ಆದ್ಯೋತ್ ಸುದ್ದಿ ನಿಧಿ : ಇಂದು ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ. ದೇಶಾದ್ಯಂತ ಸೂರ್ಯಗ್ರಹಣದ ಕೌತುಕವನ್ನ ವೀಕ್ಷಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಗ್ರಹಣ ಸಂಪೂರ್ಣ ಗೋಚರವಾಗೋದಕ್ಕೆ ಮೋಡ ಅಡ್ಡಿಪಡಿಸಿದೆ.
ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರೋದ್ರಿಂದ ಗ್ರಹಣ ಗೋಚರದ ಸಾಧ್ಯತೆ ಕಡಿಮೆಯಾಗಿತ್ತು. ಆದರೂ ಕೂಡ ಆಗಾಗ ಮೋಡದ ಮರೆಯಲ್ಲಿ ಇಣುಕಿ ಗ್ರಹಣ ಕವಿದಿರೋದನ್ನ ಸೂರ್ಯ ತೋರಿಸಿದ್ದಾನೆ. ಮೋಡಗಳ ಮರೆಯಲ್ಲಿ ಕತ್ತಲು ಬೆಳಕಿನಾಟ ಗೋಚರವಾಗಿದೆ. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬಾರದೆ ಮನೆಯಲ್ಲಿಯೇ ಕುಳಿತು ಟಿವಿ ಮಾಧ್ಯಮಗಳಲ್ಲಿ ಗ್ರಹಣವನ್ನು ವೀಕ್ಷಿಸಿದ್ದಾರೆ.