ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಸೊಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ರವಿವಾರ ಸಿದ್ದಾಪುರದಲ್ಲಿ ಎರಡು ಕುಮಟಾದಲ್ಲಿ ನಾಲ್ಕು ಪ್ರಕರಣಗಳು ಕಂಡುಬಂದಿದೆ.
ಜಿಲ್ಲೆಯಲ್ಲಿ ಒಟ್ಟಾರೆ ಸೊಂಕಿತರ ಸಂಖ್ಯೆ 83 ಕ್ಕೇರಿದ್ದು 66 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಸಿದ್ದಾಪುರ ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತಹಸೀಲ್ದಾರ ಮಂಜುಳಾ ಭಜಂತ್ರಿ
ತಾಲೂಕಿನಲ್ಲಿ ರವಿವಾರ 2 ಕೊವಿಡ್ ಪ್ರಕರಣಗಳು ವರದಿಯಾಗಿದ್ದು ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜಿಡ್ಡಿ ಗ್ರಾಮದಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದ 32 ವರ್ಷದ ವ್ಯಕ್ತಿಯೊರ್ವನಿಗೆ ಹಾಗೂ ಕವಂಚೂರಿನಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಮಹಾರಾಷ್ಟ್ರದಿಂದ ಬಂದ 20 ವರ್ಷದ ವ್ಯಕ್ತಿಯಲ್ಲಿ ಕೊವಿಡ್ ಪಾಸಿಟಿವ್ ಇರುವದು ದೃಢಪಟ್ಟಿದೆ.ಇವರನ್ನು ಕಾರವಾರದ ಕೊವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಮೇ.20ರಂದು ಮಸ್ಕತ್ ನಿಂದ ಬಂದಿದ್ದ ಜಿಡ್ಡಿ ಗ್ರಾಮದ
ಈ ವ್ಯಕ್ತಿಯು ಬೆಂಗಳೂರಿನಲ್ಲಿ 10 ದಿನಗಳ ಕಾಲ ಹೊಟೆಲ್ ಕ್ವಾರಂಟೆನ್ನಲ್ಲಿದ್ದು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸಾಗರಕ್ಕೆ ಬಂದು ಅಲ್ಲಿಂದ ಲಗೇಜ್ ಆಟೋದಲ್ಲಿ ತನ್ನ ಊರಾದ ಜಿಡ್ಡಿಗೆ ಬಂದು ಹೋಂ ಕ್ವಾರಂಟೆನ್ನಲ್ಲಿದ್ದ. ಪ್ರಥಮ ವರದಿಯಲ್ಲಿ ನೆಗೆಟಿವ್ ಬಂದ ಕಾರಣ ಹೊಟೆಲ್ ಕ್ವಾರಂಟೆನ್ ನಿಂದ ಬಿಡುಗಡೆಗೊಳಿಸಿ, ಹೋಂ ಕ್ವಾರಂಟೆನ್ಗೆ ಒಳಪಡಿಸಲಾಗಿತ್ತು. ರವಿವಾರ ದ್ವಿತೀಯ ವರದಿ ಬಂದಿದ್ದು ಆತನಿಗೆ ಪಾಸಿಟಿವ್ ಇರುವದು ಖಚಿತವಾಗಿದೆ. ಕೂಡಲೇ ಜಿಡ್ಡಿ ಗ್ರಾಮಕ್ಕೆ ಸ್ಥಳೀಯ
ಆಡಳಿತದವರು ತೆರಳಿ, ಆ ವ್ಯಕ್ತಿಯನ್ನು ಸೂಕ್ತ ಸಿದ್ಧತೆಯೊಂದಿಗೆ ಕಾರವಾರಕ್ಕೆ ಕಳುಹಿಸಲಾಗಿದೆ ಅಲ್ಲದೆ ಜಿಡ್ಡಿ ಗ್ರಾಮದ ಈ
ವ್ಯಕ್ತಿಯ ಮನೆ ಸಮೀಪದ 5 ಮನೆಗಳನ್ನು ಕಂಟೋನ್ಮೆಂಟ್ ಜೋನ್ ಗೆ ಒಳಪಡಿಸಲಾಗಿದ್ದು, ಗ್ರಾಮದವರಿಗೆ ಹೆಚ್ಚಿನ ಸುರಕ್ಷತೆಯಲ್ಲಿರಲು ಸೂಚಿಸಲಾಗಿದೆ.
ಮೇ 25ರಂದು ಮಹಾರಾಷ್ಟ್ರದ ಠಾಣಾದಿಂದ ಬಂದ ಕುಟುಂಬವೊಂದು ಹಾಸ್ಪಿಟಲ್ ನಲ್ಲಿ ಪರೀಕ್ಷೆ ಮಾಡಿಸಿ, ಕವಂಚೂರಿನ ಕ್ವಾಂರಂಟೆನ್ ಲ್ಲಿರಿಸಲಾಗಿತ್ತು.ಇವರಲ್ಲಿ ವ್ಯಕ್ತಿಯೊರ್ವನಿಗೆ ಪಾಸಿಟಿವ್ ಇರುವದು ಧೃಡಪಟ್ಟಿದೆ. ಅವನ ಜೊತೆ ಆತನ 53 ವರ್ಷದ ತಂದೆ, 25 ವರ್ಷದ ಅಕ್ಕ ಹಾಗೂ 25 ವರ್ಷದ ಪಕ್ಕದ ಮನೆಯ ಯುವಕ ಬಂದಿದ್ದು ಅವರನ್ನು ಕ್ವಾರಂಟೈನ ನ. ಇಡಲಾಗಿದ್ದು ಈ ವ್ಯಕ್ತಿಯನ್ನು ಕಾರವಾರಕ್ಕೆ ಕಳುಹಿಸಲಾಗಿದೆ ಈವರೆಗೆ ತಾಲೂಕಿನಲ್ಲಿ ಮೂರು ಪ್ರಕರಣಗಳು ಕಂಡು ಬಂದಿದೆ ಎಂದು ತಹಸೀಲದಾರ ಮಾಹಿತಿ ನೀಡಿದರು.
ಕುಮಟಾದಲ್ಲಿ ಮಹಾರಾಷ್ಟ್ರದಿಂದ ಬಂದು ಸಾಂಸ್ಥಿಕ ಕ್ವಾರೆಂಟೆನ್ ಲ್ಲಿದ್ದ ಒಂದೇ ಕುಟುಂಬದ ಪತಿ,ಪತ್ನಿ,ಮಗ ಹಾಗೂ ಸಂಬಂಧಿತ ಹುಡುಗನಿಗೆ ಕೊವಿಡ್ ಇರುವುದು ಶನಿವಾರವೇ ದೃಢಪಟ್ಟಿದೆ.
ಆದರೆ ಆರೋಗ್ಯ ಇಲಾಖೆ ರವಿವಾರ ಬಹಿರಂಗಪಡಿಸಿದೆ.
🙁 ವಿದೇಶದಿಂದ ಬಂದವರಿಗೆ ಸಾರ್ವಜನಿಕ ಬಸ್ಸು, ಲಗೇಜ್ ಆಟೋಗಳಲ್ಲಿ ಬರುವ ದುಸ್ತಿತಿ ಯಾಕೆ ಬರುತ್ತೆ? ಹೊರಗೆ ವಾಹನ ಸಿಗದಿದ್ದರೆ ಮನೆಯವರಿಂದಲೇ ಬೈಕ್, ಕಾರು ತರಿಸಿಕೊಂಡು ಮನೆ ಸೇರಬಹುದಿತ್ತು.