ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಕೊಂಡ್ಲಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಬಂದ ಜಾಯಿಂಟ್ ವ್ಹೀಲ್ ಕಾರ್ಮಿಕರು ಲಾಕ್ ಡೌನ್ ಪರಿಣಾಮವಾಗಿ ಮಹಾರಾಷ್ಟ್ರಕ್ಕೆ ಹೋಗಲು ಆಗದೇ ತೀವ್ರ ಸಂಕಷ್ಟದಲ್ಲಿದ್ದ ಬಗ್ಗೆ ತಿಳಿದು ಸುಮಾರು 10 ಕುಟುಂಬಗಳಿಗೆ ಆರ್.ಎಸ್.ಎಸ್ ನ ಸೇವಾ ಭಾರತಿ ವತಿಯಿಂದ
ಆಹಾರ ಸಾಮಗ್ರಿ ಹಾಗೂ ತರಕಾರಿಯ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ದಿನೇಶ್ ಪಟೇಲ್, ಸೇವಾ ಭಾರತಿ ಯಾವತ್ತೂ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸಮಾಡುತ್ತಿದ್ದು, ಈಗಾಗಲೇ ಕೋವಿಡ 19 ಸಮಯದಲ್ಲಿ ತಾಲ್ಲೂಕಿನ ಸಾರ್ವಜನಿರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂತೋಷ ಹುಲೇಕಲ್, ಗಣೇಶ್ ಮೇಸ್ತ, ಆನಂದ ನಾಯ್ಕ ಕೊಂಡ್ಲಿ ಉಪಸ್ಥಿತರಿದ್ದರು.
#####
ತಾಲೂಕು ಆಸ್ಪತ್ರೆಯಲ್ಲಿ ಕೊವಿಡ್ ತಪಾಸಣೆಗೆ ಬರುವವರಿಗೆ ನೆರಳಿನ ವ್ಯವಸ್ಥೆ
ಸಿದ್ದಾಪುರ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಗೆ ಬರುವ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆಯನ್ನು ರಾಜ್ಯ ಯುವ ನಾಮದಾರಿ ವೇದಿಕೆ ಹಾಗೂ ಆಶೀರ್ವಾದ ಸೋಲಾರ್ ಸಿಸ್ಟಮ್ ಬೆಂಗಳೂರು ಸಹಯೋಗದಲ್ಲಿ ಕಲ್ಪಿಸಲಾಗಿದೆ.
ಪೆಂಡಾಲ್ ಜೊತೆಗೆ ಕುರ್ಚಿಗಳನ್ನು ಹಾಕಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ತಪಾಸಣೆಗೆ ಬರುವ ಸಾರ್ವಜನಿಕರಿಗೆ ಕಲ್ಪಿಸಿಕೊಡಲಾಗಿದೆ.