ವಿನಾಯಕ ಸೌಹಾರ್ದದಿಂದ ಆಶಾಕಾರ್ಯಕರ್ತೆಯರಿಗೆ ಗೌರವ ಧನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಲಿ.ವತಿಯಿಂದ ಆಯ್ದ ಆಶಾಕಾರ್ಯಕರ್ತೆಯರಿಗೆ ಗೌರವಧನ ನೀಡಲಾಯಿತು.
ಕೊವಿಡ್ ಸಾಂಕ್ರಾಮಿಕ ಖಾಯಿಲೆಯ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲಕ್ಷಿಸದೆ ವಾರಿಯರ್ಸ ಆಗಿ ಕೆಲಸ ಮಾಡುತ್ತಿರುವ ಎಲ್ಲಾ ಆಶಾಕಾರ್ಯಕರ್ತೆಯರಿಗೂ ಅಭಿನಂದನೆಯನ್ನು ಸಲ್ಲಿಸಿರುವ ವಿನಾಯಕ ಸೌಹಾರ್ದದ ಆಡಳಿತ ಮಂಡಳಿ ಆಯ್ದ ಆರು ಜನ ಆಶಾಕಾರ್ಯಕರ್ತೆಯರಿಗೆ
ತಲಾ1500ರೂ.ನಂತೆ ಗೌರವ ಧನವನ್ನು ಶನಿವಾರ ನೀಡಲಾಯಿತು.

ಸಂಘದ ಅಧ್ಯಕ್ಷ ಆನಂದ ಈರಾ ನಾಯ್ಕ ಉಪಾಧ್ಯಕ್ಷ ಎಸ್.ಎಲ್. ಕಾಮತ್ ವ್ಯವಸ್ಥಾಪಕ ನಿರ್ದೇಶಕ ವಿನಾಯಕ್ ನಾಯ್ಕ ಮತ್ತು ಆಡಳಿತಮಂಡಳಿ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಸಿದ್ದಾಪುರ ಅಯ್ಯಪ್ಪ ಸ್ವಾಮಿ ದೇವಾಲಯದ ಮುಂದೆ ಹಣ್ಣಿನ ಗಿಡಗಳನ್ನು ನೆಡಲಾಯಿತು

About the author

Adyot

3 Comments

  • Sir ಆಶಾದವರು ಮಾತ್ರ ಕೆಲಸಾ ಮಾಡತಾ ಇಲ್ಲಾ ಅವರಷ್ಟೆ ಅಂಗನವಾಡಿಯವರು ಮಾಡತಾ‌ಇದಿವಿ ನಮಗೆ ಗೌರವ ಧನ ಬೆಡ ಮಾಡತಾ ಇದಾರೆ ಅಂತಾನಾದರು ಹೇಳಿ ಸಾಕು.

Leave a Comment