ಶಿರಸಿ : ಖಚಿತ ಮಾಹಿತಿ ಮೇರೆಗೆ ಶಿರಸಿ ಡಿವೈಎಸ್ಪಿ ಜಿ.ಟಿ.ನಾಯಕ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅಂದಾಜು 56 ಲಕ್ಷ ರೂಪಾಯಿ ನಗದು ಹಣ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಜಿಲ್ಲೆಯ ಶಿರಸಿಯ ಚಿಪಗಿ ನಾಕಾ ಬಳಿ ನಡೆದಿದೆ.
ಸಿದ್ದಾಪುರ ತಾಲೂಕಿನ ಹೇರೂರಿನ ಅಬ್ದುಲ್ ಮುತಲಿಫ (31) ಹಾಗೂ ಅಬ್ದುಲ್ ಸೌದ್ (42) ಬಂಧಿತ ಆರೋಪಿಗಳಾಗಿದ್ದು, ಇವರು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹಣ ಸಾಗಿಸುತ್ತಿದ್ದಾಗ ಚಿಪಗಿ ನಾಕಾ ಬಳಿ, ಸುಮಾರು 55 ಲಕ್ಷದ 96 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಹಣ ಸಾಗಿಸಲು ಬಳಸಿದ್ದ ರೆನಾಲ್ಟ್ ಡಸ್ಟರ್ (KA 31, N 2628) ಕಾರನ್ನು ಜಪ್ತಿ ಮಾಡಲಾಗಿದ್ದು, ಸಿಬ್ಬಂದಿಗಳಾದ ಪ್ರಶಾಂತ, ಚಂದ್ರಪ್ಪ, ಕೃಷ್ಣ, ಅನ್ಸಾರಿ, ರಾಜೇಶ ನಾಯ್ಕ, ರಾಜೇಶ ಕೊರಗ, ಜೋಸೇಫ್ ಹಾಗೂ ಶ್ರೀಧರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Good job.