ಆದ್ಯೋತ್ ಸುದ್ದಿನಿಧಿ:
ತಾಲೂಕಿನ ಕವಂಚೂರನ ನವೀನ ಗುತ್ಯ ಹರಿಜನ(೧೮) ಎಂಬ
ಯುವಕ ಚಲಿಸುತ್ತಿದ್ದ ರೇಲ್ವೆಯಿಂದ ಇಳಿಯಲು ಹೋಗಿ ರೇಲ್ವೆ ಅಡಿಯಲ್ಲಿ ಸಿಕ್ಕಿ ಒಂದು ಕಾಲು ಮತ್ತು ಕೈಯನ್ನು ಕಳೆದುಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ತನ್ನ ಸ್ನೇಹಿತನನ್ನು ಬೆಂಗಳೂರಿಗೆ ಕಳುಹಿಸಲು ಬಂದಿದ್ದ ಈ ಯುವಕ ಸ್ನೇಹಿತನನ್ನು ರೇಲ್ವೆ ಯಲ್ಲಿ ಕುಳ್ಳಿರಿಸುವಷ್ಟರಲ್ಲಿ ರೇಲ್ವೆ ಚಲಿಸಲು ಪ್ರಾರಂಭವಾದಾಗ ಗಾಭರಿಯಿಂದ ಇಳಿಯಲು ಹೋಗಿ ಆಯ ತಪ್ಪಿ ರೇಲ್ವೆ ಅಡಿಗೆ ಬಿದ್ದ ಪರಿಣಾಮ ಕಾಲು- ಕೈ ತುಂಡಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳುವನ್ನು ಚಿಕಿತ್ಸೆಗೆ ಸಾಗರದ ಆಸ್ಪತ್ರೆಗೆ ಸೇರಿಸಲಾಗಿದೆ.
ಬಾಲಕನಿಗೆ ತಂದೆ-ತಾಯಿಗಳಾಗಲಿ,ಸಂಬಂಧಿಕರಾಗಲಿ ಇಲ್ಲ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ರೇಲ್ವೆ ಪೊಲೀಸ್ ರು ಪ್ರಕರಣ ದಾಖಲಿಸಿದ್ದಾರೆ.