ತಮ್ಮನ್ನು ಪ್ರತಿನಿಧಿಸುವವರನ್ನು ಆರಿಸುವ ಮತದಾರರಿಗೆ ಜವಾಬ್ದಾರಿಯಿದೆ–ವೈ.ಎಸ್.ವಿ.ದತ್ತಾ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬೈಲಹಳ್ಳಿಯಲ್ಲಿ ಗ್ರಾಪಂಗೆ ಆಯ್ಕೆಯಾಗಿರುವ ಶ್ರೀಪಾದ ಹೆಗಡೆಯವರು ಆಯೋಜಿಸಿದ್ದ ಮತದಾರರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವೈ.ಎಸ್.ವಿ.ದತ್ತಾ ಮಾತನಾಡಿ,ಇಂದು ರಾಜಕಾರಣಿಗಳಲ್ಲಿ ಸೈದ್ಧಾಂತಿಕ ಬದ್ಧತೆಯ ಕೊರತೆ ಕಂಡುಬರುತ್ತಿದೆ ಇದರಿಂದ ಜನರಲ್ಲಿ ರಾಜಕಾರಣಿಗಳ ಬಗ್ಗೆ ಅಸಹ್ಯಮೂಡುತ್ತಿದ್ದು ಜನಪ್ರತಿನಿಧಿಗಳಿಗೆ ಮತ್ತು ರಾಜಕಾರಣಿಗಳಿಗೆ ಸೈದ್ಧಾಂತಿಕ ಬದ್ಧತೆ ಇರಬೇಕು ಪ್ರತಿನಿಧಿ ಆರಿಸುವ ಮತದಾರರಿಗೆ ಜವಾಬ್ದಾರಿಯಿದೆ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತಚಲಾಯಿಸಬೇಕು ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಬೇಕು ಬದ್ದತೆಯ ಕೊರತೆಯಿಂದ ತತ್ವ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅನ್ಯ ಮಾರ್ಗಗಳಲ್ಲಿ ಆಯ್ಕೆಯಾಗುತ್ತಿದ್ದಾರೆ ಇಂಥವರ ಬಗ್ಗೆ ಮತದಾರರು ಜಾಗೃತಿ ವಹಿಸಬೇಕು ರಾಮಕೃಷ್ಣ ಹೆಗಡೆ ಮತ್ತು ಅಬ್ದುಲ್ ನಜೀರ್ ಸಾಬ್ ಅವರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಪಂಚಾಯತ್ ಇಂದು ಕಾರ್ಯನಿರ್ವಹಿಸುತ್ತೀವೆ. ಆದರೆ ತಾಲೂಕ ಪಂಚಾಯತ್ ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದೆ , ಅನುದಾನಗಳಿಲ್ಲದೆ ಪ್ರತಿನಿಧಿಗಳು ನಾಮಕಾವಸ್ಥೆಯಾಗಿದ್ದಾರೆ. ಇದರ ವಾಸ್ತವಾಂಶ ಸುಲಭವಲ್ಲ. ವಿಕೇಂದ್ರಿಕರಣ ವ್ಯವಸ್ಥೆ ಮಾಡುವ ಮನಸ್ಸು ಪಕ್ಷಾತೀತವಾಗಿ ಇರಬೇಕು .ಜನಪ್ರತಿನಿಧಿüಗಳು ಅಧಿಕಾರ ಇದ್ದಾಗ ತಮ್ಮಿಂದಾದ ಸಹಾಯವನ್ನು ಜನರಿಗೆ ಮಾಡಬೇಕು ಎಂದು ಹೇಳಿದರು .

ಜೆಡಿಎಸ್ ಮುಖಂಡ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ವ್ಯವಸ್ಥೆ ನಿಂತ ನೀರಾಗಬಾರದು ಒಂದು ಕ್ಷೇತ್ರದಲ್ಲಿ ಹಲವರನ್ನು ಆಯ್ಕೆ ಮಾಡುವ ಪದ್ಧತಿ ಇದ್ದು ಅವರಿಗೆ ಪ್ರತ್ಯೇಕವಾದ ಆಯ್ಕೆಗಳು ನಡೆಯುವಂತಾಗಬೇಕು.ಗ್ರಾಮ ಪಂಚಾಯತಿ ಮೀಸಲಾತಿ ಇಲ್ಲದವರಿಗೆ ನೀಡಲಾಗುತ್ತಿದೆ ಪಂಚಾಯತಿಯಲ್ಲಿ ಇರುವವರಿಗೆ ಮೀಸಲಾತಿಯನ್ನು ಪ್ರಕಟಿಸಬೇಕು ಈ ನಿಟ್ಟಿನಲ್ಲಿ ಪಂಚಾಯತ್ ಸುಧಾರಣೆ ಆಗಬೇಕಾಗಿದೆ ಎಂದು ಹೇಳಿದರು
ಬಿಜೆಪಿ ಮುಖಂಡ ಕೆ.ಜಿ. ನಾಯ್ಕ ಹಣಜಿಬೈಲ್ ಮಾತನಾಡಿ, ಸರ್ಕಾರವು ಕೊಟ್ಟ ಹಣ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಜನಪ್ರತಿನಿಧಿ ಕರ್ತವ್ಯ ,ಜನಪ್ರತಿನಿಧಿಗಳು ಜನರ ಶೋಷಣೆ ಮಾಡದೆ ಸಮಾಜದ ವಿಶ್ವಾಸಗಳಿಸುವ ಕೊಳ್ಳಬೇಕು ಎಂದರು.
ವೇದಿಕೆಯಲ್ಲಿದ್ದ ರಾಜೇಶ್ವರಿ ಹೆಗಡೆ ,ರಮೇಶ್ ಹೆಗಡೆ ,ಎಂ ಜಿ ಹೆಗಡೆ ಮಾತನಾಡಿದರು.
ವೈ. ಎಸ್. ವಿ. ದತ್ತಾ ಸೇರಿದಂತೆ ವೇದಿಕೆಯಲ್ಲಿದ್ದ ಎಲ್ಲಾ ಜನಪ್ರತಿನಿಧಿಗಳನ್ನು ಶ್ರೀ ಪಾದ ಹೆಗಡೆ ಹಾಗೂ ಸತೀಶ ಹೆಗಡೆ ಕುಟುಂಬದವರು ಸನ್ಮಾನಿಸಿ ಗೌರವಿಸಿದರು .
ಪ್ರಣವ್ ಭಟ್ ಅಭಿನಂದನೆ ಕುರಿತು ಮಾತನಾಡಿದರು ಜಿಎಸ್ ಹೆಗಡೆ ಬೆಳ್ಳೆ ಮಡಿಕೆ ಅಧ್ಯಕ್ಷತೆ ವಹಿಸಿದ್ದರು
ಜಿಲ್ಲಾ ಪಂಚಾಯತ್ ಸದಸ್ಯ ನಾಗರಾಜ್ ನಾಯ್ಕ ಬೇಡ್ಕಣಿ. ವಿನಾಯಕ್ ಹೆಗಡೆ, ಪ್ರಸನ್ನ ಹೆಗಡೆ, ವಾಜಗೋಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸದಸ್ಯರಾದ ಕೃಷ್ಣಮೂರ್ತಿ ಐಸೂರು, ಎಸ ಎಂ ಭಟ್, ನಾಗರಾಜ ಗೌಡ, ಸುರೇಶ್ ನಾಯ್ಕ,ಸರೋಜ ನಾಯ್ಕ, ಮಂಗಲ ಗೌಡ , ಮಾಜಿ ಜಿಪಂ ಸದಸ್ಯ ಈಶ್ವರ ನಾಯ್ಕ ಮನಮನೆ, ಪಪಂ ಉಪಾಧ್ಯಕ್ಷ ರವಿ ಕುಮಾರ್ ನಾಯ್ಕ, ಕಾವಂಚೂರು ಪಂಚಾಯತ್ ಅಧ್ಯಕ್ಷ ಜಿ ಟಿ ನಾಯ್ಕ,ಕೆ ಐ ಹೆಗಡೆ ಮುಂತಾಧವರು ಉಪಸ್ಥಿತರಿದ್ದರು
ಸುಧಾ ಹೆಗಡೆ ಸಂಗಡಿಗರು ಸ್ವಾಗತ ಗೀತೆ ಹಾಡಿದರು ನೂತನ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಪಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು ಭಾರತಿ ಹೆಗಡೆ ನಿರೂಪಿಸಿದರು .
#####
ಅಣಲೇಬೈಲ್ ಜಿಪಂ ವ್ಯಾಪ್ತಿಯ ಹಾರ್ಸಿಕಟ್ಟಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಸಭೆಯನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ,ಪಕ್ಷದ ತತ್ವ, ಸಿದ್ದಾಂತವನ್ನು ಅರಿತು ಕಾರ್ಯಕರ್ತರು ಕೆಲಸಮಾಡಬೇಕೆ ಹೊರತು ಸ್ವಾರ್ಥಕ್ಕಾಗಿ ಕೆಲಸಮಾಡಬಾರದು.ನಿಸ್ವಾರ್ಥ ಸೇವಕರಾಗಬೇಕು.ಪಕ್ಷದ ಸಂಘಟನೆಯ ಹೊಣೆ ಹೊತ್ತವರು ಮನೆಯಲ್ಲಿ ಕುಳಿತುಕೊಳ್ಳದೆ ಪಕ್ಷದ ಏಳಿಗೆಗಾಗಿ ಶ್ರಮಿಸಬೇಕು.ಚುನಾಯಿತ ಪ್ರತಿನಿಧಿಗಳು ಕಾರ್ಯಕರ್ತರ ಭಾವನೆಗೆ ಸ್ಪಂದಿಸಬೇಕು ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು.ಚುನಾವಣೆಗಾಗಿ ಪಕ್ಷದ ಸಂಘಟನೆ ಮಾಡಬಾರದು, ಹಿರಿಯರು ಶ್ರಮಪಟ್ಟು ಕಟ್ಟಿ ಬೆಳೆಸಿದ ಪಕ್ಷವನ್ನು ಮುನ್ನಡಿಸಿಕೊಂಡು ಹೋಗುವ ಜವಾಬ್ದಾರಿ ಯುವಕಾರ್ಯಕರ್ತರಲ್ಲಿದ್ದು ಅವರಿಗೆ ಸರಿಯಾದ ಮಾರ್ಗದರ್ಶನವನ್ನು ಹಿರಿಯರು ನೀಡುವಂತಾಗಬೇಕು. ಕಾಂಗ್ರೆಸ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದಲ್ಲ ಎನ್ನುವುದನ್ನು ಮೊದಲು ಕಾರ್ಯಕರ್ತರು ತಿಳಿದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸದೇ ಕಾರ್ಯನಿರ್ವಹಿಸುತ್ತಿದ್ದು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಜನಸಾಮಾನ್ಯರ ಸ್ಥಿತಿಯನ್ನು ಗಮನಿಸುತ್ತಿಲ್ಲ. ಇಂಥ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಜವಾಬ್ದಾರಿ ಕಾರ್ಯಕರ್ತರದ್ದು ಎಂದು ಭೀಮಣ್ಣ ನಾಯ್ಕ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗ್ವತ್, ತಾಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್,ಸಿ.ಆರ್.ನಾಯ್ಕ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಎಂ.ಹೆಗಡೆ, ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ, ನಾಸೀರ್ ಖಾನ್, ಜಿಲ್ಲಾ ಯುತ್ ಅಧ್ಯಕ್ಷ ಕುಮಾರ ಜೋಶಿ, ಇತರರಿದ್ದರು.
ಇದೇ ಸಂದರ್ಭದಲ್ಲಿ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಹಿರಿಯ ಕಾಂಗ್ರೆಸ್ಸಿಗರನ್ನು ಹಾಗೂ ಪಕ್ಷದ ಹಿಂದಿನ ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು.

ಅಣಲೇಬೈಲ್, ಹೆಗ್ಗರಣಿ, ನಿಲ್ಕುಂದ, ತಂಡಾಂಗುಂಡಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಹಾರ್ಸಿಕಟ್ಟಾ ಘಟಕದ ಅಧ್ಯಕ್ಷ ಆರ್.ಕೆ.ನಾಯ್ಕ, ಎಸ್.ಆರ್.ಹೆಗಡೆ ಕುಂಬಾರಕುಳಿ, ಮಧುಕೇಶ್ವರ ಭಟ್ಟ ಗೊದ್ಲಬೀಳ ಕಾರ್ಯಕ್ರಮ ನಿರ್ವಹಿಸಿದರು. ಅಣಲೇಬೈಲ್ ಜಿಪಂ ವ್ಯಾಪ್ತಿಯ ಒಂಬತ್ತು ಗ್ರಾಪಂನ ಪಕ್ಷದ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

About the author

Adyot

Leave a Comment