ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ವರ್ಗಾವಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗಾಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಈಶ್ವರ ಉಳ್ಳಾಗಡ್ಡಿಯವರನ್ನು ವರ್ಗಾವಣೆ ಮಾಡಲಾಗಿದೆ.
ಉಪವಿಭಾಗಾಧಿಕಾರಿಯಾಗಿ ಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು ಮಂಗನಖಾಯಿಲೆ ಉಲ್ಬಣಗೊಂಡಿತ್ತು ಕಳೆದ 6-7 ತಿಂಗಳಿನಿಂದ ಕೊವಿಡ್ ಸಾಂಕ್ರಾಮಿಕ ಆವರಿಸಿತ್ತು ಈ ಎಲ್ಲಾ ಕ್ಲಿಷ್ಟಕರ ಸಮಸ್ಯೆಗಳನ್ನು ಸಮಾಧಾನದಿಂದಲೇ ಬಗೆಹರಿಸುತ್ತ ಕೈ ಕೆಳಗಿನ ಅಧಿಕಾರಿಗಳ ಹಾಗೂ ಸಾರ್ವಜನಿಕರ ವಿಶ್ವಾಸಗಳಿಸಿ ಎಲ್ಲೂ ಆರೋಪ,ಅಪವಾದಗಳಿಗೆ ಅವಕಾಶಕೊಡದೆ ಕಾರ್ಯನಿರ್ವಹಿಸಿದ್ದರು.

ಮರಣ ಹೊಂದಿದವರಿಗೆ,ಮನೆ ಕಳೆದುಕೊಂಡವರಿಗೆ ಶೀಘ್ರದಲ್ಲಿ ಪರಿಹಾರ ನೀಡುವಲ್ಲಿ ಮುತುವರ್ಜಿವಹಿಸಿದ್ದರು.ತಮ್ಮ ಕಚೇರಿಯನ್ನು ನವೀಕರಣಗೊಳಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಘನತೆ ತಂದಿದ್ದರು

ಸರಳ,ಸಜ್ಜನಿಕೆ,ಅಹಂ ಇಲ್ಲದ ವ್ಯಕ್ತಿತ್ವದ ಈಶ್ವರ ಉಳ್ಳಾಗಡ್ಡಿಯವರಿಗೆ ಇನ್ನು ಹೆಚ್ಚಿನ ಉನ್ನತ ಹುದ್ದೆಯು ದೊರಕಲಿ ಅದರಿಂದ ಸಮಾಜಕ್ಕೆ ಒಂದಿಷ್ಟು ಪ್ರಯೋಜನವಾಗಲಿ ಎಂದು ಆದ್ಯೋತ್ ನ್ಯೂಸ್ ಹಾರೈಸುತ್ತದೆ.

About the author

Adyot

Leave a Comment