ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ
ಇಂದು ಸ್ಥಳೀಯ ಪ್ರೇಂಡ್ಸ್ ಸರ್ಕಲ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸ್ವಾಮೀ ವಿವೇಕಾನಂದರ 157ನೇ ಜಯಂತೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತದ ಕಲ್ಪನೆಯನ್ನು ಕಟ್ಟಿಕೊಟ್ಟವರು ಶಂಕರಾಚಾರ್ಯರು ಮತ್ತು ಸ್ವಾಮಿವಿವೇಕಾನಂದರು.
ಗುಲಾಮಿತನದ ಅಡಿಯಲ್ಲಿ ನರಳುತ್ತಿದ್ದ ಭಾರತವನ್ನು ಸ್ವಾತಂತ್ರ್ಯಕ್ಕಾಗಿ ಬಡಿದೆಬ್ಬಿಸುವ ಸಂಕಲ್ಪ ತೊಟ್ಟಿದ್ದರು. ಯುವಕರ ಆದರ್ಶವೇನು ದೇಶಕ್ಕೆ ಸಮಾಜಕ್ಕೆ ಅವರು ಏನು ಮಾಡಬಹುದು ಎನ್ನುವುದರ ಬಗ್ಗೆ ತಿಳಿಸಿದವರು ವಿವೇಕಾನಂದರು ಯುವಕರಲ್ಲಿ ದೇಶಭಕ್ತಿ,ಸಮಾಜದ ಆದರ್ಶವನ್ನು ಬಿತ್ತಿದವರು ಅಲ್ಪಕಾಲದಲ್ಲಿ ಬಾಳಿದರು ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದವರು ಅವರು ಮರಣಿಸಿ 120 ವರ್ಷ ಗತಿಸಿದರೂ ಅವರ ವಿಷಯ ಪ್ರಸ್ತುತವಾಗಿರುವುದು ಅವರ ಸಾಧನೆಯ ಬಗ್ಗೆ ತಿಳಿಸುತ್ತದೆ.
ಸಮಾಜವನ್ನು ಒಡೆದು ಆಳುವದನ್ನು ನಡೆಸುತ್ತಿರುವ ಇಂದಿನ ಉಗ್ರವಾದ,ಮಾವೋವಾದಕ್ಕೆ ವಿವೇಕಾನಂದರು ಸಮರ್ಥ ಉತ್ತರವಾಗಬಲ್ಲರು ಇಲ್ಲಿಯ ಯುವಕರು ಅವರ ಆದರ್ಶವನ್ನು ಪಾಲಿಸುವ ಮೂಲಕ ಸ್ತುತ್ಯಾರ್ಹ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದ ಕಾಗೇರಿಯವರು 40 ವರ್ಷದಿಂದ ನಾನು ನಮ್ಮ ಹಲವು ಸಂಘಟನೆಗಳ ಮೂಲಕ ವಿವೇಕಾನಂದರ ಜಯಂತಿಯನ್ನು ಆಚರಿಸುತ್ತಿದ್ದೇವೆ ನಾವೆಲ್ಲರೂ ಸಮಾಜವನ್ನು ಪರಿವರ್ತಿಸುವ ಭ್ರಮೆಯಲ್ಲಿ ಬಿದ್ದಿದ್ಧೆವೆ ಆದರೆ ಕೇವಲ ಯುವಕರಿಂದ ಮಾತ್ರ ಬದಲಾವಣೆ ಸಾಧ್ಯ ಈ ದಿಸೆಯಲ್ಲಿ ಪ್ರೇಂಡ್ಸ್ ಸರ್ಕಲ್ನ ಯುವಕರು ರಕ್ತದಾನದಂತಹ ಮಹತ್ವದ ಕಾರ್ಯವನ್ನು ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಅವರಿಂದ ಬೇರೆ ಬೇರೆ ಸಮಾಜಿಕ ಸೇವೆಗಳು ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆವಹಿಸಿದ್ದ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ರಕ್ತ ಮನುಷ್ಯನಿಗೆ ಅತಿಅವಶ್ಯಕವಾಗಿರುವದಾಗಿದ್ದು ಇದನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ ರಕ್ತವನ್ನು ನೀಡುವುದರಿಂದ ಯಾವುದೇ ಅಡ್ಡಪರಿಣಾಮವಾಗುವುದಿಲ್ಲ ನಾವು ನೀಡುವ ರಕ್ತ ಒಬ್ಬರ ಪ್ರಾಣವನ್ನು ಉಳಿಸಬಲ್ಲದು ಇದನ್ನು ಮನಗಂಡು ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ.ರೂಪಾ ಮಾತನಾಡಿದರು. ಡಾ.ಲೊಕೇಶ,ಪಪಂ ಸದಸ್ಯ ಮಾರುತಿ ನಾಯ್ಕ,ನಂದನ ಬೋರ್ಕರ್,ಗುರುರಾಜ ಶಾನಭಾಗ, ಮುಂತಾಧವರು ಉಪಸ್ಥಿತರಿದ್ದರು.
ಪ್ತೇಂಡ್ಸ್ ಸರ್ಕಲ್ ನ ಅಧ್ಯಕ್ಷ ಅಣ್ಣಪ್ಪ ನಾಯ್ಕ ಕಡಕೇರಿ ಸ್ವಾಗತಿಸಿದರು
ನಂತರ ಸುಮಾರು 35 ಯುವಕರು ರಕ್ತದಾನ ಮಾಡಿದರು.