ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಅಯ್ಯಪ್ಪ ಸ್ವಾಮಿ ದೇವಾಲಯ ಅಯ್ಯಪ್ಪ ಮಾಲಾಧಾರಿಗಳ ಜೊತೆಗೆ ಪ್ರವಾಸಿಗಳನ್ನು ಸೆಳೆಯುತ್ತಿದೆ.
ಕೋವಿಡ್ ಕಾರಣದಿಂದ ಶಬರಿಮಲೆಯಲ್ಲಿ ಕಠಿಣ ನಿಯಮವನ್ನು ಜಾರಿಗೆ ತಂದಿರುವ ಕಾರಣ ಶಬರಿಮಲೆಯ ಮಾದರಿಯಲ್ಲಿಯೇ ಶಾಕ್ತಸಂಪ್ರದಾಯದ ಪ್ರಕಾರ ನಿರ್ಮಾಣಗೊಂಡಿರುವ ಸಿದ್ದಾಪುರದ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ರಾಜ್ಯದ ಬೇರೆ ಬೇರೆ ಭಾಗದಿಂದ ಮಾಲಾಧಾರಿಗಳು ಆಗಮಿಸುತ್ತಿದ್ದಾರೆ.
ಪಟ್ಟಣದ ಬಾಲಿಕೊಪ್ಪದಲ್ಲಿರುವ 150 ಮೀಟರ್ ಎತ್ತರದ ಗುಡ್ಡದ ಮೇಲೆ ಅಯ್ಯಪ್ಪ ಸ್ವಾಮಿ ಮಂದಿರವನ್ನು ಶಬರಿಮಲೆಯ ಮಾದರಿಯಲ್ಲಿ ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ.
ಬಲಭಾಗದಲ್ಲಿ ಗಣೇಶ ಹಾಗೂ ಎಡಭಾಗದಲ್ಲಿ ಸುಬ್ರಹ್ಮಣ್ಯ ಮಂದಿರವನ್ನು ನಿರ್ಮಿಸಲಾಗಿದೆ.
ಪ್ರತಿನಿತ್ಯ ಪೂಜೆಗಳು ನಡೆಯುತ್ತದೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿದೆ.ಇಲ್ಲಿಯ ಅಯ್ಯಪ್ಪ ಸ್ವಾಮಿ ಯಾವುದೇ ಧರ್ಮ,ಲಿಂಗಭೇದವಿಲ್ಲದೆ ಎಲ್ಲರಿಗೂ ದರ್ಶನ ಭಾಗ್ಯ ಕರುಣಿಸುತ್ತಾನೆ.
682 ಕೆ.ಜಿ.ತೂಕದ ಪಂಚಲೋಹದ 18 ಮೆಟ್ಟಿಲು ಏರಲು ಜಾತ್ರೆಯ ದಿನ ಅವಕಾಶ ನೀಡಲಾಗುತ್ತಿತ್ತು ಆದರೆ ಈ ವರ್ಷ ಎಲ್ಲಾ ದಿನಗಳಲ್ಲೂ ವ್ರತಧಾರಿಗಳಿಗೆ ಮೆಟ್ಟಿಲು ಹತ್ತಿ ತುಪ್ಪದ ಅಭಿಷೇಕ ಮಾಡಿ ಈರಮುಡಿ ಅರ್ಪಿಸಲು ಅವಕಾಶ ಮಾಡಿಕೊಡಲಾಗಿದೆ
ಕಳೆದ ಮೂರು ವರ್ಷದಿಂದ ಈ ದೇವಾಲಯದಲ್ಲಿ ಸಂಕ್ರಾಂತಿ ಸಮಯದಲ್ಲಿ ಜಾತ್ರಾಮಹೋತ್ಸವ ನಡೆಯುತ್ತದೆ.ಇದು ರಾಜ್ಯದಲ್ಲಿಯೇ ನಡೆಯುವ ಏಕೈಕ ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವ ಎನ್ನುವ ಖ್ಯಾತಿಗೆ ಕಾರಣವಾಗಿದೆ. ಜಾತ್ರಾಮಹೋತ್ಸವದ ಕೊನೆಯ ದಿನ ನಡೆಯುವ ಆನೆಯ ಮೇಲಿನ ಅಂಬಾರಿ ಮೆರವಣಿಗೆ ಉತ್ಸವ ಶಬರಿಮಲೆಯನ್ನೆ ನೆನಪಿಸುತ್ತದೆ.
ಧ್ವಜಾರೋಹಣ ಮೂಲಕ ಜಾತ್ರಾ ಉತ್ಸವ ಪ್ರಾರಂಭವಾಗುತ್ತದೆ ಆ ದಿನ ಆಕಾಶದಲ್ಲಿ ಗರುಡ ಹಾರಾಡುತ್ತದೆ ಇದು ಆಸ್ತಿಕರಲ್ಲಿ ಭಕ್ತಿಯನ್ನು ಹೆಚ್ಚಿಸುತ್ತಿದೆ.
——
ದಿ.10 ರವಿವಾರ ಧ್ವಜಾರೋಹಣ, ಸರ್ವಸೇವೆ,ಪಡಿಪೂಜೆ,ಹಾಗೂ ಉತ್ಸವ
ದಿ.11 ಸೋಮವಾರ
ರುದ್ರ ಹವನ,ವಿಶೇಷ ಪೂಜೆ
ದಿ.12 ಮಂಗಳವಾರ ದುರ್ಗಾಹವನ,ಪಾರಾಯಣ
ದಿ.13 ಬುಧವಾರ
108 ತೆಂಗಿನಕಾಯಿ ಯ ಗಣಹೋಮ,ಅಷ್ಟಾಭಿಷೇಕ
ದಿ.14 ಗುರುವಾರ
ಬೆಳಿಗ್ಗೆ ಅಷ್ಟಾಭಿಷೇಕ,ಸಂಕ್ರಾಂತಿ ವಿಶೇಷ ಪೂಜೆ
ಸಂಜೆ ಶಿರಳಗಿ ಶ್ರೀ ಚೈತನ್ಯ ರಾಮಕ್ಷೇತ್ರ ದ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜಿಯವರಿಂದ ಆಶೀರ್ವಚನ ಹಾಗೂ ಅಯ್ಯಪ್ಪಸ್ವಾಮಿ ದೇವರ ಆನೆಯ ಮೇಲೆ ಅಂಬಾರಿ ಮೆರವಣಿಗೆ
ದಿ.15 ಶುಕ್ರವಾರ
ಓಕಳಿ,ಧ್ವಜ ಅವರೋಹಣ
ಇದಲ್ಲದೆ ಪ್ರತಿದಿನ ಭಜನೆ,ಸಂಗೀತ ಕಾರ್ಯಕ್ರಮ ಗಳು ನಡೆಯುತ್ತವೆ