ಆದ್ಯೋತ್ ಸುದ್ದಿ ನಿಧಿ: ಕಾನೂನು
ಸಚಿವ ಮಾಧುಸ್ವಾಮಿ ರೈತಮಹಿಳೆಗೆ ನುಡಿದ ಅನುಚಿತ ನುಡಿ ಪ್ರಕರಣ ಮುಗಿದ ಅಧ್ಯಾಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಸೋಮವಾರ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆದ್ಯೋತ್ ನ್ಯೂಸ್ ಗೆ ಪ್ರತಿಕ್ರಿಯಿಸಿದರು. ಈಗಾಗಲೇ ನಾನು ಮಾಧುಸ್ವಾಮಿಯವರಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ ಅಲ್ಲದೆ ಕ್ಷಮೆಯಾಚಿಸಿದ್ದಾರೆ. ಅದಕ್ಕೆ ಈಗ ಪ್ರತಿಕ್ರಿಯಿಸುವುದು ಸರಿಯಲ್ಲ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿರುವವರು ಸಹೋದರತ್ವ ಭಾವನೆಯಿಂದ ನಡೆದುಕೊಳ್ಳಬೇಕು. ಇದು ಕೇವಲ ರಾಜಕೀಯ ವ್ಯವಸ್ಥೆಯಲ್ಲುಳ್ಳವರಿಗೆ ಮಾತ್ರವಲ್ಲ ಎಲ್ಲರೂ ಅನ್ವಯಿಸಿಕೊಳ್ಳಬೇಕು. ನಮ್ಮ ಉನ್ನತ ಸ್ಥಾನದಿಂದ ನಾವು ವಿಚಲಿತರಾಗದೆ ಮಾನವೀಯತೆಯಿಂಧ ವರ್ತಿಸುವುದು ಒಳ್ಳೆಯದು ಎಂದರು.
ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದರೂ ಪಕ್ಷಾಂತರ ಪಿಡುಗು ವ್ಯಾಪಕವಾಗಿರುವುದರಿಂದ ಕಾಯದೆ ಬಲಪಡಿಸುವ ಅವಶ್ಯಕತೆಯಿರುವುದರಿಂದ ಲೋಕಸಭಾ ಸ್ಪೀಕರ್ ಓಂಬಿರ್ಲಾರವರು 2019ರ ಡಿಸಂಬರನಲ್ಲಿ ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿ ನಡೆಸಿದ್ದ ಅಖಿಲಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ಹತ್ತನೇ ಪರಿಚ್ಛೇದದ ನಿಯಮಗಳ ಪರಿಶೀಲಿಸಲು ರಾಜಸ್ಥಾನ ರಾಜ್ಯದ ಸ್ಪೀಕರ್ ಡಾ.ಸಿ.ಪಿ.ಜೋಷಿ, ಒಡಿಸ್ಸಾ ರಾಜ್ಯದ ಸ್ಪೀಕರ್ ಡಾ.ಸೂರ್ಯನಾರಾಯಣ ಪಾತ್ರೋ ಹಾಗೂ ನನ್ನನ್ನೂ ಸೇರಿಸಿ ಮೂರು ಜನರ ಸಮಿತಿಯನ್ನು ರಚಿಸಿದ್ದಾರೆ. ಈ ಬಗ್ಗೆ ಚರ್ಚಿಸಲು ಮೇ28 ರಂದು ಬೆಂಗಳೂರಿನಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ ಎಂದು ಸ್ಪೀಕರ್ ಕಾಗೇರಿ ಹೇಳಿದರು. ಕೋವಿಡ್19 ಬಗ್ಗೆ ಸರಕಾರದವರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಬುಲೆಟಿನ್ ಸರಿಯಾಗಿ ನೀಡುತ್ತಿಲ್ಲ, ನಿಖರ ಅಂಕಿ-ಅಂಶಗಳನ್ನು ಹೇಳುತ್ತಿಲ್ಲ ಎಂದು ಪತ್ರಕರ್ತರು ಆಪಾದಿಸಿದರು. ಕೋವಿಡ್19 ಬಗ್ಗೆ ಮುಚ್ಚುಮರೆ ಮಾಡುವಂತಹದ್ದು ಏನೂ ಇಲ್ಲ. ಸರಿಯಾದ ಸ್ಪಷ್ಟವಾದ ಪಾರದರ್ಶಕವಾದ ಮಾಹಿತಿಯನ್ನು ನೀಡುವಂತೆ ರಾಜ್ಯಸರಕಾರಕ್ಕೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ, ಬಿಜೆಪಿ ಪ್ರಮುಖ ರವಿ ಹೆಗಡೆ ಹೂವಿನಮನೆ, ತಹಸೀಲ್ದಾರ ಮಂಜುಳಾ ಭಜಂತ್ರಿ ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಸಿಪಿಐ ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.
ಸಕಾಲಿಕ ಸುದ್ದಿ