ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮುರಘರಾಜೇಂದ್ರ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುವ ಅನುಭವಮಂಟಪ,ಸಮುದಾಯಭವನ ಹಾಗೂ ಶ್ರೀಮಠದ ಪುನರಜ್ಜೀವನದ ಶಂಕುಸ್ಥಾಪನೆಯನ್ನು ಚಿತ್ರದುರ್ಗದ ಮುರಘಾಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಿವಮೂರ್ತಿ ಶ್ರೀಗಳು,ಧಾರ್ಮಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆ ಸಾಧ್ಯವಿದೆ ಆದ್ದರಿಂದ ಧರ್ಮ ಮಾರ್ಗ ದಲ್ಲಿ ನಡೆಯುವುದು ಉತ್ತಮ.ಆಧುನಿಕ ಜಗತ್ತಿನ ಜೀವನದಲ್ಲಿ ಭೌತಿಕ, ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಗಳು ಅತಿ ವೇಗವಾಗಿ ನಡೆಯುತ್ತಿದೆ ಇದೆಲ್ಲದರ ಜೊತೆಗೆ ತಾತ್ವಿಕ,ಬೌದ್ಧಿಕ, ಮೌಲಿಕ ಬೆಳವಣಿಗೆಯನ್ನು ಸಾಧಿಸಬೇಕಿದೆ ಇದಕ್ಕೆ ಧಾರ್ಮಿಕ ಬೆಳವಣಿಗೆ ಅವಶ್ಯಕವಾಗಿದೆ ಇದರಿಂದಲೇ ಸಾಮಾಜಿಕ ಬೆಳವಣಿಗೆ
ಸಾಧ್ಯವಿದೆ ಎಂದು ಹೇಳಿದರು.
ಸಿದ್ದಾಪುರದ ಮುರಘಾಮಠಕ್ಕೂ ಚಿತ್ರದುರ್ಗದ ಮುರಘಾಮಠಕ್ಕೂ ಅವಿನಾಭಾವ ಸಂಬಂಧವಿದೆ.ಇಲ್ಲಿಯ ಮಠದಲ್ಲಿ ನಮ್ಮ ಹಿಂದಿನ ಸ್ವಾಮಿಗಳು ಮೊಕ್ಕಾಂ ಮಾಡುತ್ತಿದ್ದರು ಆದರೆ ಹಲವು ಕಾರಣದಿಂದ ಇದು ನಿರ್ಲಕ್ಷಕ್ಕೆ ಒಳಗಾಗಿದೆ ಆದರೆ ಮುಂದಿನ ದಿನಗಳಲ್ಲಿ ಇದು ಸಾಂಸ್ಕ್ರತಿಕ, ಧಾರ್ಮಿಕ ಕೇಂದ್ರವಾಗಿ ಬೆಳೆಯಲಿದೆ.ಈ ಕಟ್ಟಡದ ನಿರ್ಮಾಣ ದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ ಹೆಗಡೆ ಯವರ ಹತ್ತಿರ ಮಾತನಾಡಲಾಗಿದೆ ಎಲ್ಲರ ಸಹಕಾರದೊಂದಿಗೆ ೧-೨ ವರ್ಷದೊಳಗೆ ಕಟ್ಟಡ ನಿರ್ಮಾಣವಾಗಲಿದೆ.ಎಂದು ಹೇಳಿದರು.
ಶಿರಸಿಯ ರುದ್ರದೇವರಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿ, ತಾಲೂಕಿನ ಲಿಂಗಾಯತರ ಅಭಿವೃದ್ಧಿಗೆ
ಈ ಮಠ ಶ್ರಮಿಸಲಿದೆ ಇಲ್ಲಿರುವ ಎರಡು ಎಕರೆ ಪ್ರದೇಶದಲ್ಲಿ ಉತ್ತಮವಾದ ಭವ್ಯಕಟ್ಟಡ ನಿರ್ಮಾಣವಾಗಲಿದೆ.ಇದು ಸಹ ಕೇವಲ ಎರಡು ವರ್ಷದಲ್ಲಿ ನಿರ್ಮಾಣವಾಗಲಿದೆ ಇದು ಸಮಾಜಕ್ಕೆ ಉತ್ತಮ ಕೊಡುಗೆಯಾಗಲಿದೆ ಇದಕ್ಕೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಸಿ.ಎಸ್.ಗೌಡರ್ ಸ್ವಾಗತಿಸಿದರು. ನಾಗರಾಜ ಗೌಡರ್ ನಿರೂಪಣೆ ಮಾಡಿದರು.
ಈಗ ನಡೆಯುತ್ತಿರುವ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಬಗ್ಗೆ ಆದ್ಯೋತ್ ನ್ಯೂಸ್ ಶ್ರೀಗಳ ಪ್ರತಿಕ್ರಿಯೆ ಕೇಳಿದಾಗ,
ಸಂದಿಗ್ಧತೆ ಮತ್ತು ಸಂಕೀರ್ಣತೆ ಯಿಂದ ಕೂಡಿದ ಸಮಯ ಇದಾಗಿದೆ ಮೀಸಲಾತಿಯ ಪರವಾಗಿ–ವಿರೋಧವಾಗಿ ನಾನು ಏನೂ ಹೇಳುವುದಿಲ್ಲ ಇನ್ನು ಕೆಲವು ದಿನಗಳಲ್ಲಿ ನಾನು ಈ ಬಗ್ಗೆ ಲೇಖನ ಬರೆಯಲಿದ್ದೇನೆ ಎಂದು ಹೇಳಿದರು.