ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಉಂಬಳಮನೆ ಹೋಬಳಿಯ
ಮಾದನಕಳ ಕೆರೆಬೈಲ್ನಲ್ಲಿ ಸಮಾಜಕಲ್ಯಾಣ ಇಲಾಖೆ,ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಮಿಸುತ್ತಿರುವ
21.70ಕೋಟಿರೂ. ವೆಚ್ಚದ ವಸತಿಶಾಲೆಯ ಶಂಕುಸ್ಥಾಪನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,ಆಧುನಿಕ ಶಿಕ್ಷಣ ಎನ್ನುವುದು ಇಂಗ್ಲೀಷ ಶಿಕ್ಷಣ ಎನ್ನುವ ಭ್ರಮೆಗೆ ನಾವೆಲ್ಲರೂ ಒಳಗಾಗಿದ್ದೇವೆ ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳು ಮುಚ್ಚಿ ಹೋಗುತ್ತಿವೆ ಪಾಲಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಇಂಗ್ಲೀಷ ಮಾದ್ಯಮದ ಶಾಲೆಗೆ ದುಬಾರಿ ಹಣವನ್ನು ತೆತ್ತು ಸೇರಿಸುತ್ತಿದ್ದಾರೆ ಇದನ್ನು ತಪ್ಪಿಸುವ ಉದ್ದೇಶದಿಂದ ಸರಕಾರ ಹೋಬಳಿಗೊಂದರಂತೆ ಎಲ್ಲಾ ಸೌಲಭ್ಯವಿರುವ ಇಂಗ್ಲೀಷ ಮಾದ್ಯಮದ ವಸತಿ ಶಾಲೆಯನ್ನು ಪ್ರಾರಂಭಿಸುತ್ತಿದೆ
ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಮಕ್ಕಳ ಭವಿಷ್ಯದ ದೃಷ್ಠಿಯಿಂದ ಉತ್ತಮ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಅಲ್ಲದೆ ಇಂದು ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ದರಾಗಿರುವವರು ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದಿದ್ದರು. ಆದರೆ ಇಂದು ಜನರು ಆಂಗ್ಲಾಭಾಷೆಯ ಶಿಕ್ಷಣವೇ ಬೇಕು ಎನ್ನುತ್ಥಾರೆ ಸರಕಾರ ಜನರ ಅಭಿಲಾಷೆಯನ್ನು ಈಡೇರಿಸಲು ಮುಂದಾಗಿದೆ ಎಂದು ಹೇಳಿದರು.
ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿಗೃಹ ಇರುತ್ತದೆ ಭೋಜನಾಲಯ,ಪ್ರಾಂಶುಪಾಲರು,ಬೋಧಕರ ವಸತಿಗೃಹ ಇರುತ್ತದೆ. ವಿಶಾಲವಾದ ಆಟದ ಮೈದಾನ, ಸಭಾಂಗಣ, ವಿಶಾಲವಾದ ರಸ್ತೆಗಳು ಆಧುನಿಕ ತರಗತಿ ಕೋಣೆ,ಸೋಲಾರ್ ಮೂಲಕ ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ. 18 ತಿಂಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಧಿ ನೀಡಲಾಗಿದೆ ಎಂದು ಕಾಗೇರಿ ಮಾಹಿತಿ ನೀಡಿದರು.
ಜಿಪಂ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ,ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ,ಕಾನಸೂರು ಗೃಆಪಂ ಅಧ್ಯಕ್ಷ ವೀರಭದ್ರ ಜಂಗಣ್ಣನವರ್,ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ,ಹಸರಗೋಡು ಗ್ರಾಪಂ ಉಪಾಧ್ಯಕ್ಷ ಭಾಸ್ಕರ ನಾಯ್ಕ, ಇಂದಿರಾವಸತಿ ಶಾಲೆಯ ಮುಖ್ಯಶಿಕ್ಷಕ ಸುಧಾಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ.ರಸ್ತೆಗಳ ಸುಧಾರಣೆಗೆ ಸಾಕಷ್ಟು ಅನುದಾನಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ ವಿಶ್ವೇಶ್ವರ ಹೆಗಡೆ ಕಾಗೇರಿ,ಗ್ರಾಮಪಂಚಾಯತ್ ಗಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿದೆ ಜನರ ಕಷ್ಟಸುಖಗಳಿಗೆ ಸ್ಪಂದಿಸಲು ಉತ್ತಮ ಅವಕಾಶವಿರುತ್ತದೆ.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅನುದಾನವಿದೆ ನೌಕರರು ಈ ಬಗ್ಗೆ ಹೇಳುವುದಿಲ್ಲ ಕಾರಣ ನೀವು ಹೆಚ್ಚು ಕೆಲಸ ಮಾಡಿದಷ್ಟು ಅವರ ಕೆಲಸ ಹೆಚ್ಚಾಗುತ್ತದೆ.ಆದ್ದರಿಂದ ಅವರು ನಿಮಗೆ ಹೆಚ್ಚು ಮಾಹಿತಿ ನೀಡುವುದಿಲ್ಲ ಆದರೆ ಜನರಿಗೆ ಉತ್ತರ ನೀಡುವವರು ಜನಪ್ರತಿನಿಧಿಗಳಾಗಿರುತ್ತಾರೆ ಆದ್ದರಿಂದ ಉದ್ಯೋಗಖಾತ್ರಿ ಯೋಜನೆಯ ಪ್ರಯೋಜನವನ್ನು ಜನಪ್ರತಿನಿಧಿಗಳು ಜನರಿಗೆ ಸಿಗುವಂತೆ ಮಾಡಬೇಕು ಎಂದು ಕಾಗೇರಿ ಹೇಳಿದರು.