ರಾಜಕೀಯ ಜೀವನದ ಹೊರತಾದ ವಯಕ್ತಿಕ ಜೀವನವೂ ನಮಗಿದೆ- ಶಿವರಾಮ ಹೆಬ್ಬಾರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾರ್ಮಿಕ ಸಚೀವ ಶಿವರಾಮ ಹೆಬ್ಬಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿ ಸಿಡಿ ಮಾಡುವವರ, ಬ್ಲಾಕ್ ಮೇಲ್ ಮಾಡುವವರ ದಂಧೆ ಹೆಚ್ಚಾಗಿದ್ದು,ಅಂತಹವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಆಗ್ರಹಿಸಿದರು.

ಸಾರ್ವಜನಿಕ ಜೀವನದಲ್ಲಿರುವ ನಾವು ಸೋಲನ್ನಾದರೂ ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕ ತೇಜೋವಧೆ ಸಹಿಸಲಾಗದು. ಬಿಜೆಪಿ ಸರ್ಕಾರ ರಚನೆಗೆ ಬಲ ನೀಡಿದ ಸಚಿವರನ್ನು ಗುರಿಯಾಗಿಸಿ ಅವರನ್ನೇ ಬೆದರಿಸುವ ಪ್ರಯತ್ನ ನಡೆದಿದೆ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಯಿತು ಎಂದು ಪ್ರತಿಕ್ರಿಯಿಸಿದರು. ‘ರಾಜಕೀಯ ಜೀವನದ ಹೊರತಾಗಿ ನಮಗೂ ವೈಯಕ್ತಿಕ ಜೀವನವಿದೆ. ನಮಗೂ ಕುಟುಂಬ, ಮಕ್ಕಳಿದ್ದಾರೆ. ಯಾವ ವ್ಯಕ್ತಿಯ ವೈಯಕ್ತಿಕ ತೇಜೋವಧೆ, ಗೌರವ ಹಾಳುಮಾಡುವ ಕೆಲಸ ಒಳ್ಳೆಯ ಬೆಳವಣಿಗೆಯಲ್ಲ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ ರಮೇಶ ಜಾರಕಿಹೋಳಿ ಇಂದಲ್ಲ ನಾಳೆ ತಪ್ಪಿತಸ್ಥರಲ್ಲ ಎಂದು ಸಾಬೀತಾಗಬಹುದು. ಆದರೆ, ಹಾಳುಮಾಡಿದ ಅವರ ಗೌರವ ತಂದುಕೊಡಲು ಸಾಧ್ಯವೆ? ಇದೇ ಸ್ಥಿತಿ ಉಳಿದ ನಾಯಕರಿಗೂ ಎದುರಾಗಬಹುದು. ಹೀಗಾಗಿ, ಮುನ್ನೆಚ್ಚರಿಕೆ ನಮಗೂ ಅನಿವಾರ್ಯವಾಗಿದೆ’ ಎಂದು ಹೇಳಿದರು.

ಸರ್ಕಾರಕ್ಕೂ ಇದಕ್ಕೂ ಸಂಬಂಧ ಇರುವ ಯಾವುದೇ ಸಂಗತಿ ಇಲ್ಲ. ವ್ಯಕ್ತಿಯ ತೇಜೋವಧೆ ಅರಂಭವಾಗುವ ಲಕ್ಷಣ ಗೋಚರಿಸಿದಾಗ ನಮಗಿರುವಂತ ಸೂಚನೆ ಮೇರೆಗೆ ನಮ್ಮ ಭದ್ರತೆಗೊಸ್ಕರ ಕೋರ್ಟಗೆ ಹೋಗುವ ಮೂಲಕ ಪ್ರಯತ್ನ ಮಾಡಿದ್ದೆವೆ. ಇದು ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು ಕೂಡ ಆಗಿದೆ. ಎಂದು ಹೆಬ್ಬಾರ್ ಹೇಳಿದರು.
ಕಳೆದು ಹೋದ ನಂತರ ನಮ್ಮ ಮಾನ ಬರಲು ಸಾಧ್ಯವಿಲ್ಲ. ನಾನು ಎಲ್ಲ ಎರಿಳಿತವನ್ನು ನೋಡಿ ಸಹಿಸಿಕೊಂಡಿದ್ದೆನೆ. ಆದರೆ ಲೈಂಗಿಕ ಅಧಪತನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ರಾಜಕೀಯ ಷಡ್ಯಂತ್ರ. ಹೊಸ ಸರ್ಕಾರ ರಚನೆಗೆ ಕಾರಣರಾದ ನಮ್ಮ ಮೇಲೆ ರೀತಿ ಮಾಡುತ್ತಿರುವುದು ಮಾಹಿತಿ ಕೂಡ ಇದೆ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ. ನಾವೆಲ್ಲ ಒಂದೇ ಮನೆಯ ಸದಸ್ಯರು ಎಂದರು

ನನ್ನ ಚುನಾವಣೆಯ ಕಾಲಕ್ಕೂ ಇಂತಹ ಧಮಕಿ ಬಂದಿತ್ತು ಸಾರ್ವಜನಿಕ ಜೀವನ ಎಲ್ಲೋ ಒಂದು ಕಡೆ ಭಯದ ವಾತಾವರಣದಲ್ಲಿ ನಡೆಸಬೇಕಾದ ಕಾಲಘಟ್ಟಕ್ಕೆ ಬಂದು ಬೀಡುತ್ತದೆ. ನಮ್ಮಅಭಿಮಾನಿಗಳಲ್ಲಿ ಗೊಂದಲವಿಲ್ಲ ಎಂದು ಹೇಳಿದರು.

About the author

Adyot

Leave a Comment