ಪಕ್ಷದ ನಾಯಕರು ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಚೌಕಟ್ಟಿನೊಳಗೆ ಚರ್ಚಿಸಬೇಕು ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ದೇಶಪಾಂಡೆ ಹೇಳಿಕೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಶನಿವಾರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಸುದ್ದಿಗೋಷ್ಠಿ ನಡೆಸಿದರು.
ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಮತದ ಸಮಸ್ಯೆ ಇಲ್ಲ ಆದರೂ ಕೆಲವು ನಾಯಕರಲ್ಲಿ ಭಿನ್ನಾಭಿಪ್ರಯಾವಿದ್ದರೆ ಅಂತಹವರು ಪಕ್ಷದ ಚೌಕಟ್ಟಿನೊಳಗೆ ಅದನ್ನು ಚರ್ಚಿಸಬೇ ಹೊರತು ಸಾರ್ವಜನಿಕವಾಗಿ ಚರ್ಚಿಸಬಾರದು.
ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿದೆ ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯಲ್ಲೂ ಕಾಂಗ್ರೆಸ್ ಸಾಧನೆ ಮಾಡಲಿದೆ ಇದಕ್ಕಾಗಿ ಒಗ್ಗಟ್ಟಿನಿಂದ ಪಕ್ಷದ ಸಂಘಟನೆಗೆ ನಮ್ಮೆಲ್ಲ ನಾಯಕರು ಮುಂದಾಗಿದ್ದಾರೆ.

ಡಿ.ಕೆ.ಶಿವಕುಮಾರ ಅಧ್ಯಕ್ಷರಾದಮೇಲೆ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಾರೆ ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ ಸಿದ್ದಾರಾಮಯ್ಯನವರೂ ಸಾಕಷ್ಟು ಪ್ರವಾಸ ಮಾಡುತ್ತಿದ್ದಾರೆ ಇದರಿಂದ ಪಕ್ಷ ಸಶಕ್ತವಾಗುತ್ತಿದೆ ಎಂದು ಹೇಳಿದ ಪ್ರಶಾಂತ ದೇಶಪಾಂಡೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ವೃದ್ಧಾಪ್ಯ ವೇತನ,ವಿಧವಾ ವೇತನಗಳು ಬರುತ್ತಿಲ್ಲ ರಸ್ತೆಗಳು ಗುಂಡಿಗಳಾಗಿವೆ ಪ್ರವಾಹ ಪೀಡಿತರಿಗೆ ಪರಿಹಾರ ಸಿಕ್ಕಿಲ್ಲ ಪುನರ್ವಸತಿ ಆಗುತ್ತಿಲ್ಲ ಕೋವಿಡ್ ನೆಪದಿಂದ ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಿದ್ದಾರೆ.ಕೇಂದ್ರ ಸರಕಾರ ನಿರಂತರವಾಗಿ ಡಿಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಏರಿಸುತ್ತಿದೆ ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಕಾಂಗ್ರೆಸ್ ಪಕ್ಷ ನಿರಂತರವಾಗಿ ಸರಕಾರದ ನಡೆಯನ್ನು ಖಂಡಿಸುತ್ತಿದೆ ಆದರೆ ಮಾದ್ಯಮಗಳು ಇದನ್ನು ಪ್ರಕಟಿಸುತ್ತಿಲ್ಲ ಇದರಿಂದ ನಮ್ಮ ಸಾಧನೆಗಳು ಜನರಿಗೆ ತಲುಪುತ್ತಿಲ್ಲ ಎಂದು ಹೇಳಿದರು

1983 ರಿಂದ ಇಲ್ಲಿಯವರೆಗೆ ಆರ.ವಿ.ದೇಶಪಾಂಡೆಯವರು ಆರು ಬಾರಿ ಗೆಲುವು ಸಾಧಿಸಿದ್ದಾರೆ ಮುಂದಿನ ಚುನಾವಣೆಯಲ್ಲೂ ಅವರೆ ಗೆಲ್ಲುತ್ತಾರೆ ನಾನು ಸಂಸತ್ ಚುನಾವಣೆಯಲ್ಲಿ ಸೋಲನನ್ನುಭವಿಸಿದ್ದರೂ ರಾಜಕೀಯದಿಂದ ನಿವೃತ್ತಿಯಾಗಿಲ್ಲ ಹಳಿಯಾಳ ಜೋಯಿಡಾ ಭಾಗದಲ್ಲಿ ನಾನು ಪಕ್ಷದ ಸಂಘಟನೆಗೆ ಸಕ್ರೀಯವಾಗಿ ಭಾಗವಹಿಸಿದ್ದೇನೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಅಪೇಕ್ಷೆ ಪಟ್ಟರೆ ಎಲ್ಲಾ ಬಾಗದಲ್ಲೂ ಭಾಗವಹಿಸುತ್ತೇನೆ. ನಾನಾಗಲಿ ನನ್ನ ಕುಟುಂಬದವರಾಗಲಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರುವುದಿಲ್ಲ ಕಾಂಗ್ರೆಸ್ ನಮಗೆ ಎಲ್ಲವನ್ನು ಕೊಟ್ಟಿದೆ ಆದ್ದರಿಂದ ನಾನು ಪಕ್ಷದ ನಿಷ್ಠಾವಂತನಾದ ಕಾರ್ಯಕರ್ತನಾಗಿ ಪಕ್ಷವಹಿಸಿದ ಜವಾಬ್ದಾರಿಯನ್ನು ಮಾಡುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ನಾಗರಾಜ,ದೀಪಕ ದೊಡ್ಡೂರು ಉಪಸ್ಥಿತರಿದ್ದರು.

About the author

Adyot

Leave a Comment