‘ಸಪ್ತಪದಿ’ ಕುರಿತು ವಿಚಾರ ಸಂಕಿರಣ

ಶಿರಸಿ : ಮುಜರಾಯಿ ಇಲಾಖೆಯ ನೂತನ ಕಾರ್ಯಕ್ರಮ ‘ಸಪ್ತಪದಿ’ ಯ ಕುರಿತಂತೆ ವಿಚಾರ ಸಂಕಿರಣ ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.


ಹಿಂದೂ ಸಮುದಾಯದ ಅವಿವಾಹಿತ ಯುವಕ ಯುವತಿಯರ ವಿವಾಹಕ್ಕಾಗಿ ರಾಜ್ಯ ಸರ್ಕಾರದಿಂದ ಅನುದಾನ ನೀಡಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯೇ ‘ಸಪ್ತಪದಿ’. ಈ ಕಾರ್ಯಕ್ರಮವನ್ನು ಮುಜರಾಯಿ ಇಲಾಖೆ ವತಿಯಿಂದ ಜಿಲ್ಲೆಯ ಆಯ್ದ ದೇವಾಲಯಗಳಲ್ಲಿ ನಡೆಸಲಾಗುತ್ತದೆ. ಅದರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಇಂತದ್ದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ದೇಶಕ್ಕೇ ಮಾದರಿ ಯೋಜನೆಯಾಗಿ ರೂಪುಗೊಳ್ಳುತ್ತದೆ. ಇದರ ರೂವಾರಿಗಳಾದ ಯಡಿಯೂರಪ್ಪ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದಿಸುತ್ತೇನೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನ ಮಾದರಿಯಾಗಿ ಮಾಡಿ ತೋರಿಸುತ್ತೇವೆ ಅಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದವರು ಸಪ್ತಪದಿ ಸರಳ ಸಾಮೂಹಿಕ ವಿವಾಹದಲ್ಲಿ ನೋಂದಣಿ ಮಾಡಿಸಿಕೊಂಡು ವಿವಾಹವಾಗಬಹುದಾಗಿದೆ. ಈ ರೀತಿ ಸಾಮೂಹಿಕವಾಗಿ ಸರಳವಾಗಿ ಮದುವೆಯಾಗುವ ಜೋಡಿಗಳಿಗೆ ಸರಕಾರಿ ಉಪನೋಂದಣಾಧಿಕಾರಿಗಳಿಂದ ಸದರಿ ವಿವಾಹ ರಜಿಸ್ಟರ್ ಮಾಡಿಕೊಡಲಾಗುವುದು. ಸರಕಾರ ಜನತೆಯೊಂದಿಗಿದೆ. ಅಧಿಕಾರಿಗಳು ಕೂಡ ತಮ್ಮ ಮಕ್ಕಳ ಮದುವೆ ಮಾಡುವಂತೆ ಮುತುವರ್ಜಿ ವಹಿಸಿ ಮದುವೆ ಮಾಡಿಕೊಡಬೇಕು. ಸರಳ ವಿವಾಹ ಉತ್ತೇಜಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ನ ಸುಧಾ ಮೂರ್ತಿ ಅವರು ಸಪ್ತಪಧಿ ಸರಳ ಸಾಮೂಹಿಕ ವಿವಾಹದ ರಾಯಭಾರಿ ಅಗಲಿದ್ದಾರೆ ಎಂದು ಅವರು ತಿಳಿಸಿದರು.

About the author

Adyot

Leave a Comment