ಕೊರೊನಾ ತಡೆಗೆ ಸ್ಪೀಕರ್ ರಿಂದ ಅಧಿಕಾರಿಗಳ ಸಭೆ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಕೊರೊನಾ ತಡೆಗಟ್ಟುವ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಸಭೆ ನಡೆಸಿದರು.

ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕಾಗೇರಿ, ಕೊರೊನಾ ತಡೆಗಟ್ಟುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದು ಆದರೆ ಸಾರ್ವಜನಿಕರ ಸಹಕಾರವಿಲ್ಲದೆ ಇದು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು. ದೇಶಾದ್ಯಂತ ಲಾಕ್ ಡೌನ್ ಘೋಷಣೆ ಯಾಗಿದೆ. ಜನರಿಗೆ ಅವಶ್ಯಕವಾಗಿರುವ ಅಗತ್ಯವಸ್ತುಗಳನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಅನಕೂಲವಾಗುವಂತೆ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ನೇಮಕ ಮಾಡಲಾಗಿದೆ‌. ವೆಂಟಿಲೇಟರ್ ಬೇಡಿಕೆಯನ್ನು ಇಡಲಾಗಿದೆ. ಒಟ್ಟಾರೆ ಸಮರೋಪಾದಿಯಲ್ಲಿ ಸಿದ್ದತೆಯನ್ನು ಸರಕಾರ ಮಾಡುತ್ತಿದೆ ಎಂದು ಹೇಳಿದರು.


ಸ್ಥಳೀಯ ಪುಸ್ತಕ ವ್ಯಾಪಾರಿ ಉದಯ ರಂಗೈನ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದುಸಾವಿರ ರೂಪಾಯಿ ಮೌಲ್ಯದ ಚೆಕ್ ನ್ನು ಸ್ಪೀಕರ್ ಗೆ ನೀಡಿದರು. ಹಿಂದೆ ಪುಸ್ತಕ ವ್ಯಾಪಾರದ ಜೊತೆಗೆ ಎಲ್ಲಾ ದಿನಪತ್ರಿಕೆಗಳ ವಿತಕರಾಗಿದ್ದ ರಂಗೈನ್ ಈಗ ಪುಸ್ತಕ ವ್ಯಾಪಾರಕ್ಕೆ ಸೀಮಿತರಾಗಿದ್ದಾರೆ. ಕೊರೊನಾ ತಡೆಗಾಗಿ ದೇಶ ಲಾಕ್ ಡೌನ್ ಆಗಿದ್ದು ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಇಂತಹ ಸಮಯದಲ್ಲಿ ಸಹಾಯ ನಿಧಿ ನೀಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ನಾನು ಒಂದಿಷ್ಟು ಸಹಾಯ ಮಾಡಬೇಕು ಎಂದು ಈ ಪುಟ್ಟ ಮೊತ್ತವನ್ನು ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ನೀಡಿದ್ದೇನೆ ಎಂದು ಉದಯ ರಂಗೈನ್ ಆದ್ಯೋತ ನ್ಯೂಸ್ ಗೆ ತಿಳಿಸಿದ್ದಾರೆ.

About the author

Adyot

Leave a Comment