ಕಾಂಗ್ರೆಸ್ ಆರೋಗ್ಯಹಸ್ತ ಕಾರ್ಯಕ್ರಮ ಉದ್ಘಾಟನೆ: ಉಪೇಂದ್ರ ಪೈರಿಂದ ಯಕ್ಷಗಾನ ಕಲಾವಿದರಿಗೆ ದಿನಸಿಕಿಟ್ ವಿತರಣೆ

ಆದ್ಯೋತ್ ಸುದ್ದಿನಿಧಿ:
ಸಾರ್ವಜನಿಕರ ಸಂಪರ್ಕಕ್ಕೆ ಆರೋಗ್ಯ ಹಸ್ತ ಕಾರ್ಯಕ್ರಮ ಅನುಕೂಲ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಆರೋಗ್ಯಹಸ್ತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ,ಜಿಲ್ಲೆಯ ಎಲ್ಲಾ 14 ಬ್ಲಾಕ್‍ಗಳಲ್ಲೂ ಆರೋಗ್ಯಹಸ್ತ ಕಾರ್ಯಕ್ರಮ ನಡೆಸಲಾಗುತ್ತಿದ್ದು 231ಗ್ರಾಪಂನಲ್ಲೂ ಈ ಕಾರ್ಯಕ್ರಮ ನಡೆಯುತ್ತಿದೆ ಇದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಸಾರ್ವಜನಿಕ ಸಂಪರ್ಕ ಸಾದಿಸಲು ಅನುಕೂಲವಾಗುತ್ತದೆ ಜಿಲ್ಲೆಯಾದ್ಯಂತ ಕೊವಿಡ್ ಹೆಚ್ಚಳವಾಗುತ್ತಿದ್ದರೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ ಈ ಹಂತದಲ್ಲಿ ಆಡಳಿತಕ್ಕೆ ಎಲ್ಲರೂ ಸಹಕರಿಸಬೇಕು ಎಂದು ನಮ್ಮ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಆದೇಶಿಸಿದ್ದಾರೆ ಆ ಪ್ರಕಾರ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಲ್ಲರೂ ಅವರವರ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೆಕು ಎಂದು ಹೇಳಿದರು.

ಕಾಂಗ್ರೆಸ್ ವೀಕ್ಷಕಿ ಸುಷ್ಮಾ ರೆಡ್ಡಿ ಮಾತನಾಡಿ,ಕೊವಿಡ್ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿವೆ ಈ ಭಾಗದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಾಗಲಿ,ಸಂಸದ ಅನಂತಕುಮಾರ ಹೆಗಡೆಯವರಾಗಲಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಮುಂದೆ ಗ್ರಾಮಪಂಚಾಯತ್ ಚುನಾವಣೆ ಬರಲಿದೆ ಆ ಸಮಯದಲ್ಲಿ ಜನರ ಮುಂದೆ ಹೋಗುವುದಕ್ಕಿಂತ ಇಂತಹ ಸಂಕಷ್ಟ ಸಮಯದಲ್ಲಿ ಜನರ ನೆರವಿಗೆ ಹೋದರೆ ಚುನಾವಣೆಯ ಸಮಯದಲ್ಲಿ ಜನರು ನಮ್ಮನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಯೂತ ಕಾಂಗ್ರೇಸ್ ಅಧ್ಯಕ್ಷ ಸಂತೋಷ ಶೆಟ್ಟಿ,ಡಿಸಿಸಿ ಕಾರ್ಯದರ್ಶಿ ಸಾವೆರ್ ಡಿಸಿಲ್ವಾ,ವೀಕ್ಷಕ ಸತೀಶ ನಾಯ್ಕ,ಪ್ರದಾನ ಕಾರ್ಯದರ್ಶಿ ಎಸ್.ಕೆ.ಬಾಗವತ,ಕಾಂಗ್ರೆಸ್ ಮುಖಂಡರಾದ ವಿ.ಎನ್.ನಾಯ್ಕ,ಸಿ.ಆರ್.ನಾಯ್ಕ,ಜಿಪಂ ಸದಸ್ಯೆ ಸುಮಂಗಲಾ ನಾಯ್ಕ ಮುಂತಾದವರುಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಸ್ವಾಗತಿಸಿದರು.
——
ಯಕ್ಷಗಾನ ಕಲಾವಿದರಿಗೆ ಉಪೇಂದ್ರಪೈ ಟ್ರಸ್ಟ್ ವತಿಯಿಂದ ದಿನಸಿಕಿಟ್ ವಿತರಣೆ

“ಕಲಾವಿದರಿಗೆ ಸಹಾಯ ನೀಡುತ್ತಿಲ್ಲ ಅಭಿನಂದಿಸುತ್ತಿದ್ದೇನೆ”ಉಪೇಂದ್ರ ಪೈ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟ್.ವತಿಯಿಂದ ತಾಲೂಕಿನ ಸುಮಾರು 95 ಯಕ್ಷಗಾನ ಕಲಾವಿದರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಕಲಾವಿದರಿಗೆ ಕಿಟ್ ವಿತರಿಸಿ ಮಾತನಾಡಿದ ಉಪೇಂದ್ರ ಪೈ,ಯಕ್ಷಗಾನ ಎನ್ನುವುದು ದೈವದತ್ತ ಕಲೆಯಾಗಿದ್ದು ಇಂತಹ ಕಲೆಯನ್ನು ಪ್ರಸ್ತುತಪಡಿಸುವ ಕಲಾವಿದರು ದೇವತಾಸ್ವರೂಪಿಗಳು ಇಂತಹ ಕಲಾವಿದರಿಗೆ ನಮ್ಮ ಟ್ರಸ್ಟ್‍ವತಿಯಿಂದ ನೀಡುತ್ತಿರುವುದು ಸಹಾಯವಲ್ಲ ಅದು ಅಭಿನಂದನೆ. ಕೊವಿಡ್ ಎಂಬ ಸಾಮಕ್ರಾಮಿಕ ಖಾಯಿಲೆಯಿಂದ ಈಡೀ ದೇಶ ತತ್ತರಿಸುತ್ತಿದೆ ಉದ್ಯೋಗವಿಲ್ಲದೆ ಸಾಕಷ್ಟು ಜನರು ಕಷ್ಟಪಡುತ್ತಿದ್ದಾರೆ ನಮ್ಮ ಟ್ರಸ್ಟ್‍ವತಿಯಿಂದ ಇಲ್ಲಿಯವರೆಗೆ ಸಾವಿರಾರು ಕಿಟ್ ವಿತರಿಸಿದ್ದೇವೆ ಸುಮಾರು 700 ವಿದ್ಯಾರ್ಥಿಗಳಿಗೆ ಒಂದುಸಾವಿರರೂ. ಸ್ಕಾಲರ್‍ಶಿಪ್ ನೀಡಲಾಗಿದೆ.ಬೇರೆ ಬೇರೆ ಜಿಲ್ಲೆಗಳಲ್ಲಿ ಯಕ್ಷಗಾನ ಕಲಾವಿದರಿಗೆ ಸಹಾಯ ನೀಡಲಾಗಿದೆ ನಮ್ಮ ಜಿಲ್ಲೆಯಲ್ಲಿ ನೀಡಿಲ್ಲ ಎಂಬ ಮಾಹಿತಿಯನುಸಾರ ಈಗ ಕಲಾವಿದರಿಗೆ ನೆರವು ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಯಕ್ಷಗಾನ ಕಲಾವಿದರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಹಾಗೂ ಅಶಕ್ತ ಕಲಾವಿದರಿಗೆ ವೈದ್ಯಕೀಯ ಸಹಾಯವನ್ನು ನೀಡಲಾಗುವುದು ಎಂದು ಹೇಳಿದ ಅವರು ಸಿದ್ದಾಪುರ ತಾಲುಕಿಗೆ ಆಂಬುಲೆನ್ಸ್ ನೀಡಲು ನಾನು ಸಿದ್ದನಿದ್ದೇನೆ ಆದರೆ ಅದನ್ನು ವ್ಯವಸ್ಥಿತವಾಗಿ ನಡೆಸುವ ಸೇವಾ ಟ್ರಸ್ಟ್ ಬೇಕು ಎಂದು ಹೇಳಿದರು.

ಲಯನ್ಸ್.ಡಾ.ರವಿ ಹೆಗಡೆ ಮಾತನಾಡಿ,ಕೊವಿಡ್ ಸಂಕಷ್ಟಕಾಲದಲ್ಲಿ ಕಲಾವಿದರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಜಗತ್ತಿನಾದ್ಯಂತ ಕಲೆ ಮತ್ತು ಪ್ರವಾಸೋದ್ಯಮ ಸಂಕಷ್ಟಕ್ಕೆ ತುತ್ತಾಗಿದೆ ಕಲಾವಿದರ ಸಂಕಷ್ಟಕ್ಕೆ ಉಪೇಂದ್ರ ಪೈರಂತಹ ದಾನಿಗಳು ಮುಂದೆ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವ ಯೋಜನೆ ಮಾಡಿದ್ದಾರೆ ಇದರಿಂದ ಯಕ್ಷಗಾನ ಕಲಾವಿದರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ.ಶಶಿಭುಷಣ ಹೆಗಡೆ,ಸುಭಾಷ ನಾಯ್ಕ,ತಿಮ್ಮಪ್ಪ ಮಡಿವಾಳ ಮಾತನಾಡಿದರು.
ಯಕ್ಷಗಾನ ಕಲಾವಿದ ಮಹಾಬಲೇಶ್ವರ ಭಟ್ ಸ್ವಾಗತಿಸಿದರು.

About the author

Adyot

Leave a Comment