ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸೋಂದಾ ಖಾನಾಪಾಲ ಶಾಲೆಯ ಮಠದೇವಳ ಮತಗಟ್ಟೆಯಲ್ಲಿ ಸೋಂದಾ ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಮತದಾನ ಮಾಡಿದರು.
****
ಸಿದ್ದಾಪುರ ಬೇಡ್ಕಣಿಯಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
****
ಸಿದ್ದಾಪುರ ಮನಮನೆಯಲ್ಲಿ ಮೂವರು ಕೋವಿಡ್ ಸೊಂಕಿತರು ಪಿಪಿಕಿಟ್ ಸೇರಿದಂತೆ ಕೋವಿಡ್ ಸುರಕ್ಷತೆಯೊಂದಿಗೆ ಮತದಾನ ಮಾಡಿದರು.
****
ಸಿದ್ದಾಪುರ ಅವರಗುಪ್ಪಾದಲ್ಲಿ 86 ವರ್ಷದ ಸುಶೀಲ ಹನುಮಂತಪ್ಪ ನಾಯ್ಕ ತನ್ನ ಮಗನ ಸಹಾಯದೊಂದಿಗೆ ಬಂದು ಮತದಾನ ಮಾಡಿದರು.
****
ಯಲ್ಲಾಪುರದಲ್ಲಿ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರು ಬೈಕ್ ನಲ್ಲಿ ಬಂದು ಮತದಾನ ಮಾಡಿದರು.