ಸಿದ್ದಾಪುರ ಪೊಲೀಸರಿಗೆ ಕೊನೆಗೂ ಸಿಕ್ಕಿದ ‘ಗೃಹಭಾಗ್ಯ’

ಸಿದ್ದಾಪುರ : ಸಿದ್ದಾಪುರ ಪೊಲೀಸರ ಹಲವು ವರ್ಷಗಳ ಕಾಯುವಿಕೆಗೆ ಕಡೆಗೂ ಮುಕ್ತಿ ದೊರಕಿದೆ. ಸರಿಯಾದ ಪೊಲೀಸ್ ಕ್ವಾಟ್ರಸ್ ಇಲ್ಲದೇ ಬಾಡಿಗೆ ಕಟ್ಟಡಗಳಲ್ಲಿ ವಾಸಿಸುತ್ತಿದ್ದ ಪೊಲೀಸರಿಗೆ ಗೃಹಭಾಗ್ಯ ಲಭ್ಯವಾಗಿದೆ.

ಹಲವಾರು ವರ್ಷಗಳಿಂದ ಪೊಲೀಸರು ಸರಿಯಾದ ಸೂರಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಹೊಸ ಪೊಲೀಸ್ ಠಾಣೆ ನಿರ್ಮಾಣವಾದಾಗಿನಿಂದ ನಮಗೂ ಹೊಸ ಮನೆ ಸಿಗುತ್ತೆ ಅಂತ ಕಾಯುತ್ತಿದ್ದರು. ಅದರಂತೆ ನಾಲ್ಕೈದು ವರ್ಷಗಳ ನಂತರ ಮನೆ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಯಿತು. ಆದ್ರೆ ಕಾಮಗಾರಿ ಅಮೆಗತಿಯಲ್ಲಿ ಸಾಗಿದ್ದರಿಂದ ಬೇಗ ಮನೆ ಸಿಗುತ್ತೆ ಅಂತ ಕಾಯುತ್ತಿದ್ದ ಪೊಲೀಸರು ನಿರಾಸೆ ಅನುಭವಿಸುವಂತಾಯ್ತು. ಕಾಮಗಾರಿ ಪ್ರಾರಂಭವಾಗಿ ಸುಮಾರು 2-3 ವರ್ಷಗಳ ನಂತರ ಅಂತೂ ಮನೆಗಳು ನಿರ್ಮಾಣವಾಗಿ ಈಗ ಪೊಲೀಸರ ಸುಪರ್ದಿಗೆ ಬಂದಿದೆ. ಪೂಜೆ, ಹೋಮಗಳು ನಡೆದಿದ್ದು, ಹೊಸ ಮನೆಯ ಪ್ರವೇಶಕ್ಕಾಗಿ ಪೊಲೀಸ್ ಸಿಬ್ಬಂದಿಗಳು ಸಿದ್ಧವಾಗಿದ್ದಾರೆ.

About the author

Adyot

Leave a Comment