ಆದ್ಯೋತ್ ಸುದ್ದಿನಿಧಿ:
ಪರಿಸರಕ್ಕೆ ಹಾನಿಯಾಗೋ ಬೇಡ್ತಿ -ವರದಾ ನದಿಯ ನೀರು ಜೋಡಿಸಿ, ಇದರಲ್ಲಿ ಹರಿದು ಸಮುದ್ರಕ್ಕೆ ಸೇರೋ 22 ಟಿ.ಎಂ.ಸಿ ಅಡಿಗಳಷ್ಟು ನೀರನ್ನು ಹಾವೇರಿ, ಗದಗ, ಕೊಪ್ಪಳ, ಸಿಂಧನೂರು,ರಾಯಚೂರು ಪ್ರದೇಶಗಳಿಗೆ ಕೊಂಡೊಯ್ಯುವ ಯೋಜನೆಯನ್ನು ಈಗಿನ ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿದೆ. ವಿಸ್ತೃತ ಯೋಜನಾ ವರದಿ (ಎನ್.ಡಬ್ಯ್ಲೂ,ಡಿ.ಎ) ಸಿದ್ದಪಡಿಸಲು ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜನ್ಸಿಗೆ ಮನವಿ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ
ಈ ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟ ಪ್ರದೇಶದ ಜೀವ ಸಂಕುಲಗಳಿಗೆ ತೊಂದರೆಯಾಗೋ ಜೊತೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜಲಮೂಲ ಕೊರತೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬುಧವಾರ ಸೋಂದಾದ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಸಾಧಕ ಭಾದಕದ ಕುರಿತು ಚರ್ಚೆ ನಡೆಸುವ ಜೊತೆಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರದಂತೆ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಒಂದುವೇಳೆ ಯೋಜನೆ ಅನುಷ್ಟಾನವಾದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಕೂಡಾ ಸಿದ್ಧತೆ ನಡೆದಿದೆ.
ಸದ್ಯ ಇದೇ ಮಾದರಿಯಲ್ಲಿ ಕಾಳಿ ನದಿಯಿಂದ ಅಳ್ನಾವರಕ್ಕೆ ನೀರು ಸಾಗಿಸುವ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದೆ. ಇದನ್ನು ವಿರೋಧಿಸಿ 40 ದಿನದಿಂದ ಕಾಳಿ ಹೋರಾಟ ಸಮಿತಿ ನಿರಂತರ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಸರ್ಕಾರ ವರದಾ-ಬೇಡ್ತಿ ನದಿ ಜೋಡಣೆ ಪ್ರಸ್ತಾಪ ಸಲ್ಲಿಸಿರುವುದು ಜಿಲ್ಲೆಯ ಜನರಿಗೆ ಆಕ್ರೋಶ ತರಿಸಿದೆ.
ನಮ್ಮ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ದೊಡ್ಡ ಸಮಸ್ಯೆ ಇದೆ. ಜೀವ ವೈವಿದ್ಯದ ಆಗರವಾಗಿರುವ ಪಶ್ಚಿಮಘಟ್ಟದಲ್ಲಿ ಈ ಯೋಜನೆ ಜಾರಿಯಾದರೆ ಜೀವ ಸಂಕುಲಕ್ಕೆ ಹೊಡತ ಬೀಳುವ ಜೊತೆ ಜಲಮೂಲ ನಾಶವಾಗಿ ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಹರಿವು ಹೆಚ್ಚಾಗುವ ಸಾಧ್ಯತೆಗಳು ಸಹ ಹೆಚ್ಚಾಗಿವೆ. ಇನ್ನು ಉತ್ತರ ಕರ್ನಾಟಕ ಭಾಗಗಳಿಗೆ ಕುಡಿಯುವ ನೀರಿನ ಅವಶ್ಯಕತೆಇದೆ, ಆದ್ರೆ ಪರ್ಯಾಯವಾಗಿ ಕ್ರಮ ಕೈಗೊಳ್ಳಲು ಅವಕಾಶಗಳು ಸಹ ಇದೆ. ಒಟ್ಟಿನಲ್ಲಿ ಯೋಜನೆ ಅನುಷ್ಟಾನಕ್ಕೂ ಮೊದಲು ದೊಡ್ಡ ವಿರೋಧ ವ್ಯಕ್ತವಾಗಿದ್ದು ಸರ್ಕಾರ ಮುಂದೆ ಯಾವ ಹೆಜ್ಜೆ ಇಡಲಿದೆ ಅನ್ನೋದನ್ನ ಕಾದುನೋಡಬೇಕಿದೆ.
####
ಉತ್ತರಕನ್ನಡಜಿಲ್ಲೆಯ ಶಿರಸಿ ಟಿ.ಆರ್.ಸಿ.ಸಭಾಭವನದಲ್ಲಿ ಅಘನಾಶಿನಿ-ಬೇಡ್ತಿ-ವರದಾ ನದಿಗಳ ಜೋಡಣೆಯ ಸಾಧಕ-ಬಾಧಕಗಳ ಕುರಿತು ಸಮಾವೇಶ,ಕಾರ್ಯಾಗಾರ ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿದ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ,ಅವೈಜ್ಞಾನಿಕ ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ನದಿ ಜೋಡಣೆ ಯೋಜನೆ ಜಾರಿಗೆ ಬಂದರೆ ನದಿಯಲ್ಲಿ ನೀರಿನ ಹರೀವು ಕಡಿಮೆಯಾಗುತ್ತದೆ. ಕರಾವಳಿಯಲ್ಲಿ ಸಿಹಿನೀರಿನ ಸಮಸ್ಯೆ ಹೆಚ್ಚಾಗಲಿದೆ. ಅಲ್ಲಿನ ಕೃಷಿ ಕ್ಷೇತ್ರದ ಮೇಲೆಯೂ ಪರಿಣಾಮ ಬೀಳುತ್ತದೆ. ಘಟ್ಟದ ಮೇಲ್ಭಾಗದಿಂದ ನದಿ ಹರಿದು ಹೋಗುವಾಗ ಮಿನುಗಾರಿಕೆಗೆ ಬೇಕಾದ ಹಲವು ಪೋಷಕಾಂಶಗಳನ್ನು ಹೊತ್ತೋಯ್ಯುತ್ತದೆ.ನದಿ ಜೊಡಣೆಯಿಂದ ಇದು ಸಹ ಕ್ಷೀಣಿಸುತ್ತದೆ.
ನೀರಿನ ಕೊಯ್ಲು ಪದ್ಧತಿ ಜಾರಿಗೆ ಬರಬೇಕು. ಹಸೀರುಕರಣ ವಾದರೆ ಅಂತರ್ಜಾಲ ಮಟ್ಟ ಏರಲಿದೆ.ನದಿ ಜೋಡಣೆ ಯೋಜನೆಯ ರೂಪು ರೇಷೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಪರಿಸರ ವಿಜ್ಞಾನಿಗಳು ಇಲ್ಲದಿದ್ದರೆ ಅಂತಹ ಯೋಜನೆ ಅಪ್ರಯೋಜಕ.ಪರಿಸರಾಸಕ್ತಿ ಒಕ್ಕೂಟದ ಅವಶ್ಯಕತೆ ಸಾಕಷ್ಟಿದೆ.
ಸರ್ಕಾರ ನದಿ ಜೋಡಣೆ ಆದೇಶವನ್ನು ರದ್ದು ಪಡಿಸಬೇಕು. ಈ ವಿಷಯದಲ್ಲಿ ಜನಪ್ರತಿನಿಧಿ ಗಳು ಪ್ರಯತ್ನ ಮಾಡಲೇಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟದಲ್ಲಿ ಪಾಲ್ಗೋಳ್ಳಬೇಕು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಸಾಕಷ್ಟು ಹೋರಾಟ ಮಾಡುತ್ತಿದೆ.ಅದಕ್ಕೆ ನಾವು ಸಹಕರಿಸಬೇಕಿದೆ ಎಂದರು.
ಪರಿಸರ ವಿಜ್ಞಾನಿ ಕುಮಾರಸ್ವಾಮಿ ಮಾತನಾಡಿ,ಬೇಡ್ತಿ ನದಿಯನ್ನು ವರದಾ ನದಿಗೆ ಸೇರಿಸಿ ನಂತರ ತುಂಗಭದ್ರಾ ನದಿಗೆ ಸೇರಿಸಿ ಅಲ್ಲಿಂದ ಬಯಲುಸೀಮೆ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಯೋಜನೆಯಿದು. ಕಳೆದ ಇಪ್ಪತ್ತು ವರ್ಷಗಳಿಂದ ನಡೆದ ನದಿ ಜೋಡಣೆ ಕಾರ್ಯಕ್ರಮಗಳು ಇದುವರೆಗೂ ಯಾವುದೇ ಕಾಮಗಾರಿ ಮುಗಿದಿಲ್ಲ. ಇನ್ನೂ ಕೆಲವು ಕಾಮಗಾರಿಗಳು ಆರಂಭವೇ ಆಗಿಲ್ಲ. ಇದರ ವಿರುದ್ಧ ನಾವು ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಇದೆ. ಇದೊಂದು ಅವೈಜ್ಞಾನಿಕ ಯೋಜನೆ. ಸರ್ಕಾರ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು.ಪರಿಸರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ನದಿ ಜೊಡಣೆಯಂತಹ ಯೋಜನೆ ಗಳು ಪರಿಸರದ ಜೊತೆ ಹುಡುಗಾಟಮಾಡಿದಂತೆ.1973 ರಲ್ಲಿ 56.70%.ನಷ್ಟು ಅರಣ್ಯವಿತ್ತು.2018ರಲ್ಲಿ 24.8.5% ನಷ್ಟು ಅರಣ್ಯವಿದೆ.ಅರಣ್ಯ ಇಲಾಖೆಯ ಅಧೀಕಾರಿಗಳು ಬೆಳೆಸುತ್ತಿರುವ
ಅಕೇಶಿಯಾ ಮರದಿಂದ ಜೀವ ವೈವಿಧ್ಯತೆ ನಾಶವಾಗಿದೆ. ದಕ್ಷಿಣ ಭಾರತದಲ್ಲಿ ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈ ಯೋಜನೆ ಜಾರಿಗೆ ಬರುವುದು ಸಹ ಅನುಮಾನವಿದೆ. ಹಲವು ನದಿ ಜೋಡಣೆ ಯೋಜನೆಗಳು ಇರುವಾಗ ಬೇಡ್ತಿ ಅಘನಾಶಿನಿ ವರದಾ ನದಿ ಜೋಡಣೆಯ ಯೋಜನೆಯನ್ನು ತಕ್ಷಣ ಕೈಬಿಡಬೇಕು. ಇಲ್ಲಿಂದ ಬಯಲು ಸೀಮೆ ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದಕ್ಕಿಂತ ಅಲ್ಲೀರುವ ಕೆರೆಗಳನ್ನು ಅಭಿವೃದ್ಧಿ ಪಡಿಸಿದರೆ ಯಾವ ಸಮಸ್ಯೆ ಯೂ ಬರುವುದಿಲ್ಲ. ನದಿ ಜೋಡಣೆ ಯೋಜನೆಯನ್ನೇ ಕೈ ಬಿಡಬೇಕು ಎಂದು ಪ್ರಧಾನಿ ಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿರಸಿ ಸಿದ್ದಾಪುರ ತಾಲೂಕಿನ ಹಲವು ಮುಖಂಡರುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆಲವು ನಿರ್ಣಯಗಳನ್ನು ಮಂಡಿಸಲಾಯಿತು.
ರಾಜ್ಯ ನಿರಾವರಿ ಇಲಾಖೆ ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಕುರಿತು ವಿವರ ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರದ NWDA ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು. ಜಿಲ್ಲೆಯ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತಗಳು ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಗಳು ಬೇಡ್ತಿ ವರದಾ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ನದಿ ತಿರುವು ನದಿ ಜೊಡಣೆ ಯೋಜನೆ ಪ್ರಸ್ತಾವನೆಗಳನ್ನು ಸರ್ಕಾರ ಕೈ ಬಿಡಬೇಕು.ಎಂಬ ನಿರ್ಣಯ ಕೈ ಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ