ಎಸಿಬಿ ಬಲೆಗೆ ಜಾನ್ಮನೆ ಪಿಡಿಓ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕು ಜಾನ್ಮನೆ ಗ್ರಾಪಂ ಪಿಡಿಓ ಕೃಷ್ಣಪ್ಪ ಎಲ್ವಗಿ ಲಂಚಸ್ವೀಕರಿಸುತ್ತಿರುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸ್ಥಳೀಯ ಸುಧೀಂದ್ರ ಹೆಗಡೆ ಎನ್ನುವವರು 2014 ರಲ್ಲಿ ಮನೆನಿರ್ಮಿಸಿದ್ದು ಮನೆ ನೊಂದಣಿ ಸಂಖ್ಯೆ ನೀಡಲು ಸತಾಯಿಸುತ್ತಿದ್ದು 15000ರೂ.ಲಂಚಕೇಳಿದ್ದರು ಎನ್ನಲಾಗಿದೆ.
ಶನಿವಾರ ಲಂಚಸ್ವೀಕರಿಸುತ್ತಿದ್ದ ಸಮಯದಲ್ಲಿ ಎಸಿಬಿ ಡಿವೈಎಸ್ ಪಿ ಶ್ರೀಕಾಂತ ನೇತೃತ್ವದ ತಂಡ ದಾಳಿ ನಡೆಸಿ ಲಂಚದ ಹಣದ ಸಹಿತ ಪಿಡಿಓ ರನ್ನು ವಶಕ್ಕೆ ಪಡೆದು ಕಾರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
********
ಡಿಸಂಬರ್30 ರಂದು ಉಚಿತ ಔಷಧಿ ವಿತರಣೆ
ಕಳೆದ 23 ವರ್ಷಗಳಿಂದ ಪ್ರತಿ ವರ್ಷವೂ ದಕ್ಷಿಣ ಪ್ರಾಂತದಲ್ಲಿ ಪ್ರಚಲಿತವಿರುವ ಈ ಉಚಿತ ಔಷಧಿಯನ್ನು ಈ ವರ್ಷವೂ ಸಹ ದಿನಾಂಕ: 30/12/2020(ಮಾರ್ಗಶಿರ ಮಾಸದ ಪೌರ್ಣಮಿ) ಬುಧವಾರದಂದು ಬೆಳಿಗ್ಗೆ 5 ಗಂಟೆಯಿಂದ 7 ವರೆಗೆ ವಿತರಿಸಲಾಗುವುದು.
ಆಸ್ತಮಾ ಹಾಗೂ ತತ್ಸಂಬಂಧಿತ ಸೀನುವಿಕೆ, ವಾಸಿಯಾಗದ ಕೆಮ್ಮು, ನೆಗಡಿ, ಉಸಿರಾಟ ತೊಂದರೆಯಂತಹ ಖಾಯಿಲೆಗಳಿಗೆ ಉಚಿತವಾಗಿ ಔಷಧವನ್ನು ನೀಡಲಾಗುವುದು. ಆಸಕ್ತರು ದಿನಾಂಕ: 27/12/2020 ಒಳಗೆ ತಮ್ಮ ಹೆಸರನ್ನು ಈ ಕೆಳಗಿನ ವಿಳಾಸ ಅಥವಾ ದೂರವಾಣಿ ಮುಖಾಂತರ ನೊಂದಾಯಿಸಿಕೊಳ್ಳಬಹುದು.
ದೂರದಿಂದ ಬರುವ ರೋಗಿಗಳಿಗೆ ಹಿಂದಿನ ದಿನ ಅಂದರೆ ದಿನಾಂಕ:29/12/2020 ರಂದು ಮಧ್ಯಾಹ್ನ 1.00 ಗಂಟೆಯಿಂದ ಸಾಯಂಕಾಲ 5.00ಗಂಟೆಯ ತನಕ ಔಷಧಿಯನ್ನು ವಿತರಿಸಲಾಗುವುದು.
ಔಷಧಿ ವಿತರಣಾ ವಿಳಾಸ :
ವೈದ್ಯ ವಿಶ್ವನಾಥ ಅರಳಿಕಟ್ಟಿ
ಅಗ್ನಿವೇಶ್ ಆಯುರ್ವೇದ ಕ್ಲಿನಿಕ್ ಮತ್ತು ಯೋಗ ಕೇಂದ್ರ
ಗೆಸ್ಟ್ ಹೌಸ್ ಬಿಲ್ಡಿಂಗ್ ( ಹಳೆ ವಿ ಟಿ ನಾಯ್ಕ ಕ್ಲಿನಿಕ್)
ಭಗತ್ ಸಿಂಗ್ ಸರ್ಕಾರ
ಸಿದ್ದಾಪುರ ( ಉ. ಕ)
ದೂರವಾಣಿ ಸಂಖ್ಯೆ 8123250094/9743332621
ಧನ್ಯವಾದಗಳೊಂದಿಗೆ
Dr Vishwanath Aralikatti

About the author

Adyot

Leave a Comment