ್ತು ಗುತ್ತಿಗೆದಾರರಿಗೆ ತಿಳಿಸಿದ್ದೇನೆ ಒಂದು ವೇಳೆ ವಿಳಂಬವಾದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಪಾಟೀಲ ಹೇಳಿದರು.
ಒಂದು ದಿನಕ್ಕೆ 4500 ಬಸ್‍ಗಳು ಸಂಚರಿಸುತ್ತಿದ್ದು 17ಲಕ್ಷ ಕಿ.ಮಿ.ಸಂಚರಿಸುತ್ತವೆ,22ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು 35-36ರೂ. ಬಂದರೆ ಲಾಭ ಸಿಗುತ್ತದೆ ಆದರೆ 29ರೂ. ಬರುತ್ತಿದ್ದು ಇದರಿಂದ ಸಂಸ್ಥೆ ನಷ್ಟ ಅನುಭವಿಸುತ್ತಿದೆ.ಕೊವಿಡ್ ಕಾಲದಲ್ಲಿ ಸಂಸ್ಥೆಯ ಬಸ್‍ಗಳು ಸಂಚರಿಸದೆ ಇರುವುದರಿಂದ ನೌಕರರಿಗೆ ಸಂಬಳ ಕೊಡುವುದು ಕಷ್ಟವಾಗಿದೆ. ಏಪ್ರೀಲ್-ಮೇ ತಿಂಗಳ ಸಂಬಳವನ್ನು ಸರಕಾರ ನೀಡಿದೆ. ಈಗ ಕೊವಿಡ್ ನಿಯಂತ್ರಣಕ್ಕೆ ಬಂದಿದ್ದು ಬಸ್ ಸಂಚಾರ ಪ್ರಾರಂಭವಾಗಿದೆ.ಈಗ
13 ಲಕ್ಷ ಕಿ.ಮಿ. ಸಂಚರಿಸುತ್ತಿದೆ 9ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಇದರಿಂದ ನಿಧಾನವಾಗಿ ಸಂಸ್ತೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದೆ. ಸರಕಾರ ವಿದ್ಯಾರ್ಥಿಗಳ ಪಾಸ್‍ಗೆ 722ಕೋಟಿರೂ. ಬಾಕಿ ನೀಡಬೇಕಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿಗಳೆ ಹೆಚ್ಚಾಗಿರುವುದರಿಂದ ಬಸ್‍ಡಿಪೋ ಮಾಡಲು ತೊಂದರೆಯಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ ಬೆಡ್ಕಣಿ,ಬಿಜೆಪಿ ಜಿಲ್ಲಾಕಾರ್ಯದರ್ಶಿ ಗುರುಪ್ರಸಾದ ಹೆಗಡೆ,ಸಾರಿಗೆ ಇಲಾಖೆಯ ಇಂಜನೀಯರ್ ರಾಮದಾಸ ನಾಯ್ಕ ಉಪಸ್ಥಿತರಿದ್ದರು.