ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಜಿಲ್ಲಾ ಕ್ರೀಡಾಂಗಣಕ್ಕೆ
ಘೋಷಣೆಯಾಗಿರುವ ಹಣವೇ ಬಿಡುಗಡೇ ಆಗಿಲ್ಲ ಮತ್ತೇ 10 ಕೋಟಿ ಒಳಾಂಗಣ ಕ್ರೀಡಾಂಗಣ ಮಾಡುತ್ತೇವೆ ಎಂದು ಘೋಷಿಸಿರುವುದು ಹಾಸ್ಯಾಸ್ಪದ ಎಂದು ಸ್ಪಂದನಾ ಸ್ಪೋರ್ಟಸ್ ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದ್ದಾರೆ.

ಉಸ್ತುವಾರಿ ಸಚಿವರೇ ಅಧ್ಯಕ್ಷರಿದ್ದಾಗಲೂ 1 ಕೋಟಿರೂ. ಯಲ್ಲಿ ಮಂಜೂರಿಯಾಗಿ ಇಂದಿಗೆ ವರ್ಷವಾದರೂ 75 ಲಕ್ಷ ರೂ.ಬಿಡುಗಡೆ ಮಾಡಿಸಲು ಆಗದೇ, ಕ್ರೀಡಾಂಗಣದ ಒಳಾಂಗಣ ಅರ್ಧಕ್ಕೆ ನಿಂತಿರುವುದು ವಿಷಾಧಕರ ಇರುವಂತಹ ಒಳಾಂಗಣ ಕ್ರೀಡಾಂಗಣಕ್ಕೆ ಸಮತಟ್ಟುವಿಲ್ಲ, ಸುಣ್ಣಬಣ್ಣವಿಲ್ಲ, ಕ್ರೀಡಾಂಗಣಕ್ಕೆ ಮೂಲಭೂತ ಸೌಲಭ್ಯಗಳೇ ಇಲ್ಲ, ಸರಕಾರ 10 ಕೋಟಿರೂ. ವೆಚ್ಚದಲ್ಲಿ ಒಳಾಂಗಣ ಮಾಡುತ್ತೇವೆ ಎಂದು ಘೋಷಿಸಿರುವುದು ಹಾಸ್ಯಾಸ್ಪದ. ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಭಾವನೆ ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ನಾಯ್ಕ ಹೇಳಿದರು

ಇಲ್ಲಿ ಕ್ರೀಡಾಂಗಣ ಇದೆ,ತರಬೇತುದಾರರಿಲ್ಲ,ವಿಶಾಲ ಪ್ರದೇಶವಿದೆ ಆವರಣಕ್ಕೆ ಗೋಡೆ ಇಲ್ಲ, ಸಾಕಷ್ಟು ಸ್ಥಳಾವಕಾಶವಿದ್ದರೂ ಗೀಡಗಂಟಿಗಳು ತುಂಬಿಕೊಂಡಿದೆ. ಕ್ರೀಡಾ ಸಾಮಗ್ರಿಗಳಿದ್ದರೂ ಪೂರ್ಣ ಪ್ರಮಾಣದ ಮತ್ತು ಓಬಿರಾಯನ ಹಳೆಯ ಕಾಲದ ಕ್ರೀಡಾಸಾಮಗ್ರಿಗಳು, 400 ಮೀ ಓಟದ ಪಥವಿದ್ದರೂ ಮಂಜೂರಿಯಾದ ಹಣ ಬಿಡುಗಡೆಯಾಗದೇ ಓಟದ ಪಥ ಕಾಮಗಾರಿ ಅರ್ಧಕ್ಕೆ ಕೈಬಿಟ್ಟಿದೆ ಎಂದು ಹೇಳಿದ ನಾಯ್ಕ

ರಾಜ್ಯದಲ್ಲಿ ಅತೀದೊಡ್ಡ ಕ್ರೀಡಾಂಗಣ ಕ್ಷೇತ್ರವಿದ್ದರೂ ಇಂದಿನವರೆಗೂ ಸ್ಪಷ್ಟ ನೀಲಿನಕ್ಷೆ ಇಲ್ಲ. ಅಸಮರ್ಪಕವಾದ ದೀಪದಿಂದ ಸಂಜೆಯ ನಂತರ ಕಾನೂನು ಬಾಹಿರ ಕೃತ್ಯ ನಿಯಂತ್ರಣಕ್ಕೆ ಪೋಲಿಸರ ಕಾವಲು ಮುಂತಾದ ಅಸಮರ್ಪಕವಾದ ವ್ಯವಸ್ಥೆ ಕ್ರೀಡಾಸಕ್ತರಿಗೆ ಮತ್ತು ಕ್ರೀಡಾಭಿಮಾನಿಗಳಿಂದ ಆಕ್ರೋಶಕ್ಕೆ ಕಾರಣವಾಗಿದೆ
ಕಳೆದ ಒಂದು ದಶಕದಿಂದ ನಿರಂತರ ಕ್ರೀಡಾಂಗಣ ಅಭಿವೃದ್ಧಿಗೆ ಸಾರ್ವಜನಿಕವಾಗಿ ಸಾಕಷ್ಟು ಅಪಸ್ವರ ಇದ್ದಾಗಲೂ ಸರಕಾರ ಮತ್ತು ಜನಪ್ರತಿನಿದಿಗಳಿಂದ ಸ್ಪಂಧನೆ ಇಲ್ಲದಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಹೇಳಿದರು.

