ಸಂಸದ ಅನಂತಕುಮಾರ ಹೆಗಡೆಗೆ ಬೆದರಿಕೆ ಕರೆ ದೂರು ದಾಖಲು

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆಯವರಿಗೆ ಸೋಮವಾರ ರಾತ್ರಿ ಅನಾಮಧೇಯ ವ್ಯಕ್ತಿಯಿಂದ ಜೀವಬೆದರಿಕೆಯ ಕರೆ ಬಂದಿದ್ದು ಸಂಸದರ ಆಪ್ತಕಾರ್ಯದರ್ಶಿ ಸುರೇಶ ಶೆಟ್ಟಿ ದೂರು ದಾಖಲಿಸಿದ್ದಾರೆ.
ಶಿರಸಿ ಕೆ.ಎಚ್.ಬಿ ಕಾಲೋನಿಯಲ್ಲಿರುವ ಸಂಸದರ ಮನೆಯ ಸ್ಥಿರ ದೂರವಾಣಿಗೆ ರಾತ್ರಿ 2 ಗಂಟೆಯ ಸುಮಾರಿಗೆ 94645540399 ಮೊಬೈಲ್ ನಿಂದ ಕರೆ ಬಂದಿದ್ದು
ಹಿಂದಿ ಮಿಶ್ರಿತ ಉರ್ದುವಿನಲ್ಲಿ “ಅನಂತ ಕುಮಾರ್ ಹೆಗಡೆ ಎಂಪಿ ಅಲ್ವಾ..? ನೀನು ಈ ಬಾರಿ ಏನು ಮಾಡುತ್ತೀಯಾ..? ಹಿಂದಿನ‌ ಬಾರಿ ಪೋನ್ ಮಾಡಿದ್ದಾಗ ಪೊಲೀಸ್ ದೂರು ನೀಡಿದ್ದಿ. ಪತ್ರಿಕೆಗಳಲ್ಲೂ ಸುದ್ದಿಯಾಗಿತ್ತು.‌ಈಗ ನಿನ್ನನ್ನು ಏನು ಮಾಡುತ್ತೇನೆ ನೋಡು. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ .ಪದೇ ಪದೇ ಜೀವ ಬೆದರಿಕೆ ಕರೆ ಬರುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅನಾಮಧೇಯ ವ್ಯಕ್ತಿಯ ವಿರುದ್ಧ ಸೂಕ್ತ‌ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಸಂಸದ ಅನಂತಕುಮಾರ ಹೆಗಡೆಯವರಿಗೆ ಈ ಹಿಂದೆಯೂ ಸಾಕಷ್ಟು ಬಾರಿ ಬೆದರಿಕೆಯ ಕರೆ ಬಂದಿದ್ದು 16/2/2019ರಲ್ಲಿ ಪ್ರಕರಣ ದಾಖಲಿಸಿದ್ದರು.
####
ಸಂಸದ ಅನಂತಕುಮಾರ ಹೆಗಡೆ ವಿರುದ್ದ ಅವಹೇಳನಕಾರಿ ಪತ್ರಿಕಾ ಹೇಳಿಕೆ ನೀಡಿದ್ದ ಮಾಜಿ ಸಚೀವ ಆನಂದ ಅಸ್ನೋಟಿಕರ್ ವಿರುದ್ದ ಮಂಡ್ಯದಲ್ಲಿ ಪೊಲೀಸ್ ದೂರು ದಾಖಲಾಗಿದೆ.

ಆನಂದ ಅಸ್ನೋಟಿಕರ್ ಅವರು ಲಘುವಾಗಿ ಮತ್ತು ಪ್ರಚೋದನಕಾರಿಯಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ ಮಂಡ್ಯದ ಅನಿಲ್ ಗೌಡ ಎಂಬುವವರ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳವಾರ ದೂರು ನೀಡಿದ್ದಾರೆ.
ಸೋಮವಾರ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಆನಂದ ಅಸ್ನೋಟಿಕರ್, ಸಂಸದ ಹೆಗಡೆ ಅವರು ಅನಾರೋಗ್ಯ ಹೊಂದಿದ್ದರಿಂದ ಅವರು ಮತ್ತೆ ರಾಜಕೀಯಕ್ಕೆ ಬರಲ್ಲ ಎಂದು ತಿಳಿದಿದ್ದೆ, ಆದರೆ ಮತ್ತೆ ಚೇತರಿಸಿಕೊಂಡು ರಾಜಕೀಯಕ್ಕೆ ಬಂದಿದ್ದರಿಂದ ಬಿಜೆಪಿ ಸೇರಬೇಕು ಎಂಬ ಆಸೆಯಿದ್ದ ನನಗೆ ನಿರಾಸೆಯಾಗಿದೆ. ಐದು ವರ್ಷಕ್ಕೊಮ್ಮೆ ಮುಖ ತೋರಿಸುವ , ಕೋಮು ಗಲಬೆಯ ಸಂದರ್ಭದಲ್ಲಿ ಮಾತ್ರ ಮುನ್ನೆಲೆಗೆ ಬರುವ ಸಂಸದ ಹೆಗಡೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಏಕವಚನದಲ್ಲಿ ಮಾತನಾಡಿದ್ದರು.

ಈ ಹಿನ್ನೆಲೆಯಲ್ಲಿ ದೂರು ನೀಡಿರುವ ಅನಿಲ್‌ಗೌಡ, ತಾನು ಸಂಸದ ಅನಂತಕುಮಾರ ಹೆಗಡೆ ಅಭಿಮಾನಿಯಾಗಿದ್ದು ನನ್ನಂತೆ ಅನೇಕ ಅಭಿಮಾನಿಗಳಿಗೆ ಆನಂದ ಅಸ್ನೋಟಿಕರ್ ಹೇಳಿಕೆಯಿಂದ ನೋವಾಗಿದೆ. ಈ ಹಿನ್ನೆಲೆಯಲ್ಲಿ ಆನಂದ ಅಸ್ನೋಟಿಕರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರ ದೂರಿನಲ್ಲಿ ಉಲ್ಲೇಖಿಸಲಾಗಿದೆ.

About the author

Adyot

Leave a Comment