ಆದ್ಯೋತ್ ಸುದ್ದಿನಿಧಿ:
ಅಡಿಕೆ ಮಾದಕ ವಸ್ತುವಲ್ಲ. ಅದರೊಂದಿಗೆ ಬೆರೆಸಿ ತಿನ್ನುವ ವಸ್ತು ಮಾದಕವಾಗಿದೆ. ಆದ ಕಾರಣ ಅಡಿಕೆಯನ್ನು ಡ್ರಗ್ಸ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಅಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಉತ್ತರಕನ್ನಡ ಜಿಲ್ಲೆಯ
ಶಿರಸಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು
ಅಡಿಕೆಯ ಕುರಿತು ಗೃಹ ಸಚಿವ ಬೊಮ್ಮಾಯಿ ಅವರೂ ಹೇಳಿಕೆ ನೀಡಿದ್ದಾರೆ. ಅಡಿಕೆಯಲ್ಲಿ ಕೆಲವೊಂದು ಒಳ್ಳೆಯ ಅಂಶಗಳೂ ಇದೆ. ಅದು ಡ್ರಗ್ ಅಲ್ಲ ಎಂದು ಹೇಳಿದ ಡಾ.ಸುಧಾಕರ, ಶಿರಸಿಗೆ ಈಗಾಗಲೇ ಉತ್ತಮ ಆಸ್ಪತ್ರೆಯನ್ನು ಮಂಜೂರು ಮಾಡಲಾಗಿದ್ದು, 15 ದಿನದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದಲ್ಲದೇ ಅಗತ್ಯವಿರುವ ಡಯಾಲಿಸೀಸ್ ಸೆಂಟರ್ ಬಗ್ಗೆಯೂ ಅಧಿಕಾರಿಗಳೊಂದಿಗೆ ಮಾತನಾಡಿ ತಿರ್ಮಾನಿಸುತ್ತೇವೆ ಎಂದು ಹೇಳಿದ ಅವರು, ಖಾಸಗಿ ಕಾರ್ಯಕ್ರಮದ ನಿಮಿತ್ತ ಬಂದಿದ್ದೇನೆ. ಯಾವುದೇ ರಾಜಕೀಯದ ಹೇಳಿಕೆ ನೀಡೋದಿಲ್ಲ ಎಂದು ಹೇಳಿದರು.
ಕೊವಿಡ್ ಲಸಿಕಾ ಅಭಿಯಾನ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಇಂದಿನಿಂದ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೊ ಅಭಿಯಾನ ಇರುವ ಕಾರಣ ನಾಲ್ಕು ದಿನಗಳ ಕಾಲ ಕೊವಿಡ್ ಲಸಿಕಾ ಅಭಿಯಾನ ನಿಲ್ಲಿಸಲಾಗಿದೆ ಎಂದು ಡಾ.ಸುಧಾಕಾರ ಹೇಳಿದರು.