ಆದ್ಯೋತ್ ಸುದ್ದಿನಿಧಿ:
ಅರಣ್ಯ ಪ್ರದೇಶದಲ್ಲಿ ವಾಸ್ತವ್ಯಕ್ಕಾಗಿ ಮನೆ ಕಟ್ಟಿಕೊಂಡಿರುವ ಸುಮಾರು ಹತ್ತು ಸಾವಿರ ಕಟ್ಟಡಗಳು ಅನಧೀಕೃತ ಅತಿಕ್ರಮಣವೆಂದು ಘೋಷಿಸಿ, ಮುಂದಿನ ಆರು ವಾರಗಳಲ್ಲಿ ಸಂಪೂರ್ಣವಾಗಿ ಒಕ್ಕಲೆಬ್ಬಿಸಬೇಕೆಂಬ ಸುಫ್ರೀಂ ಕೋರ್ಟಿನ ಜೂನ್ 7 ರ ಆದೇಶದಿಂದ ಅರಣ್ಯ ಪ್ರದೇಶವನ್ನೇ ಅವಲಂಭಿತರಾಗಿರುವ ಉತ್ತರಕನ್ನಡ ಜಿಲ್ಲೆಯ 85,000 ಕುಟುಂಬಗಳಲ್ಲಿ ಆತಂಕದ ಛಾಯೇ ಉಂಟಾಗಿದೆ ಎಂದು ಅರಣ್ಯಭೂಮಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಹರಿಯಾಣ ರಾಜ್ಯದ ಫರಿದಾಬಾದ್ ಜಿಲ್ಲೆಯ ಲಕ್ಕಾರ್ಪುರ್ ಕೋರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಮಾರು ಹತ್ತು ಸಾವಿರ ಕುಟುಂಬವು ವಾಸ್ತವ್ಯಕ್ಕಾಗಿ ಅರಣ್ಯ ಭೂಮಿ ಅತಿಕ್ರಮಿಸಿದ್ದರು. ಅತಿಕ್ರಮಣವು ಅನಧೀಕೃತವೆಂದು ಘೋಷಿಸಿ
ಅರಣ್ಯ ಭೂಮಿಯಲ್ಲಿ ಅನಧೀಕೃತ ಅತಿಕ್ರಮಣದಾರರೊಂದಿಗೆ ಯಾವುದೇ ರೀತಿಯ ರಾಜಿಯಾಗಲಿ ಅಥವಾ ವಿಶೇಷ ವಿನಾಯಿತಿಗಾಗಲಿ ಅರ್ಹರಲ್ಲವೆಂದು ಗಂಭೀರವಾಗಿ ಆದೇಶದಲ್ಲಿ ವ್ಯಾಖ್ಯಾಯಿಸಲಾಗಿದೆ.ಅಲ್ಲದೇ, ಅನಧೀಕೃತ ಅರಣ್ಯ ಅತಿಕ್ರಮಣದಾರರು ಕಾನೂನು ನಿಯಮದಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲವೆಂದು ಸುಫ್ರೀಂ ಕೋರ್ಟ ಈ ಆದೇಶದಲ್ಲಿ
ಉಲ್ಲೇಖಿಸಿದೆ.
ಹರಿಯಾಣದ ಅತಿಕ್ರಮಣದಾರರ ಮೇಲೆ ತೆಗೆದುಕೊಂಡ ನೀತಿಯನ್ನೇ ಸುಫ್ರಿಂ ಕೋರ್ಟ ಉತ್ತರ ಕನ್ನಡ ಜಿಲ್ಲೆಯ ಅತಿಕ್ರಮಣದಾರರು ಅನಧೀಕೃತವೆಂದು ಘೋಷಿಸಿದರೆ, ಜಿಲ್ಲೆಯ ಒಟ್ಟು ಜನಸಂಖ್ಯೆಯ ಒಂದು ಮೂರರಷ್ಟು ಜನರು ಅತಂತ್ರವಾಗಿ ನಿರಾಶ್ರಿತರ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಮುಂಚಿತವಾಗಿ ಸರಕಾರವು ಅರಣ್ಯ ವಾಸಿಗಳ ಮಂಜೂರಿಗೆ ಸಂಬಂಧಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂಬ ಆಗ್ರಹ ಜಿಲ್ಲಾದ್ಯಂತ ಕೇಳಿಬರುತ್ತಿದೆ.ಅರಣ್ಯ ಹಕ್ಕು ಕಾಯಿದೆಯು ಅರಣ್ಯ ವಾಸಿಗಳ ಪರವಾಗಿದ್ದು, ಕೇಂದ್ರ ಸರಕಾರವು ಸದ್ರಿ ಕಾನೂನು ಅಡಿಯಲ್ಲಿ ‘ಸಾಗುವಳಿದಾರರ ಪರ’ ರಾಷ್ಟ್ರೀಯ ನೀತಿ ರೂಪಿಸಲು ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕೇಂದ್ರ ಸರಕಾರಕ್ಕೆ ಅಗ್ರಹಿಸಿದ್ದಾರೆ.