ಆಧ್ಯೋತ್ ಸುದ್ದಿನಿಧಿ:
ಉತ್ಯರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಶನಿವಾರ ಕಾಂಗ್ರೆಸ್ ನ ಒಂದು ಬಣ ಬಿಜೆಪಿಗೆ ಸೇರ್ಪಡೆಯಾದರು. ಈ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ರವಿವಾರ ಸುದ್ದಿಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಸಂತ ನಾಯ್ಕ,
ಕಾಂಗ್ರೆಸ್ನಿಂದ ನಾಯಕರೆನಿಸಿಕೊಂಡ ಹಲವರು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್ ಗ್ರಹಣಮುಕ್ತವಾಗಿದ್ದು ಮುಂದಿನದಿನಗಳಲ್ಲಿ ಕಾಂಗ್ರೆಸ್ ಇನ್ನಷ್ಠು ಬಲಿಷ್ಠವಾಗಲಿದೆ
ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಅನುಭವಿಸಿದ ಒಂದು ಗುಂಪು ಪಕ್ಷ ತ್ಯಜಿಸಿ ಹೋಗಿದ್ದಾರೆ ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಕಾರಣ ಅವರು ಪಕ್ಷದಲ್ಲಿದ್ದ ಒಬ್ಬ ವ್ಯಕ್ತಿಗೆ ನಿಷ್ಠರಾಗಿದ್ದರು ಪಕ್ಷದಲ್ಲಿದ್ದಾಗ ಪಕ್ಷದ ಸಂಘಟನೆಯ ಬಗ್ಗೆಯಾಗಲಿ,ಕಾರ್ಯಕರ್ತರ ಸಮಸ್ಯೆ ಬಗೆಹರಿಸುವ ಬಗ್ಗೆಯಾಗಲಿ ಕೆಲಸ ಮಾಡಿಲ್ಲ ಪ್ರತಿಯೊಂದು ಚುನಾವಣೆಯಲ್ಲೂ ಬಿಜೆಪಿಯ ಜೊತೆಗೆ ಕೈಜೋಡಿಸಿ ಪಕ್ಷಕ್ಕೆ ಹಾನಿಯನ್ನು ಮಾಡಿದ್ದಾರೆ ಹೀಗಾಗಿ ಅವರ ಬಗ್ಗೆ ನಾವು ಯೋಚಿಸಲು ಹೋಗುವುದಿಲ್ಲ ಆದರೆ ಕಾಂಗ್ರೆಸ್ ಪಕ್ಷದಿಂದ ಜಿಪಂ ಅಧ್ಯಕ್ಷರಾಗಿ,ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಪಕ್ಷದ ವಿವಿಧ ಹುದ್ದೆಯನ್ನು ಅಲಂಕರಿಸಿ ಅಧಿಕಾರ ಅನುಭವಿಸಿದ ಷಣ್ಮುಖ ಗೌಡರ್ ತಮ್ಮ ಪುತ್ರನೂ ಸೇರಿದಂತೆ ತಮ್ಮ ಹಿಂಬಾಲಕರು ಪಕ್ಷ ತೊರೆಯುತ್ತಿರುವಾಗ ಅವರನ್ನು ತಡೆಯುವ ಪ್ರಯತ್ನವನ್ನೂ ಮಾಡದೆ ಇರುವುದು ಆಶ್ಚರ್ಯವಾಗುತ್ತಿದೆ ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು ಮುಂದಿನ ಕ್ರಮವನ್ನು ವರಿಷ್ಠರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿದೆ ಈಗ ಪಕ್ಷತೊರೆದಿರುವ ಪಕ್ಷವಿರೋಧಿಗಳಿಂದಾಗಿ ಕಳೆದ ಕೆಲವು ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಆದರೆ ಈಗ ನಾವು ಗ್ರಹಣ ಮುಕ್ತರಾಗಿರುವುದರಿಂದ 23 ಗ್ರಾಪಂನಲ್ಲಿ 20 ಗ್ರಾಪಂನಲ್ಲಿ ಅಧಿಕಾರ ಹಿಡಿಯಲಿದ್ದೇವೆ ಈಗಾಗಲೆ ಎಲ್ಲಾ 23 ಘಟಕಗಳ 117 ಬೂತ್ ಪುನರ್ ಸಂಘಟಿಸಲಾಗಿದೆ. 23 ಗ್ರಾಪಂ ವ್ಯಾಪ್ತಿಗೂ ನಿರಂತರ ಓಡಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಜಿಪಂ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ,ತಾಪಂ ಸದಸ್ಯ ವಿವೇಕ ಭಟ್ಟ, ನಾಸೀರ್ ಖಾನ್, ಟಿಎಂಎಸ್ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ,ಮುಖಂಡರಾದ ಹನುಮಂತ ನಾಯ್ಕ ಹೊಸೂರು,ಸಿ.ಆರ್.ನಾಯ್ಕ,ಮುಂತಾಧವರು ಉಪಸ್ಥಿತರಿದ್ದರು.
*****
ವಿವಿಧ ಗ್ರಾಪಂ ವ್ಯಾಪ್ತಿಯ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ
ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೆಡಿಎಸ್ ನ 25ಕ್ಕೂ ಹೆಚ್ಚು ಕಾರ್ಯಕರ್ತರು
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ
ಸೇರ್ಪಡೆಯಾದರು