ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಣ್ಣೆಹೊಳೆ ಅರಣ್ಯ ಪ್ರದೇಶದಲ್ಲಿ ಯುವಕ ಮತ್ತು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸೋಮವಾರ ದಾಖಲಾಗಿದೆ.
ಮೃತರನ್ನು ಶಿರಸಿ ತಾಲೂಕಿನ ತೆರಕನಹಳ್ಳಿಯ ಮೇಘನಾ ಈರಾ ನಾಯ್ಕ(27) ಹಾಗೂ ಶಿರಸಿ ತಾಲೂಕಿನ ಬೊಮ್ಮನಕೊಡ್ಲು ಹುಸುರಿಯ ವಿಕ್ರಮ ಗಣೇಶ ಮಾವಿನಕುರ್ವೆ(28) ಎಂದು ಗುರುತಿಸಲಾಗಿದೆ.
ಈ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದು ಮನೆಯವರು ಸ್ವಲ್ಪ ದಿನದ ನಂತರ ಮದುವೆ ಮಾಡುತ್ತೇವೆ ಎಂದು ಹೇಳಿದ್ದರೂ ಯಾವುದೋ ಅನುಮಾನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜನವರಿ 20 ರಂದು ಮನೆಯಿಂದ ಹೊರ ಹೋಗಿದ್ದ ಈ ಪ್ರೇಮಿಗಳು ಬಂಡಲ್ ಗ್ರಾಪಂ ವ್ಯಾಪ್ತಿಯ ಬೆಣ್ಣೆಹೊಳೆ ಫಾಲ್ಸ್ ಸಮೀಪದ ಗಿಡವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಶವಗಳು ಕೊಳೆತು ಹೋಗಿದ್ದು ದಿ.20ರಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.