ಸಿದ್ದಾಪುರದಲ್ಲಿ ಹೃದಯ ತಪಾಸಣಾ ಕೇಂದ್ರದ ಉದ್ಘಾಟನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸಿ.ಆರ್.ಕವಲಕೊಪ್ಪ ಹೃದಯ ತಪಾಸಣಾ ಕೇಂದ್ರ ರವಿವಾರ ಲೋಕಾರ್ಪಣಗೊಂಡಿತು.
ಸಿದ್ದಾಪುರ ಪಟ್ಟಣದ ಧನ್ವಂತರಿ ಆಯುವೇದ ಕಾಲೇಜ್ ನಲ್ಲಿ ಹೃದಯ ತಪಾಸಣಾ ಕೇಂದ್ರ ಹಾಗೂ ಉನ್ನತೀಕರಣಗೊಂಡಿರುವ ಎಕ್ಸ್-ರೇ ಘಟಕವನ್ನು ತಹಸೀಲ್ದಾರ ಮಂಜುಳಾ ಭಜಂತ್ರಿ,ಡಾ.ದಿವಾಕರ ಭಟ್ಟ,ಡಾ.ಶ್ರೀಧರ ವೈದ್ಯ ಉದ್ಘಾಟಿಸಿದರು.

ಖ್ಯಾತ ಹೃದ್ರೋಗ ತಜ್ಞ ಡಾ.ದಿವಾಕರ ಭಟ್ಟ ಮಾತನಾಡಿ,
ದೇವರು ನಮಗೆ ಆರೋಗ್ಯ ಭಾಗ್ಯವನ್ನು ನೀಡಿದ್ದಾನೆ ಅದನ್ನು ಉಳಿಸಿಬೆಳೆಸಿಕೊಳ್ಳುವುದು ನಮ್ಮ ಕೈಯಲ್ಲಿದೆ.ಹೃದಯ ಸಂಬಂಧಿ ಖಾಯಿಲೆ ನಿಶ್ಯಬ್ಧವಾಗಿ ನಮ್ಮನ್ನು ಕೊಲ್ಲುತ್ತದೆ ಭಾರತದಲ್ಲಿ 35-50ವಯಸ್ಸಿನವರಲ್ಲಿ ಹೃದಯ ಖಾಯಿಲೆ ಬರುತ್ತದೆ.ತಂಬಾಕು ಸೇವನೆ ಮಾಡುವುದು,ಬಿ.ಪಿ.ಶುಗರ್ ಇರುವುವರಿಗೆ ಹಾಗೂ ಆನುವಂಶಿಕವಾಗಿಯೂ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ ಹೃದಯಾಘಾತವಾದಾಗ ಎಷ್ಟು ಬೇಗ ಚಿಕಿತ್ಸೆ ಸಿಗುತ್ತದೆಯೋ ಅಷ್ಟು ಬೇಗ ಚಿಕಿತ್ಸೆ ನೀಡಿದರೆ ರೋಗಿಯನ್ನು ಉಳಿಸಬಹುದು ನಮ್ಮ ಜೀವನ ಶೈಲಿಯು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಹೀಗಾಗಿ ತಂಬಾಕು ಸೇವನೆಯಂತಹ ಕೆಟ್ಟ ಚಟಗಳಿಂದ ದೂರ ಉಳಿದು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ರೋಗ ಬಂದಮೇಲೆ ತಪಾಸಣೆ ಮಾಡಿಕೊಳ್ಳುವುದರ ಬದಲು ಪ್ರತಿವರ್ಷ ನಮ್ಮ ದೇಹದ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ ಎಂದು ಹೇಳಿದ ದಿವಾಕರ ಭಟ್ಟ, ಧನ್ವಂತರಿ ಆಯುರ್ವೇದ ಕಾಲೇಜ್‍ನಲ್ಲಿ ಇಂತಹ ಸೌಲಭ್ಯವುಳ್ಳ ಘಟಕವನ್ನು ತೆರೆಯುತ್ತಿರುವುದು ಸರಿಯಾಗಿದೆ ಇದರಿಂದ ಜನಸಾಮಾನ್ಯರಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಹೇಳಿದರು.

ತಹಸೀಲ್ದಾರ ಮಂಜುಳಾ ಭಜಂತ್ರಿ ಮಾತನಾಡಿ,ಮಾನಸಿಕ,ದೈಹಿಕ ಸಮತೋಲನಕ್ಕೆ ಹೃದಯ ಮುಖ್ಯ ಅಂಗವಾಗಿದ್ದು ಅದನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ ಸಿದ್ದಾಪುರದಂತಹ ಸಣ್ಣ ತಾಲೂಕಿನಲ್ಲಿ ಅತಿ ಅವಶ್ಯಕವಿರುವ ಹೃದಯ ತಪಾಸಣಾ ಕೇಂದ್ರವನ್ನು ತೆರೆಯುವ ಮೂಲಕ ಧನ್ವಂತರಿ ಆಯುರ್ವೇದ ಕಾಲೇಜ್‍ನವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಶ್ರೀಧರ ವೈದ್ಯ ಮಾತನಾಡಿ,ಇಂದು ಆಸ್ಪತ್ರೆಗಳನ್ನು ನಡೆಸುವುದು ಕಷ್ಟವಾಗಿದೆ ಇಂತಹ ಸಂದರ್ಭದಲ್ಲಿಯೂ ದಿ.ಗಣೇಶ ಹೆಗಡೆ ಕುಟುಂಬದವರು ಆಯುರ್ವೇದ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಕೇಂದ್ರ ಪ್ರಾರಂಭಿಸುತ್ತಿರುವುದು ಶ್ಲಾಘನೀಯವಾಗಿದೆ.ಹೃದಯಾಘಾತವಾದ ಒಂದು ಗಂಟೆಯ ಒಳಗೆ ಚಿಕಿತ್ಸೆ ದೊರೆತರೆ ಅಂತಹವರನ್ನು ಬದುಕಿಸಬಹುದು ಇಲ್ಲಿಯವರೆಗೆ ಸಿದ್ದಾಪುರದಲ್ಲಿ ಹೃದಯಾಘಾತವಾದರೆ ಶಿರಸಿ-ಶಿವಮೊಗ್ಗ ಹೋಗಬೇಕಿತ್ತುಇದರಿಂದ ಚಿಕಿತ್ಸೆ ವಿಳಂಬವಾಗಿ ಮರಣ ಸಾಧ್ಯತೆ ಹೆಚ್ಚಾಗಿತ್ತು ಆದರೆ ಈಗ ತಕ್ಷಣ ಚಿಕಿತ್ಸೆ ಸಿಗುವುದರಿಂದ ಅಕಾಲಿಕ ಮರಣವನ್ನು ತಡೆಯಬಹುದು ಎಂದು ಹೇಳಿದರು.

ಡಾ.ಶಶಿಭೂಷಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ,ಮನುಷ್ಯನ ಭವಿಷ್ಯ ನಿರ್ಧರಿಸುವುದು ರಕ್ತ ಮತ್ತುಹೃದಯದಿಂದ ಇಂತಹ ಹೃದಯದ ಬಗ್ಗೆ ನಾವು ಖಾಳಜಿವಹಿಸಬೇಕು ಜನಸಾಮಾನ್ಯರಿಗೂ ಹೃದಯ ತಪಾಸಣೆ ಕೈಗೆಟಕುವ ದರದಲ್ಲಿ ಸಿಗಬೇಕು ಎನ್ನುವ ಸದುದ್ದೇಶದಿಂದ ಹೃದಯತಪಾಸಣಾ ಕೇಂದ್ರವನ್ನು ತೆರೆಯಲಾಗುತ್ತಿದೆ ಮುಂದಿನ ದಿನದಲ್ಲಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಹೃದಯ ಸಂಬಂಧಿ ತಪಾಸಣೆಯ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಂಜೀವಿನಿ ಎಂಬ ಯೋಜನೆಯನ್ನು ತರಲಾಗುತ್ತಿದೆ ಎಂದು ಹೇಳಿದರು
ಡಾ.ರೂಪಾ ಭಟ್ಟ ಅಧ್ಯಕ್ಷತೆವಹಿಸಿದ್ದರು. ಪ್ರೋ.ರಾಘವೇಂದ್ರ ನಿರೂಪಣೆ ಮಾಡಿದರು.

About the author

Adyot

Leave a Comment