ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಈಚಲು ಬಟ್ಟದಲ್ಲಿರುವ ಭೂ ದೇವಿ ದೇವಸ್ಥಾನಕ್ಕೆ ಬುಧವಾರ ಕೋಡಿಮಠದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ ಭೇಟಿನೀಡಿ ಪೂಜಾಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು,ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಶೀಘ್ರದಲ್ಲಿ ಸುಖಾಂತ್ಯ ಕಾಣಲಿದೆ. ಯಡಿಯೂರಪ್ಪ ಮುಂದುವರಿಯುತ್ತಾರೋ ಇಲ್ಲವೋ ಯಾವ ರೀತಿಯ ಸುಖಾಂತ್ಯ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯಕ್ಕೆ ಈಗ ಅಶುಭ ನುಡಿಯುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.
ಭಾರತದ ಸಂವಿದಾನದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ ಹೀಗಾಗಿ ರಾಜಕೀಯ ಬೆಳವಣಿಗೆಯ ಕುರಿತು ಮಠಾಧೀಶರು ಅಭಿಪ್ರಾಯ ವ್ಯಕ್ತಪಡಿಸುವುದು ಅವರವರ ವಾಕ್ ಸ್ವಾತಂತ್ರವಾಗಿದ್ದು, ಈ ಅವಕಾಶವನ್ನು ಸಂವಿಧಾನವೇ ನೀಡಿದೆ
ಅಗಸ್ಟ್ ಮೂರನೇ ವಾರದಿಂದ ರೋಗ ರುಜಿನ ಹೆಚ್ಚಾಗಲಿದೆ. ಅದು ಜನವರಿಯವರೆಗೆ ಇರಲಿದೆ. ಆದರೆ ಕೊರೊನಾ ಸಾಯುವಂತಹ ಕಾಯಿಲೆ ಅಲ್ಲ. ಜನರು ಕೇವಲ ಭೀತಿಯಿಂದ ಸಾಯುತ್ತಿದ್ದಾರೆ. ಯಾರೂ ಗಾಬರಿ ಪಡುವ ಅವಶ್ಯಕತೆಯಿಲ್ಲ ಎಂದು ಶ್ರೀಗಳು ಧೈರ್ಯ ನುಡಿದರು.
ಆಶ್ವೀಜ ಮಾಸದಿಂದ ಸಂಕ್ರಾತಿಯ ಒಳಗೆ ಬಹುದೊಡ್ಡ ಅವಘಡ ಆಗಲಿದೆ.ಅದು ಭಾರತದಲ್ಲಿಯೇ ಆಗಲಿದೆ.ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ. ಅದರಿಂದ ಜಗತ್ತು ತಲ್ಲಣಗೊಳಿಸಲಿದೆ. ಆದರೆ ದೇವರ ಕೃಪೆಯಿಂದ ಅದು ತಪ್ಪಲಿದೆ. ಮುಂದೆ ಹೆಚ್ಚು ಮಳೆಯಾಗಲಿದ್ದು, ಜಲಪ್ರಳಯ ಉಂಟಾಗಲಿದೆ. ಅದೇ ರೀತಿ ಅಪಘಾತಗಳೂ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದರು.