ಸಿದ್ದಾಪುರ ಬೆಂಕಿ ಅವಘಡ ಪ್ರಕರಣ ಸಮಗ್ರ ತನಿಖೆ ನಡೆಸಲು ಸ್ಪೀಕರ್ ಸೂಚನೆ

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ವಿಜಯಾ ಬ್ಯಾಂಕ್ ಪಕ್ಕದ ಜುಬೇರ ಅಬ್ದುಲ್ ಖಾದರ್ ಸಾಬ್ ಎನ್ನುವವರ ಮನೆಗೆ ಬೆಂಕಿ ಬಿದ್ದ ಪ್ರಕರಣ ಹಾಗೂ ಅನಧಿಕೃತವಾಗಿ ಸ್ಪೋಟಕವನ್ನು ಇಟ್ಟುಕೊಂಡಿರುವ ಕುರಿತು ಸಮಗ್ರ ತನಿಖೆ ನಡಸಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ರವಿವಾರ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.


ಶನಿವಾರ ನಡೆದಿರುವ ಬೆಂಕಿ ಅವಘಡ ಪ್ರಕರಣದಲ್ಲಿ ಅನಧಿಕೃತವಾಗಿ ಸ್ಪೋಟಕ ಪಟಾಕಿ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದು ಮತ್ತು ತಯಾರಿ ನಡೆಸುತ್ತಿರುವುದು ಹಾಗೂ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಸ್ಪೋಟಕ ಸಾಮಗ್ರಿಗಳನ್ನು ಇಟ್ಟುಕೊಂಡಿರುವುದು ಸಂಶಯಕ್ಕೆ ಆಸ್ಪದವಾಗಿದೆ. ಕಾರಣ ಈ ಪ್ರಕರಣದಲ್ಲಿ ಮನೆಗೆ ತಾಗಿರುವ ಬೆಂಕಿ ಸ್ಪೋಟಕ ಸಾಮಗ್ರಿಗಳಿಗೆ ತಾಗಿದ್ದರೆ ಅಲ್ಲಿಯ ಸುತ್ತ-ಮುತ್ತಲಿನ ವಾಸ್ತವ್ಯದ ಮನೆಗಳಿಗೆ ಹಾಗೂ ಜನರಿಗೆ ಬಾರಿ ಅನಾಹುತವಾಗುವ ಸಾಧ್ಯತೆ ಇರುವುದು ತಿಳಿದು ಬರುತ್ತದೆ
ಹಾಗಾಗಿ ಸದರಿ ಪ್ರಕರಣವನ್ನು ಬೆಂಕಿ ಅವಘಡ ಅಥವಾ ಪಟಾಕಿ ಸಾಮಗ್ರಿಗಳಿಗೆ ಮಾತ್ರ ಸೀಮಿತಗೊಳಿಸಿ ಪ್ರಕರಣವನ್ನು ಮುಚ್ಚಿ ಹಾಕದೆ ಸಾರ್ವಜನಿಕರ ಹಿತದೃಷ್ಠಿಯಿಂದ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಉಪವಿಭಾಗಾಧಿಕಾರಿಗಳ
ನವೀಕರಣಗೊಂಡಿರುವ ಕಚೇರಿಯನ್ನು ಇತ್ತೀಚೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ಡಿವೈಎಸಪಿ ಜಿ.ಟಿ.ನಾಯಕ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment