ಆದ್ಯೋತ್ ಸುದ್ದಿನಿಧಿ:
ಕೊವಿಡ್ ವೈರಾಣು ಹರಡುವಿಕೆ ತಡೆಯಲು ಅವಶ್ಯವಾದ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕಳೆದ ಎರಡು ತಿಂಗಳಿನಿಂದ ಧ್ವನಿ ಎತ್ತುತ್ತಾ ಬಂದಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ
ರಾಜ್ಯ ಸರಕಾರದ KDLWS ಸಂಸ್ಥೆಯು ಕೊವಿಡ್ ಆಕ್ರಮಿಸಿರುವ ಈ ವಿಪ್ಪತ್ತಿನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಹತ್ತಾರು ಅಕ್ರಮಗಳನ್ನು ಎಸಗುವ ಮೂಲಕ ಸರಕಾರಕ್ಕೆ ಕೊಟ್ಯಂತರರೂ. ನಷ್ಟವುಂಟು ಮಾಡಿದೆ ಎಂದು ರೆಡ್ಡಿ ಆಪಾದಿಸಿದ್ದಾರೆ.
ಕೃಷಿ ಉತ್ಪನ್ನಗಳ ತಯಾರಿಕಾ ಕಂಪನಿ,ವೆಬ್ ಸೈಟ್ ಡಿಸೈನ್ ಮಾಡುವಂತಹ ಕಂಪನಿಯಿಂದ 3ಕೋಟಿ ರೂಗಳ ಪಿಪಿಇ ಕಿಟ್ ಖರೀದಿಸಿದೆ
ಕೊವಿಡ್ ಚಿಕಿತ್ಸೆಗೆ ಅವಶ್ಯಕವಾದ ವೆಂಟಿಲೆಟರ್ ನ್ನು ದೆಹಲಿ ಮೂಲದ ಕಂಪನಿಯಿಂದ 3.88 ಕೋಟಿ ರೂ. ಮೊತ್ತವನ್ನು ಪಾವತಿಸಿ ಖರೀದಿ ಮಾಡಲಾಗಿದೆ. ಈ ವೆಂಟಿಲೆಟರ್ ಹದಿಮೂರು ವರ್ಷದಷ್ಟು ಹಳೆಯದಾಗಿದ್ದು ಈಗಾಗಲೆ ಬಳಕೆಯಲ್ಲಿರುವಂತಹದ್ದಾಗಿದೆ.
2019ರಲ್ಲಿ ಪೂರೈಕೆ ಮಾಡಲಾಗದೆ ನಿಯಮವನ್ನು ಉಲ್ಲಂಘಿಸಿದ್ದ ಚೆನೈನ ಕಂಪನಿಯಿಂದಲೆ ಹೆಚ್ಚಿನ ಬೆಲೆಗೆ ಸ್ಯಾನಿಟೆಸರ್ ಖರೀದಿಸಲಾಗಿದೆ.
ಕೆಲವು ರಾಜ್ಯಗಳ ಆರೋಗ್ಯ ಇಲಾಖೆ ಕಪ್ಪುಪಟ್ಟಿಗೆ ಸೇರಿಸಿದ್ದ ಗುಜರಾತ್ ಮೂಲದ ಕಂಪನಿಯಿಂದ ಗ್ಲುಕೊಸ್ ಖರೀದಿ ಮಾಡಲಾಗಿದೆ.
ಇದಿಷ್ಟೆ ಅಲ್ಲದೆ ಇನ್ನೂ ಹಲವಾರು ಅಕ್ರಮಗಳು ನಡೆದಿದ್ದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷವು ಪುರಾವೆ ಸಹಿತವಾಗಿ ಮೇ 12 ರಂದು ಬ್ರಷ್ಟಾಚಾರ ನಿಗ್ರಹ ದಳಕ್ಕೂ ಹಾಗೂ ಮೇ16 ರಂದು
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಿಗೂ ದೂರು ನೀಡಲಾಗಿದೆ.
ಈ ದೂರಿನನ್ವಯ ಸ್ಥಳಪರಿಶೀಲನೆಗೆ ಮುಂದಾದ ಪಿಎಸಿ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲರು ಸ್ಥಳಪರಿಶೀಲನೆಗೆ ಮುಂದಾದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಡೆಯಾಜ್ಞೆ ನೀಡಿರುವುದು ಸರಿಯಾದ ಕ್ರಮವಲ್ಲ,ಇದರಿಂದ ಅವರು ಬ್ರಷ್ಟಾಚಾರಕ್ಕೆ ಕುಮ್ಮಕ್ಕೂ ಕೊಡುತ್ತಿದ್ದಾರೆ ಎಂಬ ಅನುಮಾನ ಬರುತ್ತದೆ ಇದರಿಂದ ಕಾಗೇರಿಯವರು ಸ್ಪೀಕರ್ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ರವಿಕೃಷ್ಣಾರೆಡ್ಡಿ
ಆಗ್ರಹಿಸಿದ್ದಾರೆ.
ಅಲ್ಲದೆ ಎಚ್.ಕೆ.ಪಾಟೀಲರಿಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
“ಸ್ಪೀಕರ್ ಗೆ ಬಹಿರಂಗ ಸವಾಲು”
ಪಿಎಸಿಗೆ ತಡೆಯಾಜ್ಞೆ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಢೆ ಕಾಗೇರಿಯವರಿಗೆ ರವಿಕೃಷ್ಣಾ ರೆಡ್ಡಿ ಬಹಿರಂಗ ಸವಾಲು ನೀಡಿದ್ದಾರೆ
KDLWS ಸಂಸ್ಥೆಯಲ್ಲಿರವ ಕೆಲವು ಬ್ರಷ್ಟ ಅಧಿಕಾರಿಗಳನ್ನು,ರಾಜಕಾರಣಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪಿಎಸಿ ಸಮಿತಿ ತನಿಖೆಗೆ ಸ್ಪೀಕರ್ ತಡೆಯಾಜ್ಞೆ ನೀಡಿದ್ದಾರೆ ಎನ್ನುವುದು ನನ್ನ ಭಾವನೆ ಒಂದು ವೇಳೆ ಇದು ಸುಳ್ಳಾದರೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿರಸಿ ಮಾರಿಕಾಂಬೆ ದೇವಿಯ ಎದುರು “ನಾನು ಯಾವುದೇ ಒತ್ತಡಕ್ಕೆ ಒಳಗಾಗಿ,ಯಾರನ್ನೋ ರಕ್ಷಿಸುವ ಸಲುವಾಗಿ ಪಿಎಸಿ ಸಮಿತಿಗೆ ತಡೆಯಾಜ್ಞೆ ನೀಡಿಲ್ಲ ಸ್ವಯಂ ಪ್ರೇರಿತವಾಗಿ ಸದಸ್ಯರ ಆರೋಗ್ಯದ ಹಿತದೃಷ್ಠಿಯಿಂದ ತಡೆಯಾಜ್ಞೆ ನೀಡಿದ್ದೇನೆ ಎಂದು ಪ್ರಮಾಣ ಮಾಡಿದರೆ ನಾನು ಅದೇ ಸ್ಥಳದಲ್ಲಿ ನನ್ನದು ತಪ್ಪಾಯಿತು ಎಂದು ಹೇಳಿ ಕೈಮುಗಿದು 50 ಬಸ್ಕಿಯನ್ನು ಹೊಡೆಯುತ್ತೇನೆ ಎಂದು ರವಿಕೃಷ್ಣಾ ರೆಡ್ಡಿಯವರು ಬಹಿರಂಗ ಸವಾಲು ನೀಡಿದ್ದಾರೆ