ಆಹಾರ ಕಿಟ್ ತಯಾರಿಕೆ ಖಾಸಗಿಯವರಿಗೆ ನೀಡಿರುವುದು ಅನುಮಾನಕ್ಕೆಕಾರಣ- ರವೀಂದ್ರ ನಾಯ್ಕ

ಆದ್ಯೋತ್ ಸುದ್ದಿನಿಧಿ
ಕೋವಿಡ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿರುವ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗಾಗಿ ವಿತರಿಸಿರುವ ಆಹಾರಕಿಟ್ ತಯಾರಿಕೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ಹಾಗೂ ವಯಕ್ತಿಕ ಸಂಸ್ಥೆಗಳಿಗೆ ನೀಡಿರುವುದು ಸಾರ್ವಜನಿಕವಾಗಿ ಅನುಮಾನಕ್ಕೆ ಕಾರಣವಾಗಿದೆ ಎಂದು ಶಿರಸಿಯ ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಆರೋಪಿಸಿದ್ದಾರೆ.

ಆಹಾರಕಿಟ್ ತಯಾರಿಕೆಯ ಗುತ್ತಿಗೆಯನ್ನು ಪಡೆದಿರುವ 19 ಸಂಸ್ಥೆಗಳಲ್ಲಿ 17 ಸಂಸ್ಥೆಗಳು ವಯಕ್ತಿಕ ಹಾಗೂ ಖಾಸಗಿ ಸಂಸ್ಥೆಯಾಗಿದ್ದು ಎರಡು ಸಹಕಾರಿ ಸಂಸ್ಥೆಯಾಗಿದೆ.ಈ ಗುತ್ತಿಗೆಯನ್ನು ನೀಡುವಲ್ಲಿ ಇಲಾಖೆ ಅನುಸರಿಸಿರುವ ಮಾನದಂಡ,ಸರಕಾರದ ನೀತಿ-ನಿಯಮಗಳು ಟೆಂಡರ್ ನಲ್ಲಿರುವ ಪಾರದರ್ಶಕತೆಯನ್ನು ಕಾರ್ಮಿಕ ಇಲಾಖೆಯ ಸಚೀವರು ಸ್ಪಷ್ಟಪಡಿಸಬೇಕಾಗಿದೆ.


ರಾಜ್ಯದಲ್ಲಿ ನೊಂದಾಯಿತ ಕಾರ್ಮಿಕರಿಗೆ ಆಹಾರಕಿಟ್ ವಿತರಣೆಯಲ್ಲಿ ಲೋಪವಾಗಿದೆ ಎಂಬ ಅನುಮಾನದಿಂದ ಮಾಹಿತಿ ಹಕ್ಕಿನ ಅಧಿನಿಯಮದಡಿ ಬೆಂಗಳೂರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ.
ರಾಜ್ಯದಲ್ಲಿ 6.08ಲಕ್ಷ ಆಹಾರಕಿಟ್ ಪೂರೈಕೆ ಮಾಡಲಾಗಿದೆ.19 ಸಂಸ್ಥೆಯಿಂದ 481553888ರೂ.
ಮೌಲ್ಯದ ಆಹಾರಕಿಟ್ ತಯಾರಿಸಲ್ಪಟ್ಟಿದೆ. ಆದರೆ ಈ ಕಿಟ್ ನ ಮೌಲ್ಯ ಒಂದೇ ರೀತಿ ಇಲ್ಲದೆ ಕಿಟ್ ಬೆಲೆ ಬೇರೆ ಬೇರೆಯಾಗಿದೆ.290ರೂ.ನಿಂದ
899ರೂ.ವರೆಗೂ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಈ ಅನುಮಾನಗಳಿಗೆ ಕಾರ್ಮಿಕ ಸಚೀವರೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

About the author

Adyot

Leave a Comment