ಶಿರಸಿ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ ಎಲ್ಲರ ಗಮನ ಸೆಳೆಯಿತು. ಶಿರಸಿಯ ಲಯನ್ಸ್ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಮಾರಿಕಾಂಬಾ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪರೀಕ್ಷೆಯ ಕುರಿತು ಪಾಠ ಮಾಡಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರು ಮಕ್ಕಳ ಜೊತೆ ಕೂತು ಪಾಠ ಕೇಳಿದ್ದು ವಿಶೇಷವಾಗಿತ್ತು.
ನಂತರ ಮಾತನಾಡಿದ ಸಚಿವರು, ನಾನು ಹೋದ ಜಿಲ್ಲೆಗಳಲ್ಲೆಲ್ಲಾ ಸಿ.ಇ. ಓ ರಿಂದ ಬಿ.ಇ. ಓ ವರೆಗೆ ಎಲ್ಲರೂ ಕೂಡ ಸರ್ಕಾರಿ ಶಾಲಾ ಮಕ್ಕಳ ಕುರಿತು ಹೆಚ್ಚಿನ ಗಮನ ಕೊಡ್ತಿದಾರೆ. ಕೆಲವು ಕಡೆ ಒಬ್ಬ ಶಿಕ್ಷಕರು ಸಂಜೆ ಆದ್ರೂ ಕೂಡ ಶಾಲೆಯಲ್ಲಿದ್ದುಕೊಂಡೇ ಮಕ್ಕಳಿಗೆ ಪಾಠ ಹೇಳಿಕೊಡ್ತಿದಾರೆ. ಕೆಲವು ಕಡೆಗಳಲ್ಲಿ ಬೆಳಿಗ್ಗೆನೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಿಸ್ಡ್ ಕಾಲ್ ಕೊಟ್ಟು ಎಬ್ಬಿಸ್ತಾರೆ. ನಂತರ ಓದಲು ಶುರು ಮಾಡಿದ ಮೇಲೆ ವಿದ್ಯಾರ್ಥಿಗಳು ವಾಪಸ್ ಮಿಸ್ಡ್ ಕಾಲ್ ಕೊಡಬೇಕು. ಇಂತಹ ವಿಧಾನಗಳು ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ರ್ಯಾಂಕಿಂಗ್ ತಗೊಳೋದು ಮುಖ್ಯವಲ್ಲ. ಶಿಕ್ಷಣದ ಗುಣಮಟ್ಟ ಉತ್ತಮವಾಗಬೇಕು. ಸಮಸ್ಯೆಗಳನ್ನ ಎದುರಿಸೋ ಆತ್ಮವಿಶ್ವಾಸ ಮಕ್ಕಳಲ್ಲಿ ಬರಬೇಕು. ಇಂಗ್ಲಿಷ್ ಕಲಿಕೆ ತಪ್ಪಲ್ಲ. ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮ ಯಾವುದೇ ಇರಲಿ, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಬೆಳೆಯಬೇಕು. ಮಕ್ಕಳು ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದುವಾಗ ಮೌಲ್ಯಮಾಪನ ಬಹಿಷ್ಕಾರ ಅನ್ನೋದನ್ನ ಬಿಟ್ಟುಬಿಡಿ. ಏನೇ ಇದ್ರು ಕುಳಿತು ಮಾತನಾಡೋಣ. ಬೇಡಿಕೆಗಳನ್ನ ಈಡೇರಿಸೋಣ ಅಂದರು.
ಇತ್ತೀಚಿನ ವರ್ಷಗಳಲ್ಲಿ ನಿಜವಾದ ಶಿಕ್ಷಣ ಸ್ನೇಹಿ ಸಚಿವರು ಸಿಕ್ಕಿರುವುದು ನಮ್ಮ ಇಲಾಖೆಯ ಭಾಗ್ಯ.