ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬೇಡ್ಕಣಿ ಜನತಾವಿದ್ಯಾಲಯದಲ್ಲಿ ಶರಣ್ ಅಭಿನಯದ ಗುರುಶಿಷ್ಯರು ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ಮುಹೂರ್ತ ನಡೆಸಲಾಗಿದ್ದ ಚಿತ್ರವನ್ನು ಜಂಟಲಮನ್ ಸಿನೇಮಾವನ್ನು ನಿರ್ದೇಶಿಸಿರುವ ಜಡೇಶ ಹಂಪಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ ಬ್ಯಾನರ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗ್ತಾ ಇದ್ದು, ಶರಣ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ಸ್ ಈ ಹಿಂದೆಯೇ ಬಿಡುಗಡೆಯಾಗಿತ್ತು.
ಈ ಚಿತ್ರ 1995 ರ ಕಾಲಘಟ್ಟದ ಗುರು ಶಿಷ್ಯರನ್ನು ನೆನಪಿಸೋ ಕಥಾ ಹಂದರವನ್ನ ಹೊಂದಿದೆ. ಮುಖ್ಯವಾಗಿ ಗುರು ಶಿಷ್ಯರು ಅನ್ನೋ ಟೈಟಲ್ ಎಷ್ಟು ಸ್ಟ್ರಾನ್ಗ್ ಹಾಗೂ ಕ್ಯಾಚಿ ಆಗಿದೆಯೋ ಅದೇ ರೀತಿಯ ಸನ್ನಿವೇಶಗಳನ್ನ ನಿರ್ಮಿಸೋಕೆ ಮಲೆನಾಡಿನ ಈ ಸ್ಥಳವನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದ ಮುಖ್ಯ ಹಂತಗಳ ಚಿತ್ರೀಕರಣ ಇದೇ ಸ್ಥಳದಲ್ಲಿ ನಡೆಯಲಿದೆ. ಒಂದು ಶಾಲೆಯಲ್ಲಿ ದೈಹಿಕ ಶಿಕ್ಷಕ ಇಲ್ಲದಿರೋ ಸಂದರ್ಭದಲ್ಲಿ ಶಿಕ್ಷಕನಾಗಿ ಬಂದು, ದನಗಳನ್ನು ಕಟ್ಟಿ ಹಾಕೋ ಶಾಲೆಯ ಮೈದಾನದಲ್ಲಿ ಆಟಗಳನ್ನು ಆಡಿಸೋ ಸನ್ನಿವೇಶಗಳನ್ನ ಚಿತ್ರೀಕರಿಸಲಾಗುತ್ತಿದೆ. ಈ ಚಿತ್ರ, ಪ್ರೇಕ್ಷಕರನ್ನು ಇಲ್ಲಿಯ ಪರಿಸರಕ್ಕೆ ಟ್ರಾವೆಲ್ ಮಾಡಿಸೋ ಮುಖಾಂತರ ಮಲೆನಾಡಿನ ಒಂದು ಶ್ರೀಮಂತಿಕೆಯನ್ನ ಜನರಿಗೆ ಪರಿಚಯಿಸುತ್ತೆ ಎಂದು ಆದ್ಯೋತ್ ನ್ಯೂಸ್ ಗೆ ನಟ ಶರಣ ತಿಳಿಸಿದ್ದಾರೆ
ಆದ್ಯೋತ್ ನ್ಯೂಸ್ ನೊಂದಿಗೆ ಮಾತನಾಡಿದ ಶರಣ,
ಕಳೆದ 20 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ ಮೊದಲ ಹತ್ತು ವರ್ಷ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದೇನೆ ಸುಮಾರು ನೂರು ಚಿತ್ರವಾಗಿರಬಹುದು.ನಂತರದ ಹತ್ತು ವರ್ಷದಲ್ಲಿ 13 ಚಿತ್ರ ಮಾಡಿದ್ದೇನೆ ಇವೆಲ್ಲವೂ ನಾಯಕ ನಟನಾಗಿ ನಟಿಸಿದ್ದು.
ಆದ್ಯೋತ್ ನ್ಯೂಸ್–ಶರಣ ನಟನೆಯ ಚಿತ್ರಗಳೆಲ್ಲವೂ ಹಾಸ್ಯ ಚಿತ್ರಗಳೇ ಆಗಿರುತ್ತವೆ ಮುಂದೆ ಆಕ್ಷನ್,ಸೆಂಟಿಮೆಂಟ್ ಚಿತ್ರ ಮಾಡುವ ಯೋಜನೆ ಇದೆಯೇ?
ಶರಣ— ಹಾಸ್ಯ ಚಿತ್ರಗಳನ್ನು ಮಾಡುವುದು ನನ್ನ ಆದ್ಯತೆ ಈ ಒಂದು ಜೀವಮಾನ ನಟಿಸಿದರೂ ಹಾಸ್ಯವಸ್ತು ಮುಗಿಯುವುದಿಲ್ಲ ಹೀಗಾಗಿ ಬೇರೆ ಯೋಚನೆ ಇಲ್ಲ ನನ್ನ ಚಿತ್ರಗಳಲ್ಲಿ ಹಾಸ್ಯಕ್ಕೆ ಒತ್ತುಕೊಟ್ಟರೂ ಆಕ್ಷನ್ ಹಾಗೂ ಸೆಂಟಿಮೆಂಟ್ ಇರುತ್ತದೆ.
ಆದ್ಯೋತ್ ನ್ಯೂಸ್:-ಶರಣ ಬಹತೇಕ ಚಿತ್ರದಲ್ಲಿ ಮೀಸೆ ಇಲ್ಲದೆ ನಟಿಸುತ್ತದ್ದಿರಿ ಈ ಚಿತ್ರದಲ್ಲಿ ಮೀಸೆ ಇರುವ ಪಾತ್ರವೇ?
ಶರಣ:- ಇದು 1995ರ ಸನ್ನಿವೇಶ ಇರುವ ಚಿತ್ರ ಈ ಪಾತ್ರಕ್ಕೆ
ಮೀಸೆ ಅವಶ್ಯಕತೆ ಇದೆ.
ಆದ್ಯೋತ್ ನ್ಯೂಸ್:- ಚಿಕ್ಕಣ್ಣ ಮತ್ತು ನಿಮ್ಮ ಕಾಂಬಿನೇಷನ್ ಉಳ್ಳ ಬಹಳಷ್ಟು ಚಿತ್ರಗಳು ಗೆದ್ದಿವೆ ಈ ಚಿತ್ರದಲ್ಲಿ ಚಿಕ್ಕಣ್ಣ ಇದ್ದಾರೆಯೇ? ಚಿತ್ರದ ನಾಯಕಿ ಯಾರು? ಕನ್ನಡದವರೋ ಪರಭಾಷೆಯವರೋ
ಶರಣ:-ಚಿಕ್ಕಣ್ಣ ಮತ್ತು ನಾನು ಆಬಿನಯಿಸಿದ ಚಿತ್ರಗಳು ಗೆದ್ದಿರುವುದು ನಿಜ ಆದರೆ ಈ ಚಿತ್ರದಲ್ಲಿ ಅವರಿಲ್ಲ, ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ ಅವರು ಖಂಡತವಾಗಿ ಕನ್ನಡದವರೇ ಆಗಿರುತ್ತಾರೆ.
ಆದ್ಯೋತ ನ್ಯೂಸ್:- ಗುರುಶಿಷ್ಯರು ಚಿತ್ರದ ಬಗ್ಗೆ ಹಾಗೂ ಇಲ್ಲಿಯ ಪರಿಸರದ ಬಗ್ಗೆ….
ಶರಣ:-ಗುರುಶಿಷ್ಯರ ಸಂಬಂಧದ ಮೇಲೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ ಚಿತ್ರದ ಬಹುತೇಕ ಭಾಗ ಇಲ್ಲಿಯೇ ಚಿತ್ರೀಕರಣವಾಗಲಿದೆ ಈ ಪರಿಸರ ಈ ಚಿತ್ರದ ಒಂದು ಪಾತ್ರವಾಗಿರುತ್ತದೆ.ಚಿತ್ರ ನೋಡುವ ಪ್ರೇಕ್ಷಕರು ಇಲ್ಲಿ ಪ್ರಯಾಣಿಸುತ್ತಿರುವ ಅನುಭವವನ್ನು ಚಿತ್ರ ನೀಡಲಿದೆ.
ಆದ್ಯೋತ್ ನ್ಯೂಸ್:- ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ.
ಶರಣ:- ಈಗಷ್ಟೆ ಚೊತ್ರೀಕರಣ ಪ್ರಾರಂಭಿಸಿದ್ದೇವೆ ಆದರೂ ಮೇ ಕೊನೆಯವಾರದಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂಬ ಯೋಜನೆ ಇದೆ.