ಆದ್ಯೋತ್ ಸುದ್ದಿನಿಧಿ:
ಶಿರಸಿ ಜಿಲ್ಲೆಗೆ ಆಗ್ರಹಿಸಿ ಪತ್ರ ಚಳುವಳಿ ಆರಂಭ
ಶಿರಸಿ ಕೇಂದ್ರವಾಗಿರಿಸಿಕೊಂಡು ಘಟ್ಟದ ಮೇಲಿನ ತಾಲೂಕುಗಳನ್ನೊಳಗೊಂಡ ಶಿರಸಿ ಜಿಲ್ಲೆಯನ್ನು ಮಾಡಬೇಕೆಂಬ ಕೂಗು ಪತ್ರಚಳುವಳಿಯನ್ನು ಮಾಡುವ ಮೂಲಕ ಮತ್ತೋಮ್ಮೆ ಪ್ರಾರಂಭವಾಗಿದೆ.
ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಅಧ್ಯಕ್ಷತೆಯಲ್ಲಿ ಕಳೆದ 8-10 ವರ್ಷದಿಂದ ಶಿರಸಿ ಜಿಲ್ಲಾ ಹೋರಾಟ ಸಮಿತಿಯನ್ನು ರಚಿಸಿಕೊಂಡು ಶಿರಸಿ ಜಿಲ್ಲೆ ರಚನೆ ಮಾಡುವಂತೆ ನಿರಂತರ ಹೋರಾಟ ಮಾಡುವ ಮೂಲಕ ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆ 12 ತಾಲೂಕುಗಳನ್ನು ಒಳಗೊಂಡ ದೊಡ್ಡ ಜಿಲ್ಲೆಯಾಗಿದೆ. ಇದರಲ್ಲಿ ಘಟ್ಟದ ಮೇಲಿನ 6 ತಾಲ್ಲೂಕುಗಳು ಮಲೆನಾಡು ತಾಲೂಕುಗಳಾದರೆ, 1 ತಾಲೂಕು ಅರೆ ಬಯಲುಸೀಮೆ ಹಾಗೂ ಘಟ್ಟದ ಕೆಳಗಿನ 5 ತಾಲ್ಲೂಕುಗಳು ಕರಾವಳಿ ತಾಲೂಕುಗಳಾಗಿವೆ. ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಭೌಗೋಳಿಕವಾಗಿ ವಿಸ್ತಾರವಾಗಿರುವ ಇಂತಹ ದೊಡ್ಡ ಜಿಲ್ಲೆಯನ್ನು ಪ್ರತ್ಯೇಕಿಸಿ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನು ಮಾಡಬೇಕು ಅಂತ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಕಾರವಾರವಾಗಿದೆ. ಘಟ್ಟದ ಮೇಲಿನ ತಾಲೂಕುಗಳಿಂದ ಕಾರವಾರಕ್ಕೆ ಇರೋ ಅಂತರ ಸರಾಸರಿ 130 ಕಿಲೋಮೀಟರ್. ಯಾವುದೇ ಕೆಲಸಕ್ಕೂ ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ತೆರಳಬೇಕಿದೆ. ಬೆಳಿಗ್ಗೆ ಕೆಲಸಕ್ಕಾಗಿ ಇಲ್ಲಿಂದ ಹೊರಟರೆಜಿಲ್ಲಾ ಕೇಂದ್ರಕ್ಕೆ ಹೋಗುವುದಕ್ಕೆ ಮಧ್ಯಾಹ್ನವಾಗಿರುತ್ತದೆ.
ಒಂದು ದಿನಕ್ಕೆ ಕೆಲಸ ಮುಗಿಯದಿದ್ದರೆ ಮತ್ತೆ ಬಹುದೂರದ ಸ್ವಂತ ಊರಿಗೆ ತೆರಳಬೇಕಾಗುತ್ತೆ. ಸಂಜೆ ವಾಪಸ್ ಬರಲು ಸರಿಯಾದ ಬಸ್ ನ ವ್ಯವಸ್ಥೆ ಕೂಡ ಇಲ್ಲ. ಕೆಲಸಗಳು ಆಗುತ್ತಿಲ್ಲ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆಅಭಿವೃದ್ಧಿಯಲ್ಲಿ ಜಿಲ್ಲೆ ತುಂಬಾ ಹಿಂದುಳಿದಿದೆ. ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ಕದಂಬರ ರಾಜಧಾನಿಯಾದ ಬನವಾಸಿಯ ಕಡೆಗಣನೆ ಇದಕ್ಕೆ ಉದಾಹರಣೆ. ಆದ್ದರಿಂದ ಬನವಾಸಿಯನ್ನು ತಾಲುಕನ್ನಾಗಿ ಮಾಡಿ ಶಿರಸಿ ಜಿಲ್ಲೆ ಮಾಡಿದರೆ ಎಲ್ಲಾ ರೀತಿಯಲ್ಲೂ ಅನುಕೂಲ
ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಒಟ್ಟಿನಲ್ಲಿ 12 ತಾಲೂಕುಗಳ ಅತಿದೊಡ್ಡ ಜಿಲ್ಲೆಯನ್ನು ವಿಭಾಗಿಸಿ ಪ್ರತ್ಯೇಕ ಜಿಲ್ಲೆ ರಚನೆಗೆ ಮತ್ತೊಮ್ಮೆ ಹೋರಾಟ ಪ್ರಾರಂಭವಾಗಿದೆ. ಪತ್ರ ಚಳುವಳಿಯ ಹೋರಾಟ ಉಗ್ರ ಚಳುವಳಿಯಾಗಿ ತಿರುಗುವ ಮುನ್ನ ಸರ್ಕಾರ ಎಚ್ಛೆತ್ತುಕೊಳ್ಳಬೇಕಾಗಿದೆ. ಶಿರಸಿ ಜಿಲ್ಲಾ ಹೋರಾಟ ಸಮಿತಿಯನ್ ಹೋರಾಟಕ್ಕೆ ಫಲ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
—
ಶಿರಸಿಜಿಲ್ಲೆಯನ್ನಾಗಿಸಬೇಕೆಂದು ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ.ಸಾಕಷ್ಟು ಬಾರಿ ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಿಸಿದ ಸರಕಾರದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದೇವೆ.
ಈಗ ಪತ್ರಚಳುವಳಿಯನ್ನು ಪ್ರಾರಂಭಿಸುವ ಮೂಲಕ ಆಗ್ರಹವನ್ನು ಹೆಚ್ಚಿಸುತ್ತಿದ್ದೇವೆ.ಶಿರಸಿ ಜಿಲ್ಲೆ ಮಾಡುವ ಕುರಿತಂತೆ
ನಮ್ಮಭಾಗದವರೆ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ ಹೆಗಡೆಯವರಲ್ಲಿ ಮನವಿ
ಮಾಡುತ್ತೇವೆ.ಪತ್ರವನ್ನುರಾಜ್ಯಪಾಲರಿಗೆ,ಮುಖ್ಯಮಂತ್ರಿಗಳಿಗೆ,ಕಂದಾಯ ಸಚೀವರಿಗೆ ಕಳುಹಿಸಲಾಗುತ್ತಿದೆ.ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ.
ಉಪೇಂದ್ರ ಪೈ
ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರು
ಒಳ್ಳೆಯ ಕಾಯಕ. ನಾವೂ ಕೈಜೋಡಿಉವೆವು.