ಸಿದ್ದಾಪುರ ಕಾನಸೂರನಲ್ಲಿ ವ್ಯಕ್ತಿಯ ಮೇಲೆ ಹಲ್ಲೆಗೆ ಖಂಡನೆ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕಾನಸೂರನಲ್ಲಿ ರವಿವಾರ ರಾತ್ರಿ ವ್ಯಕ್ತಿಯೊಬ್ಬನ ಮೇಲೆ ಐವರು ಹಲ್ಲೆ ನಡೆಸಿದ್ದಾರೆ.
ಕಾನಸೂರನ ಗಣೇಶ ನಗರದಲ್ಲಿ ಚರಂಡಿ ಸ್ವಚ್ಛತೆಯ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಅಣ್ಣಪ್ಪ ಗಣಪತಿ ನಾಯ್ಕ ಮೇಲೆ ರಹೀಮ ಶಾ,ಅನ್ವರ ಶಾ,ಅಲ್ತಾಪ ಶಾ,ಮುಮ್ತಾಜ್, ಜಾಕೀರ್ ಹುಸೇನ್ ಎನ್ನುವವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು ನಾಯ್ಕ ನೀಡಿದ ದೂರಿನನ್ವಯ ಪೊಲೀಸ್ ರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಚರಂಡಿಗೆ ನೀರು ಬಿಡುತ್ತಿರುವ ಬಗ್ಗೆ ಅಣ್ಣಪ್ಪ ನಾಯ್ಕ ವಿರೋಧ ವ್ಯಕ್ತಪಡಿಸುತ್ತಿದ್ದನು ರವಿವಾರ ರಾತ್ರಿ ಈ ಬಗ್ಗೆ ಆರೋಪಿಗಳು ಯಾರೂ ಇಲ್ಲದ ಸಮಯದಲ್ಲಿ ಜಗಳ ಕಾಯ್ದು ಅವರ ಮೇಲೆ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.
****
ಕಾನಸೂರು ಅಣ್ಣಪ್ಪ ನಾಯ್ಕ
ಮೇಲೆ ಹಲ್ಲೆಗೆ ಖಂಡನೆ
ತಾಲೂಕಿನ ಕಾನಸೂರನ ಅಣ್ಣಪ್ಪ ಗಣಪತಿ ನಾಯ್ಕ ಮೇಲೆ ಹಲ್ಲೆ ನಡೆಸಿರುವುದನ್ನು ಬ್ರಹ್ಮರ್ಷಿನಾರಾಯಣಗುರು ಧರ್ಮಪರಿಪಾಲನಾ ಸಂಘ ತೀವ್ರವಾಗಿ ಖಂಡಿಸಿದೆ.

ಸಂಘದ ಅಧ್ಯಕ್ಷ ವಿನಾಯಕ ನಾಯ್ಕ ದೊಡ್ಡಗದ್ದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನಸೂರನ ಗಣೇಶ ನಗರದ ಅಣ್ಣಪ್ಪ ಗಣಪತಿ ನಾಯ್ಕ ಮೇಲೆ ರಹೀಮ ಶಾ,ಅನ್ವರ ಶಾ,ಅಲ್ತಾಪ ಶಾ,ಮುಮ್ತಾಜ್, ಜಾಕೀರ್ ಹುಸೇನ್ ಎನ್ನುವವರು ಹಲ್ಲೆ ನಡೆಸಿದ್ದು ಇದು ಅಮಾನವೀಯವಾಗಿದೆ.ತಾಲೂಕಿನಲ್ಲಿ ಎರಡೂ ಕೋಮಿನವರು ಅನ್ಯೋನ್ಯವಾಗಿದ್ದು ಇಂತಹ ಘಟನೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತದೆ ಪರಸ್ಪರ ಸೌಹಾರ್ಧತೆಯಿಂದ ಬಗೆಹರಿಯಬೇಕಾದ ಸಮಸ್ಯೆಯನ್ನು ಹಲ್ಲೆ ಮಾಡುವುದರ ಮೂಲಕ ಹೆಚ್ಚಿಸುತ್ತಿದ್ದಾರೆ.ಹಲ್ಲೆ ನಡೆಸಿರುವ ರಹಿಮ ಶಾ ಎನ್ನುವವನು ಅಂಚೆ ಇಲಾಖೆಯ ನೌಕರನಾಗಿದ್ದು ಇಂತಹವರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಕೂಡಲೇ ಇವನನ್ನು ಅಮಾನತು ಮಾಡಬೇಕು ಮತ್ತು ಇಂತಹ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ ಕಡಕೇರಿ ಮಾತನಾಡಿ, ಕ್ಷುಲ್ಲಕ ಕಾರಣಕ್ಕೆ ಜಗಳನಡೆಸುತ್ತಿರುವ ಪ್ರಕರಣ ತಾಲೂಕಿನಲ್ಲಿ ಹೆಚ್ಚಾಗುತ್ತಿದೆ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿರುವುದು ಪ್ರಶಂಸನೀಯವಾಗಿದೆ ಇವರಿಗೆ ಜಾಮೀನು ಸಿಗಬಾರದು ಏಕೆಂದರೆ ಇವರಿಂದ ಇಲ್ಲಿಯ ಸ್ಥಳಿಯರಿಗೆ ಅಪಾಯವಿದೆ ಅಂಚೆ ಇಲಾಖೆ ರಹಿಮಾ ಶಾ ಎನ್ನುವ ಆರೋಪಿಯನ್ನು ತಕ್ಷಣದಲ್ಲಿ ಅಮಾನತುಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಅಲ್ಲದೆ ಇಂತಹ ಅಹಿತಕರ ಘಟನೆ ಮರುಕಳಿಸಿದರೆ ಸೂಕ್ತ ರೀತಿಯಲ್ಲಿ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಯಶವಂತ ನಾಯ್ಕ, ಸದಸ್ಯ ಸತೀಶ ನಾಯ್ಕ,ಹೇಮಂತ ನಾಯ್ಕ ಕಾನಸೂರು ಮುಂತಾದವರು ಉಪಸ್ಥಿತರಿದ್ದರು.
****
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹಾಳದಕಟ್ಟಾ ಮುರಘರಾಜೇಂದ್ರ ಅಂಧರ ಶಾಲೆಯಲ್ಲಿ ಲೂಯಿ ಬ್ರೈಲ್ ದಿನಾಚರಣೆ
ಸ್ಥಳೀಯ ಆಶಾಕಿರಣ ಟ್ರಸ್ಟ್ ನಡೆಸುತ್ತಿರುವ ಮುರಘರಾಜೇಂದ್ರ ಅಂಧರ ಶಾಲೆಯಲ್ಲಿ ಸೋಮವಾರ ಲೂಯಿಬ್ರೈಲ್ ದಿನಾಚರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ಲೂಯಿ ಬ್ರೈಲ್ ಸ್ವತಃ
ಅಂಧರಾಗಿದ್ದರೂ ತಮ್ಮಂತಹ ಮಕ್ಕಳಿಗೆ ಸಹಾಯ ಹಸ್ತ ಚಾಚಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡಿ ಅಂಧರ ಬಾಳಿಗೆ ಬೆಳಕು ನೀಡಿದ್ದಾರೆ.ಅಂಧರು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ನೆರವಾಗುತ್ತಿದೆ. ಅಂಧಮಕ್ಕಳ ಶಿಕ್ಷಣಕ್ಕೆ ನೆರವಾಗುವುದು ಒಂದು ಉತ್ತಮ ಕೆಲಸ ಎಂದು ಹೇಳಿದರು.
ವಿಶೇಷ ಚೇತನ ಶಿಕ್ಷಕ ಜಯಣ್ಣ ಬಿ. ಲೂಯಿ ಬ್ರೈಲ್ ರವರ ಜನ್ಮ ಬದುಕು ಸಾಧನೆಯನ್ನು ಪರಿಚಯಿಸಿದರು.

ಟ್ರಸ್ಟ್ ಉಪಾಧ್ಯಕ್ಷ ಸಿ. ಎಸ್. ಗೌಡರ್ ಹೆಗ್ಗೋಡ್ಮನೆ, ಕೋಶಾಧ್ಯಕ್ಷ ನಾಗರಾಜ ದೋಶೆಟ್ಟಿ, ಟ್ರಸ್ಟೀಗಳಾದ ಜಿ. ಜಿ. ಹೆಗಡೆ ಬಾಳಗೋಡ, ಉಮಾ ನಾಯಕ, ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಹೂವಿನಮನೆ, ವಿದ್ಯಾ ದೋಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕಿ ಕಮಲಾಕ್ಷಿ ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ನಾಗರತ್ನ ವಂದಿಸಿದರು. ಶಿಕ್ಷಕಿ ಲತಾ ನಿರೂಪಿಸಿದರು.

About the author

Adyot

Leave a Comment