ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾರತೀಯ ಜನತಾಪಕ್ಷದ ಗ್ರಾಮಸ್ವರಾಜ್ ಸಮಾವೇಶ ಗುರುವಾರ ನಡೆಯಿತು.
ಶಿರಸಿ ಪಟ್ಟಣದ ಅಂಬೇಡ್ಕರ ಭವನದಲ್ಲಿ ನಡೆದ ಗ್ರಾಮಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಕೈಗಾರಿಕಾ ಸಚೀವ ಜಗದೀಶ ಶೆಟ್ಟರ್,ನಮ್ಮ ಪಕ್ಷ ಪ್ರಜಾಪ್ರಭುತ್ವ ಆಶಯವುಳ್ಳ ಪಕ್ಷವಾಗಿದ್ದು ಪ್ರತಿ ಮೂರುವರ್ಷಕ್ಕೆ ಅಧ್ಯಕ್ಷರು ಬದಲಾಗುತ್ತಾರೆ.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಕುಟುಂಬದವರು ಅಧ್ಯಕ್ಷರಾಗುತ್ತಾರೆ ಅಧಿಕಾರ ಅಲ್ಲೆ ಕೇಂದ್ರೀಕೃತವಾಗಿದೆ.ಕಾಂಗ್ರೆಸ್ ಪಕ್ಷ ಅಧೋಗತಿ ಕಡೆಗೆ ಸಾಗುತ್ತಿದ್ದು ನಾಲ್ಕು ಗುಂಪುಗಳಾಗಿ ಹೋಳಾಗಿದೆ. ಇನ್ನು ಜೆ.ಡಿ.ಎಸ್ ವಿಳಾಸ ಹುಡುಕುವಂತಾಗಿದೆ.ಅಲ್ಲಿ ಒಂದು ಕುಟುಂಬದವರು ಮಾತ್ರ ನಾಯಕರಿದ್ದಾರೆ ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ಸಾಮಾನ್ಯ ಕಾರ್ಯಕರ್ತನು ಯಾವ ಹುದ್ದೆಗೆ ಬೇಕಾದರೂ ಏರಬಹುದು ಎಂದು ಶೆಟ್ಟರ್ ಹೇಳಿದರು.
ಗ್ರಾಮಪಂಚಾಯತ್ ಚುನಾವಣೆ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವಂತಹ ಚುನಾವಣೆಯಾಗಿದೆ.ಉತ್ತರಕನ್ನಡ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಬರುತ್ತಿದೆ ವಿಮಾನನಿಲ್ದಾಣ ಆಗಲಿದೆ.ಬೆಲೆಕೇರಯಲ್ಲಿ ಬಂದರು ಅಭಿವೃದ್ಧಿ ಪಡಿಸಲಾಗುತ್ತಿದೆ.
ಕೇಂದ್ರ & ರಾಜ್ಯ ಸರ್ಕಾರ ನಮ್ಮದಿದೆ. ಸಾಕಷ್ಟು ಯೋಜನೆಗಳು ಕೇಂದ್ರ & ರಾಜ್ಯ ಸರ್ಕಾರ ಮಾಡುತ್ತಿದೆ. ಗ್ರಾಮ ಪಂಚಾಯತಗೆ ಅನುದಾನ ನೇರವಾಗಿ ಗ್ರಾಮ ಪಂಚಾಯತಗೆ ಯಾವುದೇ ಸೋರಿಕೆ ಆಗದ ರೀತಿಯಲ್ಲಿ ತಲುಪುವ ಕೆಲಸ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ.ಚುನಾವಣೆಯಲ್ಲಿ ನಮ್ಮ ಪಕ್ಷದಲ್ಲಿ ಸ್ಪರ್ಧೆ ಹೆಚ್ಚಿದೆ. ಕಾಂಗ್ರೇಸ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇದೆ.
ಕಾರ್ಯಕರ್ತರು ನಿಮ್ಮ ಗ್ರಾಮದಲ್ಲಿ ಹಿರಿಯರನ್ನು ಕೂಡಿಸಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ನಮ್ಮಲ್ಲಿಯೆ ಅಭ್ಯರ್ಥಿಯ ಆಯ್ಕೆಯಲ್ಲಿ ಒಡಕನ್ನು ತಂದು ಬೇರೆ ಪಕ್ಷಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಯಾಗದಿರುವಂತೆ ಮಾಡಬೇಕು ಎಂದರು.
ಗಣಿ ಮತ್ತು ಭೂವಿಜ್ಞಾನ ಸಚೀವ ಸಿ.ಸಿ.ಪಾಟೀಲ್ ಮಾತನಾಡಿ,ಯಾವುದೇ ಬಲವಿಲ್ಲದ ಸಿದ್ಧಿ ಜನಾಂಗದ ಶಾಂತಾರಾಮ ಸಿದ್ದಿಯವರನ್ನು ಆಯ್ಕೆ ಮಾಡಿದ ಬಿ.ಜೆ.ಪಿ ಪಕ್ಷ ವಿಶೇಷ ಪಕ್ಷ ಗ್ರಾಮ ಪಂಚಾಯತ ಚುನಾವಣೆಯಲ್ಲೂ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಮಾಡಿ ಗ್ರಾಮದಿಂದ ದೆಹಲಿಯ ತನಕ ಬಿ.ಜೆ.ಪಿಯನ್ನು ಬಲಪಡಿಸಬೇಕು ಪಂಚಾಯತಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದೆವೆ. ಹೊಸ ಮರಳು ನೀತಿ ತಂದಿದ್ದು ಗ್ರಾಮ ಪಂಚಾಯತಗೆ ಆರ್ಥಿಕ ಶಕ್ತಿ ನೀಡುವ ಕೆಲಸ ಮಾಡಿದ್ದೆವೆ. ಹಾಗೂ ಜನರಿಗೆ ಮರಳು ದೊರಕುವಂತಾಗಿ ಅಭಿವೃದ್ದಿಗೆ ಸಹಾಯವಾಗಿದೆ.ಗ್ರಾಮ ಪಂಚಾಯತ ಗೆ ಆಯ್ಕೆ ಮಾಡುವ ಪಕ್ಷದ ಅಭ್ಯರ್ಥಿ ದೇಶಭಕ್ತನಾಗಿ, ಗ್ರಾಮದ ಅಭಿವೃದ್ದಿ ಮಾಡುವಂತವರನ್ನು ಆಯ್ಕೆ ಮಾಡಬೇಕು.ಎಂದರು.
ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ ಮಾತನಾಡಿ
ಈ ಸಮಾವೇಶದ ಮೂಲ ಉದ್ದೇಶ ಚುನಾವಣೆ ಬಂದಿದಕ್ಜೋಸ್ಕರ ಅಲ್ಲ. ಆದರೇ ಮುಂಬರುವ ದಿನಗಳ ತಯಾರಿಗಾಗಿ ಆಗಿತ್ತು. ಅಷ್ಟರಲ್ಲೆ ಚುನಾವಣೆ ಘೋಷಣೆ ಯಾಗಿದೆ. ಪಕ್ಷ ಬೆಳೆದ ರೀತಿ ಸ್ಪರ್ಧೆ ಹೆಚ್ಚಾಗುತ್ತಿದೆ. ಸ್ಥಳೀಯ ಕ್ಷೇತ್ರದ ಚುನಾವಣೆ ಗೆಲ್ಲಬೇಕಾದರೆ 82% ಮತದಾರರು ಗ್ರಾಮಪಂಚಾಯತ ಮತದಾರರಾಗಿರುತ್ತಾರೆ. ಚುನಾವಣೆ ಬಂದಾಗ ಕಾರ್ಯಕರ್ತರು ನಾಯಕರಿಗಾಗಿ ದುಡಿದಿದ್ದಾರೆ. ಈಗ ನಾಯಕರು ಕಾರ್ಯಕರ್ತರೊಂದಿಗೆ ಈ ಚುನಾವಣೆಯಲ್ಲಿದ್ದೆವೆ. ಎಂಬ ನಿರ್ಧಾರ ನಾವು ತೆಗೆದುಕೊಂಡಿದ್ದೆವೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಲವಾರು ಬದಲಾವಣೆಯ ಕಾನೂನು ತಂದು ಅಭಿವೃದ್ದಿ ಮಾಡುತ್ತಿದ್ದೆವೆ.
ನೀವು ಕಾರ್ಯಕರ್ತರು ನಿಮ್ಮಲ್ಲಿಯೆ ಒಬ್ಬನ್ನು ಚುನಾವಣೆಗೆ ಒಮ್ಮತದಿಂದ ಆಯ್ಕೆ ಮಾಡಿ ಆ ಕೆಲಸವನ್ನು ನಮಗೆ ನೀಡಬೇಡಿ ಎಂದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ,ಯಡಿಯೂರಪ್ಪನವರ ಬಿ.ಜೆ.ಪಿ ಸರ್ಕಾರ ನುಡಿದಂತೆ ನಡೆವಂತ ಸರ್ಕಾರ ಬುಡಕಟ್ಟು ಜನಾಂಗಗಳನ್ನು 70 ವರ್ಷ ಬೇರೆ ಸರ್ಕಾರಗಳು ಬಳಸಿಕೊಂಡಿದೆ. ಆದರೆ ಮಾನ್ಯತೆಯನ್ನು ನಮ್ಮ ಸರ್ಕಾರ ನೀಡಿದೆ.ಸರ್ಕಾರದ ಯೋಜನೆ ಬುಡಕಟ್ಡು ಸಮೂದಾಯದವರೆಗೂ ತಲುಪಬೇಕು. ನಮ್ಮೆಲ್ಲ ಕಾರ್ಯಕರ್ತರ ಉದ್ದೇಶ ರಾಷ್ಟ್ರ ನಿರ್ಮಾಣದ ಗುರಿಯಾಗಬೇಕು ಎಂದರು.
ಪ್ರಮೋದ ಹೆಗಡೆ ಮಾತನಾಡಿ, ಗ್ರಾಮ ಪಂಚಾಯತ ಚುನಾವಣೆಗೆ ಹೋಗುವ ನೈತಿಕ ಬಲ ಬಿ.ಜೆ.ಪಿ ಪಕ್ಷಕ್ಕಿದೆ. ಕಾಂಗ್ರೇಸ ಪಕ್ಷಕ್ಕಿಲ್ಲ. ಪಂಚಾಯತ ವ್ಯವಸ್ಥೆಯ ಪಂಚಶೀಲ ಶಕ್ತಿಯನ್ನು ಕೇಂದ್ರಿಕರಿಸುವ ಕೆಲಸ ಕಾಂಗ್ರೇಸ ಪಕ್ಷ ಮಾಡಿದೆ. ಆದರೆ ಗಾಂಧೀಜಿ ಯವರ ಪರಿಕಲ್ಪನೆ ಯ ಗ್ರಾಮಸ್ವರಾಜ ಕಲ್ಪನೆಯ ವಿಕೇಂದ್ರಿಕರಣವನ್ನು ನಾವು ಮಾಡಿದ್ದೆವೆ.
ನಮ್ಮ ಪಕ್ಷದಲ್ಲಿ ವಿಕೇಂದ್ರಿಕರಣದ ವ್ಯವಸ್ಥೆ ಇದೆ. ಉತ್ತರಕನ್ನಡ ಜಿಲ್ಲೆಯ 231 ಪಂಚಾಯತನಲ್ಲಿ 2707 ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ. ಬಿ.ಜೆ.ಪಿ ಯ ಹೆಚ್ಚು ಅಭ್ಯರ್ಥಿಗಳು ಗೆಲ್ಲಬೇಕು ಎಂದರು.
ಗ್ರಾಮಸ್ವರಾಜ ಸಮಾವೇಶದ ಸಂಚಾಲಕ ಸಿದ್ದರಾಜು ಮಾತನಾಡಿದರು
ಸಮಾವೇಶದಲ್ಲಿ ಸಮಾವೇಶದ ಉಪಾಧ್ಯಕ್ಷರು ರಾಜೇಂದ್ರ,ವಾಯುವ್ಯ ಕರ್ನಾಟಕ ಸಾರಿಗೆ ಅಧ್ಯಕ್ಷ ವಿ.ಎಸ್.ಪಾಟೀಲ,ಕೆ.ಜಿ.ನಾಯ್ಕ,ವೆಂಕಟೇಶ ನಾಯಕ, ಮಾಜಿ ಶಾಸಕ ವಿವೇಕಾನಂದ ವೈಧ್ಯ, ವಿನೋಧಪ್ರಭು, ಚಂದ್ರು ಎಸಳೆ ಮುಂತಾದವರು ಉಪಸ್ಥಿತರಿದ್ದರು.